Corona 3rd Wave: ರಾಜ್ಯಕ್ಕೆ 3ನೇ ಕೊರೋನಾ ಅಲೆ ಭೀತಿ; ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಸೂಚಿಸಿದ ಗೃಹ ಸಚಿವ

ಗಡಿಭಾಗಗಳಾದ ಬೆಳಗಾವಿ, ಬೀದರ್, ವಿಜಯಪುರ, ಕೊಡಗು, ಮೈಸೂರು, ಚಾಮರಾಜನಗರ, ಕಾರವಾರ, ದಕ್ಷಿಣ ಕನ್ನಡ ಸೇರಿದಂತೆ ಎಲ್ಲ ಗಡಿ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರೊಂದಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಚರ್ಚಿಸಿದರು.

ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಿಡಿಯೋ ಸಂವಾದ

ಪೊಲೀಸ್ ಅಧಿಕಾರಿಗಳೊಂದಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಿಡಿಯೋ ಸಂವಾದ

 • Share this:
  ಬೆಂಗಳೂರು(ಜು.13): ಸದ್ಯ ಕರ್ನಾಟಕದಲ್ಲಿ ಎರಡನೇ ಅಲೆ ಆತಂಕ ಕಡಿಮೆಯಾಗಿದ್ದು, ಜನರು ಕೊಂಚ ನಿರಾಳರಾಗಿದ್ದಾರೆ. ಆದರೆ ಈ ಬೆನ್ನಲ್ಲೇ ರಾಜ್ಯಕ್ಕೆ ಮೂರನೇ ಕೊರೋನಾ ಅಲೆ ಅಪ್ಪಳಿಸುವ ಭೀತಿ ಎದುರಾಗಿದೆ. ಹೌದು, ಆಗಸ್ಟ್ ಕೊನೆಯ ವಾರದಲ್ಲಿ ಕರ್ನಾಟಕಕ್ಕೆ ಮೂರನೇ ಕೊರೋನಾ ಅಲೆ ಬರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. 

  ಸೋಮವಾರ ಗೃಹಸಚಿವ ಬಸವರಾಜ್ ಬೊಮ್ಮಾಯಿ ಎಲ್ಲಾ ಎಸ್​ಪಿಗಳ ಜೊತೆ ವಿಡಿಯೋ ಸಂವಾದ ನಡೆಸಿ, ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಮಹಾರಾಷ್ಟ್ರ, ಕೇರಳ ರಾಜ್ಯಗಳ ಮೂಲಕ ಕರ್ನಾಟಕ ಪ್ರವೇಶ ಮಾಡುವ ಜನರು ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಿ. ಆರ್ ಟಿ ಪಿ ಸಿ ಆರ್ ನೆಗೆಟಿವ್ ವರದಿ ನೀಡುವಂತೆ ಸೂಚಿಸಿ ಎಂದು ರಾಜ್ಯದ ಗಡಿ ಜಿಲ್ಲೆಗಳ ಎಸ್ಪಿಗಳಿಗೆ ಬೊಮ್ಮಾಯಿ ಆದೇಶಿಸಿದ್ದಾರೆ.

  ಜೊತೆಗೆ, ರಾಜ್ಯ ಪ್ರವೇಶಿಸುವವರಲ್ಲಿ ಯಾರಿಗಾದರೂ ಸೋಂಕಿನ ಲಕ್ಷಣ ಕಂಡುಬಂದರೆ ಅಂಥವರ ಗಂಟಲು ದ್ರವ ಪರೀಕ್ಷೆಗೆ ಗಡಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಿ. ಇದಕ್ಕಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಅವರ ಸಹಾಯ ಪಡೆಯಿರಿ. ಆದರೆ ಗಡಿಭಾಗಗಳಲ್ಲಿ ಸೋಂಕಿತರು ಹೊರ ರಾಜ್ಯಗಳಿಂದ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಿ ಎಂದು ಸೂಚಿಸಿದ್ದಾರೆ.

  ಇದನ್ನೂ ಓದಿ:ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಇಂದು ರಾಜ್ಯ ಭೇಟಿ: ಮೇಕೆದಾಟು ವಿಚಾರ ಪ್ರಸ್ತಾಪಿಸುತ್ತಾರಾ ಬಿಎಸ್​ವೈ?

  ಕಳೆದ ಬಾರಿ ಮಹಾರಾಷ್ಟ್ರ ಮತ್ತು ಕೇರಳದಿಂದಲೇ ರಾಜ್ಯದಲ್ಲಿ ಸೋಂಕ ಹೆಚ್ಚಾಗಲು ಕಾರಣವಾಯಿತು.  ಈ ಬಾರಿ ಹಾಗೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಬಸ್ ಪ್ರಯಾಣಿಕರನ್ನು ರ್ಯಾಂಡಮ್ ಆಗಿ ತಪಾಸಣೆ ಮಾಡಿ ಎಂದು ಖಡಕ್​ ಆದೇಶ ನೀಡಿದರು.

  ಗಡಿಭಾಗಗಳಾದ ಬೆಳಗಾವಿ, ಬೀದರ್, ವಿಜಯಪುರ, ಕೊಡಗು, ಮೈಸೂರು, ಚಾಮರಾಜನಗರ, ಕಾರವಾರ, ದಕ್ಷಿಣ ಕನ್ನಡ ಸೇರಿದಂತೆ ಎಲ್ಲ ಗಡಿ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರೊಂದಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಚರ್ಚಿಸಿದರು.

  ಈ ಸಂದರ್ಭದಲ್ಲಿ ಬೊಮ್ಮಾಯಿ ಜೊತೆ  ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್​, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪ್ರತಾಪರೆಡ್ಡಿ ಇದ್ದರು.

  ಮತ್ತೊಂದು ಡೆಲ್ಟಾ ಪ್ಲಸ್​  ಪ್ರಕರಣ ಪತ್ತೆ

  ರಾಜ್ಯದಲ್ಲಿ ಇನ್ನೊಂದು ಡೆಲ್ಟಾ ಪ್ಲಸ್ ಸೋಂಕು‌ ಪತ್ತೆಯಾಗಿದ್ದು, ಎಲ್ಲರಲ್ಲೂ ಆತಂಕ ಮೂಡಿಸಿದೆ. ಸದ್ಯ ಡೆಲ್ಟಾ ಪ್ಲಸ್​ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಹಲವು ದಿನಗಳಿಂದ ಡೆಲ್ಟಾ ಪ್ಲಸ್ ಸೋಂಕು ಕಂಡುಬಂದಿರಲಿಲ್ಲ.  ಮೈಸೂರು, ಬೆಂಗಳೂರಿನಲ್ಲಿ‌ ಈ‌ ಹಿಂದೆ ಡೆಲ್ಟಾ ಪ್ಲಸ್ ಸೋಂಕು‌ ಪತ್ತೆಯಾಗಿತ್ತು. ಅವರಿಬ್ಬರೂ ಸೋಂಕಿನಿಂದ ಮುಕ್ತರಾದ ಬಳಿಕ ಇನ್ನೊಂದು ಡೆಲ್ಟಾ ಪ್ಲಸ್ ಪ್ರಕರಣ ಪತ್ತೆಯಾಗಿದೆ.

  ಬೆಂಗಳೂರಿನ 60 ವರ್ಷದ ಮಹಿಳೆಗೆ ಡೆಲ್ಟಾ ಪ್ಲಸ್​ ಸೋಂಕು ದೃಢಪಟ್ಟಿದೆ. ಈಕೆ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆದು‌ ಡಿಸ್ಚಾರ್ಜ್ ಆಗಿರುವ ಮಹಿಳೆ ಎಂದು ತಿಳಿದು ಬಂದಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ರೂ ಸೋಂಕು ತಗುಲಿದೆ.

  ಇದನ್ನೂ ಓದಿ:Astrology: ಈ ಉದ್ಯೋಗದಲ್ಲಿರುವ ವೃಶ್ಚಿಕರಾಶಿಯರಿಗೆ ಇಂದು ಅದೃಷ್ಟ; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

  ಡೆಲ್ಟಾ ಪ್ಲಸ್ ಮೂಲದ ಬಗ್ಗೆ ಆತಂಕ ಹೆಚ್ಚಿದ್ದು,  ಸೋಂಕಿತೆಯ  ಸಂಪರ್ಕಿತರಿಗಾಗಿ ಹುಡುಕಾಟ ನಡೆಸಿದ್ದಾರೆ.  3 ಪ್ರಾಥಮಿಕ ಸಂಪರ್ಕಿತರು, 16 ಜನ ದ್ವಿತೀಯ ಸಂಪರ್ಕಿತರು ಪತ್ತೆಯಾಗಿದ್ದಾರೆ. ಸಂಪರ್ಕಿತರನ್ನು ಸ್ಯಾಂಪಲ್ ಗಳನ್ನು ಜಿನೆಟಿಕ್ ಸೀಕ್ವೆನ್ಸ್ ಟೆಸ್ಟ್ ಗೆ ರವಾನೆ ಮಾಡಲಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:Latha CG
  First published: