ಕರ್ಫ್ಯೂ ಉಲ್ಲಂಘಿಸಿದವರಿಗೆ ರಾಮನಾಮ ಬರೆಯುವ ಶಿಕ್ಷೆ; ವಿವಾದಕ್ಕೆ ಗುರಿಯಾದ ಪೊಲೀಸರ ನಡೆ!

ಕರ್ಫ್ಯೂ ಉಲ್ಲಂಘಿಸಿ ಮನೆಯಿಂದ ಹೊರ ಬಂದವರಿಗೆ 30 ನಿಮಿಷಗಳ ಕಾಲ ರಾಮ.. ರಾಮ.. ಎಂದು ಬರೆಯುವಂತೆ ಶಿಕ್ಷೆ ನೀಡುತ್ತಿದ್ದಾರಂತೆ. ಪೊಲೀಸ್​ ಅಧಿಕಾರಿಯ ಈ ನಡೆಯ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭೂಪಾಲ್​: ಕೊರೋನಾ 2ನೇ ಅಲೆ ಅಬ್ಬರಿಸುತ್ತಿರುವ ಹಿನ್ನೆಲೆ ಬಹುತೇಕ ರಾಜ್ಯಗಳಲ್ಲಿ ಕೊರೋನಾ ಕರ್ಫ್ಯೂ, ಲಾಕ್​​ಡೌನ್​ ಹೇರಲಾಗಿದೆ. ಕಠಿಣ ನಿಯಮಗಳನ್ನು ಉಲ್ಲಂಘಿಸಿ ರಸ್ತೆಗಿಳಿಯುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಲಾಠಿ ರುಚಿ ತೋರಿಸುವುದು, ರಸ್ತೆಯಲ್ಲೇ ಬಸ್ಕಿ ಹೊಡೆಸುವುದು, ವಾಹನ ಸೀಜ್​​ ಮಾಡುವುದನ್ನು ನೋಡಿದ್ದೇವೆ. ಆದರೆ ಮಧ್ಯಪ್ರದೇಶದ ಪೊಲೀಸರು ಕರ್ಫ್ಯೂ ಉಲ್ಲಂಘಿಸಿ ರಸ್ತೆಗಿಳಿದವರಿಗೆ ರಾಮ.. ರಾಮ.. ಎಂದು 30 ನಿಮಿಷಗಳ ಕಾಲ ಬರೆಯುವ ಶಿಕ್ಷೆ ನೀಡುತ್ತಿದ್ದಾರೆ. ಸತ್ನಾ ಜಿಲ್ಲೆಯ ಸಬ್​ ಇನ್ಸ್​​ಪೆಕ್ಟರ್​ ಅವರ ಈ ರಾಮನಾಮ ಶಿಕ್ಷೆ ಸದ್ಯ ವಿವಾದಕ್ಕೆ ಗುರಿಯಾಗಿದೆ.

ಕೊಲಗಾವನ್​​ ಠಾಣೆಯ ಪೊಲೀಸ್​ ಇನ್ಸ್​​ಪೆಕ್ಟರ್​ ಸಂತೋಷ್​ ಸಿಂಗ್​ ಈ ರೀತಿ ರಾಮ ನಾಮ ಬರೆಸುತ್ತಿದ್ದಾರೆ. ಕರ್ಫ್ಯೂ ಉಲ್ಲಂಘಿಸಿ ಮನೆಯಿಂದ ಹೊರ ಬಂದವರಿಗೆ 30 ನಿಮಿಷಗಳ ಕಾಲ ರಾಮ.. ರಾಮ.. ಎಂದು ಬರೆಯುವಂತೆ ಶಿಕ್ಷೆ ನೀಡುತ್ತಿದ್ದಾರಂತೆ. ಪೊಲೀಸ್​ ಅಧಿಕಾರಿಯ ಈ ನಡೆಯ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೊಲೀಸರ ಈ ನಡೆಯಿಂದ ಅನ್ಯಧರ್ಮದವರಿಗೆ ಇರಿಸುಮುರಿಸಾಗಬಹುದು ಎಂಬ ಟೀಕೆಗಳು ಕೇಳಿ ಬಂದಿದೆ. ಇದನ್ನು ಸಬ್​ ಇನ್ಸ್​ಪೆಕ್ಟರ್​ ಸಂತೋಷ್​ ಸಿಂಗ್​ ಅಲ್ಲಗಳೆದಿದ್ದಾರೆ.

ಮಧ್ಯಪ್ರದೇಶ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಹೇರಿರುವ ಕರ್ಫ್ಯೂ ಕಟ್ಟುನಿಟ್ಟಿನ ಜಾರಿಗೆ ನಾವು ಶ್ರಮಿಸುತ್ತಿದ್ದೇವೆ. ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ಹಾಕಿ, ವಾಹನಗಳನ್ನು ಸೀಜ್​ ಮಾಡುತ್ತಿದ್ದೇವೆ. ರಾಮ..ರಾಮ.. ಎಂದು 30 ನಿಮಿಷಗಳ ಕಾಲ ಬರೆಸಿದ್ದು ನಿಜ. ಆದರೆ ಹೀಗೆ ಬರೆಸುವ ಮುನ್ನ ವ್ಯಕ್ತಿಯ ಹೆಸರನ್ನು ಕೇಳುತ್ತಿದ್ದೆ. ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗದಂತೆ ನಡೆಸಿಕೊಳ್ಳಲಾಗಿದೆ. ಮನೆಯಿಂದ ಹೊರದಂತೆ ಯುವಕರಿಗೆ ಮನವರಿಕೆ ಮಾಡಿಕೊಡಲು ದೇವರನಾಮ ಬರೆಸಿದ್ದೇನೆ ಅಷ್ಟೇ. ಯಾರನ್ನೂ ರಾಮನಾಮ ಬರೆಯಲು ಒತ್ತಾಯಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಮರದ ಮೇಲೆಯೇ 11 ದಿನಗಳ ಕಾಲ ಐಸೋಲೇಷನ್​​ಗೆ ಒಳಗಾದ ಬಡ ಯುವಕ!

ಇನ್ನು ರಾಜ್ಯದಲ್ಲಿ ಲಾಕ್​ಡೌನ್​ ಜಾರಿಯಾದ ಬಳಿಕ ರಸ್ತೆಗಿಳಿದವರ ಮೇಲೆ ಪೊಲೀಸರು ಲಾಠಿ ಪ್ರಯೋಗಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಹೈಕೋರ್ಟ್​ ಸಹ ಜನರನ್ನು ಹೊಡೆಯಬೇಡಿ ಎಂದಿತ್ತು. ಕೋರ್ಟ್​ ಅಭಿಪ್ರಾಯದ ಬಳಿಕ ಬೆಂಗಳೂರು ನಗರ ಪೊಲೀಸ್​ ಕಮಿಷನರ್​ ಕಮಲ್​ ಪಂತ್​ ಜನರನ್ನು ಹೊಡೆಯದಂತೆ ತನ್ನ ಸಿಬ್ಬಂದಿಗೆ ಸೂಚಿಸಿದ್ದರು. ಕೊರೋನಾ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ವಿನಾಕಾರಣ ಮನೆಯಿಂದ ಹೊರ ಬರದೆ ಸುರಕ್ಷಿತವಾಗಿರಬೇಕು.
Published by:Kavya V
First published: