Coronavirus: ಮಹಾರಾಷ್ಟ್ರದಲ್ಲಿ ಕೊರೊನಾ ಆರ್ಭಟ - 45ಕ್ಕೆ ಏರಿದ ಡೆಲ್ಟಾ ಪ್ಲಸ್ ಪ್ರಕರಣಗಳು

Maharashtra Corona Cases: ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ಮಹಾರಾಷ್ಟ್ರವು ಕೊರೊನಾ ಮೂರನೇ ಅಲೆಯ ಭೀತಿಯನ್ನು ಎದುರಿಸುತ್ತಿದೆ. ಅಲ್ಲದೇ ಸರ್ಕಾರ ಕೂಡ ಈಗಾಗಲೇ ಅದಕ್ಕೆ ಬೇಕಾಗಿರುವ ಸಿದ್ಧತೆ ಮಾಡಿಕೊಂಡಿದೆ ಎಂದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಶದಲ್ಲಿ ಈಗಾಗಲೇ ಕೊರೊನಾ ಮೂರನೇ ಅಲೆ ಭೀತಿ ಎದುರಾಗಿದೆ.  ಕೆಲ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಕೆಲವೆಡೆ ವೀಕೆಂಡ್  ಕರ್ಫ್ಯೂ ಸೇರಿದಂತೆ ನೈಟ್ ಕರ್ಫ್ಯೂಗಳನ್ನು ಜಾರಿ ಮಾಡಿವೆ. ಇದರ ಮಧ್ಯೆ ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ( Delta Plus) ರೂಪಾಂತರ ಪ್ರಕರಣಗಳ ಸಂಖ್ಯೆ 45ಕ್ಕೆ ಏರಿಕೆಯಾಗಿದೆ ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ತೋಪೆ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಮೊದಲು 21 ಪ್ರಕರಣಗಳಿದ್ದ ಡೆಲ್ಟಾ ಪ್ಲಸ್  ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ರಾಜ್ಯದ 27 ಪುರುಷರಲ್ಲಿ ಮತ್ತು 18 ಮಹಿಳೆಯರಲ್ಲಿ ಈ ಡೆಲ್ಟಾ ಪ್ಲಸ್ ರೂಪಾಂತರ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.

ನಾವು ರೋಗಿಗಳಿಂದ ಲಸಿಕೆ  ಕುರಿತಂತೆ ಮತ್ತು ಅವರ ಆರೋಗ್ಯ ಸ್ಥಿತಿ ಗತಿಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ,  ಸೋಂಕು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿವೆ. ಸದ್ಯಕ್ಕೆ ಯಾವುದೇ ಆತಂಕ ಬೇಡ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಆಗಸ್ಟ್​ 15ರಿಂದ ಸಂಚರಿಸಲಿರುವ ಮುಂಬೈ ಲೋಕಲ್​ ರೈಲುಗಳು; ಈ ಪ್ರಯಾಣಿಕರಿಗೆ ಮಾತ್ರ ಅವಕಾಶ..!

ದೇಶದ ಬೇರೆ  ರಾಜ್ಯಗಳಿಗೆ ಹೋಲಿಸಿದರೆ ಮಹಾರಾಷ್ಟ್ರ ಹೆಚ್ಚು ಕೊರೊನಾ ಪೀಡಿತ ರಾಜ್ಯ.  45 ಡೆಲ್ಟಾ ಪ್ಲಸ್ ಪ್ರಕರಣಗಳು ಜಲಗಾಂವ್ (13), ರತ್ನಗಿರಿ (11), ಮುಂಬೈ (6), ಥಾಣೆ (5), ಪುಣೆ (3), ಮತ್ತು ಪಾಲ್ಘರ್ , ಸಿಂಧುದುರ್ಗ, ಸಾಂಗ್ಲಿ, ನಂದೂರ್ಬಾರ್, ಔರಂಗಾಬಾದ್, ಕೊಲ್ಹಾಪುರ, ಮತ್ತು ಬೀಡ್ ನಲ್ಲಿ ತಲಾ ಒಬ್ಬರಲ್ಲಿ ಕಾಣಿಸಿಕೊಂಡಿದೆ.

ಕೊರೊನಾ ಸೋಂಕಿಗಿಂತಲೂ ಅತ್ಯಂತ ವೇಗವಾಗಿ ಮತ್ತು  ಹೆಚ್ಚು ಹರಡುವ ಡೆಲ್ಟಾ ರೂಪಾಂತರ  ಭಾರತದಲ್ಲಿ ಮೊದಲು ಕಂಡುಬಂದಿದ್ದು, ಈಗ ಡೆಲ್ಟಾ ಪ್ಲಸ್ ಅಥವಾ 'AY .1' ರೂಪಾಂತರ ಎಂದು ಮತ್ತಷ್ಟು ರೂಪಾಂತರಗೊಂಡಿದ್ದು, ಇದು ಜನರಲ್ಲಿ ಆತಂಕ ಮೂಡಿಸಿದೆ.

ಡೆಲ್ಟಾ ಪ್ಲಸ್ ರೂಪಾಂತರವು ಈ ಕೆಳಗಿನ ಗುಣಲಕ್ಷಣಗಳನ್ನು ಹೊಂದಿದೆ:
* ಸೋಂಕು ಹರಡುವ ಪ್ರಮಾಣ ಹೆಚ್ಚಿರುತ್ತದೆ.
* ಶ್ವಾಸಕೋಶದ ಸಮಸ್ಯೆ ಹೆಚ್ಚಾಗುತ್ತದೆ. ಉಸಿರುಗಟ್ಟಿಸುತ್ತದೆ
* ಮೊನೊಕ್ಲೋನಲ್ ಆಂಟಿಬಾಡಿ ಪ್ರತಿಕ್ರಿಯೆಯಲ್ಲಿ ಬಹಳ ಕಡಿಮೆ ಮಾಡಿ, ದೇಹವನ್ನು ನಿಶ್ಯಕ್ತಿ ಮಾಡುತ್ತದೆ.

ಇದನ್ನೂ ಓದಿ: ಇಸ್ಲಾಮಿಕ್ ಹೊಸ ವರ್ಷ ಎಂದರೇನು? ಇದರ ಆಚರಣೆ ಹೇಗೆ?

ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್ ಡೌನ್?

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾದಲ್ಲಿ ಲಾಕ್‌ಡೌನ್  ಜಾರಿ ಮಾಡಲಾಗುವುದು  ಎಂದು ಎಚ್ಚರಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ಮಹಾರಾಷ್ಟ್ರವು  ಕೊರೊನಾ ಮೂರನೇ ಅಲೆಯ ಭೀತಿಯನ್ನು ಎದುರಿಸುತ್ತಿದೆ. ಅಲ್ಲದೇ ಸರ್ಕಾರ ಕೂಡ ಈಗಾಗಲೇ ಅದಕ್ಕೆ ಬೇಕಾಗಿರುವ ಸಿದ್ಧತೆ ಮಾಡಿಕೊಂಡಿದೆ ಎಂದಿದ್ದಾರೆ.

ಜೊತೆಗೆ ಕೊರೊನಾ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವ ಮೂಲಕ ಜನರು ಮೂರನೇ ಅಲೆ ಬರುವುದನ್ನ ತಡೆಯಬಹುದು. ಇದು ಜನರ ಕೈನಲ್ಲಿದೆ ಎಂದಿದ್ದಾರೆ. ವೈರಸ್ ಇನ್ನು ತಮ್ಮ ಸುತ್ತಲೂ ಇದೆ. ಈಗಾಗಲೇ ಕಳೆದು ಒಂದು ವರ್ಷದಿಂದ ನೋವನ್ನು ಅನುಭವಿಸಿ ಸಾಕಾಗಿದೆ ನಿಮಗೆ. ನಿಮ್ಮ ತಾಳ್ಮೆ ಕಡಿಮೆ ಆಗುತ್ತಿದೆ ಎಂಬುದರ ಅರಿವು ನಮಗೆ. ಆದರ ದಯವಿಟ್ಟು ತಾಳ್ಮೆ ಕಳೆದುಕೊಳ್ಳಬೇಡಿ. ಎಲ್ಲವು ಸರಿಯಾಗುತ್ತದೆ ಎಂದು ಜನರಲ್ಲಿ ಮುಖ್ಯಮಂತ್ರಿ ಠಾಕ್ರೆ ಮನವಿ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ  ಭಾನುವಾರ 5,508 ಹೊಸ  ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಇನ್ನು ಆ ರಾಜ್ಯದಲ್ಲಿ ಒಟ್ಟು  ಪ್ರಕರಣಗಳ ಸಂಖ್ಯೆ 63,53,327  ಏರಿದೆ. 71,510 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ 151 ಜನರು ಕೊರೊನಾ ಸಂಬಂಧಿತ ರೋಗಕ್ಕೆ ಬಲಿಯಾಗಿದ್ದು ಒಟ್ಟಾರೆಯಾಗಿ 1,33,996 ಜನರು ಬಲಿಯಾಗಿದ್ದಾರೆ. ಇನ್ನು ಒಟ್ಟು 4,895 ರೋಗಿಗಳು ಗುಣಮುಖರಾಗಿ ಹೊರಗೆ ಬಂದಿದ್ದಾರೆ. ಅಲ್ಲದೇ ಚೇತರಿಸಿಕೊಂಡವರ ಸಂಖ್ಯೆ ಹೆಚ್ಚಳವಾಗಿದೆ. ರಾಜ್ಯದಲ್ಲಿ ಇದುವರೆಗೂ 61,44,388 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಮಹಾರಾಷ್ಟದಲ್ಲಿ ಸೋಂಕು ಹೆಚ್ಚಾದ ಹಿನ್ನೆಲೆ ಕರ್ನಾಟಕದಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಗಡಿ ಜಿಲ್ಲೆಯಲ್ಲಿ ಹೆಚ್ಚಿನ ಭದ್ರತೆ ಮಾಡಲಾಗಿದೆ.
Published by:Sandhya M
First published: