ಲಾಕ್​ಡೌನ್​ನಿಂದ ಕೊಡಗಿನ ಪ್ರವಾಸೋದ್ಯಮಕ್ಕೆ ಬರೋಬ್ಬರಿ 300 ಕೋಟಿ ರೂ ನಷ್ಟ?

ಪ್ರವಾಸೋದ್ಯಮವನ್ನೇ ನಂಬಿದ್ದ 30 ಸಾವಿರಕ್ಕೂ ಹೆಚ್ಚು ಕುಟುಂಬಗಳು ಅತಂತ್ರ ಸ್ಥಿತಿ ತಲುಪಿ ತೀವ್ರ ಸಂಕಷ್ಟ ಎದುರಿಸುತ್ತಿವೆ. ಹೊಟೇಲ್, ರೆಸಾರ್ಟ್ ಮತ್ತು ಹೋಂಸ್ಟೇ ಮಾಲೀಕರು ಕೂಡ ಸಮಸ್ಯೆಗೆ ಸಿಲುಕಿದ್ದಾರೆ.

news18-kannada
Updated:May 15, 2020, 6:13 PM IST
ಲಾಕ್​ಡೌನ್​ನಿಂದ ಕೊಡಗಿನ ಪ್ರವಾಸೋದ್ಯಮಕ್ಕೆ ಬರೋಬ್ಬರಿ 300 ಕೋಟಿ ರೂ ನಷ್ಟ?
ಕೊಡಗಿನ ಒಂದು ಪ್ರವಾಸಿ ತಾಣ
  • Share this:
ಕೊಡಗು: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶವೇ ಲಾಕ್‍ಡೌನ್ ಆಗಿದೆ. ಪರಿಣಾಮ ಪ್ರವಾಸೋದ್ಯಮವು ಸಂಪೂರ್ಣ ಬಂದ್ ಆಗಿದೆ. ಆದರೆ ಪ್ರವಾಸೋದ್ಯಮವನ್ನೇ ನಂಬಿ ನಡೆಯುತ್ತಿದ್ದ ಹೊಟೇಲ್, ರೆಸಾರ್ಟ್ ಮತ್ತು ಹೋಂಸ್ಟೇ ಉದ್ಯಮ ಸಂಪೂರ್ಣ ನಲುಗಿ ಹೋಗಿದೆ. ಅದರಲ್ಲೂ ಭಾರತದ ಸ್ಕಾಟ್‌ಲ್ಯಾಂಡ್, ದಕ್ಷಿಣ ಭಾರತದ ಕಾಶ್ಮೀರ ಎಂದೆಲ್ಲಾ ಕರೆಸಿಕೊಳ್ಳುವ ಕೊಡಗು ಸಂಪೂರ್ಣ ಪ್ರವಾಸೋದ್ಯಮವನ್ನೇ ನಂಬಿ ನಡೆಯುಯುವ ಜಿಲ್ಲೆ. ಆದರೆ ಲಾಕ್‍ಡೌನ್ ನಂತರ ಪ್ರವಾಸೋದ್ಯಮ, ಹೊಟೇಲ್ ರೆಸಾರ್ಟ್ ರೆಸ್ಟೋರೆಂಟ್​ಗಳು ಬಂದ್ ಆದ ಪರಿಣಾಮ ಕೊಡಗು ಜಿಲ್ಲೆಯೊಂದರಲ್ಲೇ ಬರೋಬ್ಬರಿ 300 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿರುವ ಅಂದಾಜು ಮಾಡಲಾಗಿದೆ.

ಪ್ರವಾಸೋದ್ಯಮವನ್ನೇ ನಂಬಿದ್ದ 30 ಸಾವಿರಕ್ಕೂ ಹೆಚ್ಚು ಕುಟುಂಬಗಳು ಅತಂತ್ರ ಸ್ಥಿತಿ ತಲುಪಿ ತೀವ್ರ ಸಂಕಷ್ಟ ಎದುರಿಸುತ್ತಿವೆ. ಹೊಟೇಲ್, ರೆಸಾರ್ಟ್ ಮತ್ತು ಹೋಂಸ್ಟೇ ಮಾಲೀಕರು ಕೂಡ ಸಮಸ್ಯೆಗೆ ಸಿಲುಕಿದ್ದಾರೆ. ಹೊಟೇಲ್ ರೆಸಾರ್ಟ್ ಮತ್ತು ಹೋಂಸ್ಟೇಗಳನ್ನು ಪುನಃ ಪ್ರಾರಂಭಿಸುವುದಕ್ಕೆ ಅವಕಾಶ ನೀಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Nirmala Sitharaman - 20 ಲಕ್ಷ ಕೋಟಿ ರೂ ಪ್ಯಾಕೇಜ್​ನಲ್ಲಿ ಕೃಷಿಗೆಷ್ಟು ಪಾಲು? ಇಲ್ಲಿವೆ ಮುಖ್ಯಾಂಶಗಳು

ಆದರೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ದುಡಿಮೆಗಿಂತ ಜನರ ಆರೋಗ್ಯ ಮುಖ್ಯ. ಹೀಗಾಗಿ ಸದ್ಯಕ್ಕೆ ಯಾವುದೇ ಕಾರಣಕ್ಕೂ ಹೊಟೇಲ್, ರೆಸಾರ್ಟ್ ಮತ್ತು ಹೋಂಸ್ಟೇಗಳನ್ನು ತೆರೆಯಲು ಬಿಡುವುದಿಲ್ಲ. ಅದಕ್ಕೆ ಮಾಲೀಕರು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. ಹೊಟೇಲ್, ರೆಸಾರ್ಟ್ ಮತ್ತು ಹೋಂಸ್ಟೇಗಳನ್ನು ನಂಬಿದ್ದ ಕಾರ್ಮಿಕರಿಗೆ ಕಿಟ್ ಅಥವಾ ಪರಿಹಾರ ಕೊಡಿಸಲು ಮಾತನಾಡುತ್ತೇನೆ ಎಂದು ಇದೇ ವೇಳೆ ಅವರು ಭರವಸೆ ನೀಡಿದರು.

ವರದಿ: ರವಿ ಎಸ್. ಹಳ್ಳಿ

First published: May 15, 2020, 6:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading