ಕೊರೋನಾ ಕಾರಣದಿಂದ 100 ದಿನ ರಜೆ ಕೇಳಿ ಡಿಜಿ, ಐಜಿಪಿಗೆ ಪೊಲೀಸ್ ಕಾನ್ಸ್​ಟೇಬಲ್ ಪತ್ರ; ತಮಾಷೆಗೆ ಬರೆದಿದ್ದು ಎಂದ ಸಿಬ್ಬಂದಿ

ರಜೆ ಕೋರಿರುವ ಪತ್ರ ವೈರಲ್​ ಆಗುತ್ತಿದ್ದಂತೆ ತಮಾಷೆಗಾಗಿ ಈ ಪತ್ರ ಬರೆದಿದ್ದಾಗಿ ಕಾನ್ಸ್​ಟೇಬಲ್ ಪ್ರಶಾಂತ್ ಸ್ಪಷ್ಟನೆ ನೀಡಿದ್ದಾರೆ. ಸಹ ಸಿಬ್ಬಂದಿ ಜೊತೆಗೂಡಿ ತಮಾಷೆಗಾಗಿ ಹೀಗೆ ಪತ್ರ ಬರೆದಿದ್ದಾರೆ. ಆದರೆ, ವಾಸ್ತವವಾಗಿ ಈ ಪತ್ರವನ್ನು ಪೊಲೀಸ್ ಮಹಾನಿರ್ದೇಶಕರಿಗೆ ಬರೆದಿದ್ದಲ್ಲ ಎಂದು ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕೂಡ ಹೇಳಿದ್ದಾರೆ. 

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಕೋಲಾರ: ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಹಾಗೆಯೇ ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಮಾಡಿವೆ. ಏತನ್ಮಧ್ಯೆ, ಪೊಲೀಸ್ ಕಾನ್ಸ್​ಟೇಬಲ್ ಒಬ್ಬರು ಕೊರೋನಾ ಆತಂಕ ಹೆಚ್ಚಾಗಿರುವ ಕಾರಣಕ್ಕೆ ನೂರು ದಿನ ಅಥವಾ ಅದಕ್ಕಿಂತ ಹೆಚ್ಚಿನ ದಿನ ರಜೆ ನೀಡಬೇಕು ಎಂದು ಕೋರಿ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಈ ಪತ್ರ ವೈರಲ್ ಆಗುತ್ತಿದ್ದಂತೆ ತಮಾಷೆಗಾಗಿ ಹೀಗೆ ಮಾಡಿದ್ದು ಎಂದು ಕಾನ್ಸ್​ಟೇಬಲ್​ ಸ್ಪಷ್ಟನೆ ನೀಡಿದ್ದಾರೆ.

  ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಪೋಲಿಸ್ ಠಾಣೆಯ ಪೇದೆ ಪ್ರಶಾಂತ್ ಎಂಬುವರು ರಜೆ ಕೇಳಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಸದ್ಯ ಸಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

  ರಾಜ್ಯದಲ್ಲಿ ಕೊರೋನಾ ಪರಿಣಾಮ ತ್ರೀವವಾಗಿದೆ. ನಮ್ಮ ತಂದೆ-ತಾಯಿಗೆ ನಾನು ಒಬ್ಬನೇ ಮಗನಾಗಿದ್ದೇನೆ. ಕೊರೋನಾ ವೈರಸ್ ಎಂಬ ರಾಕ್ಷಸ ವೈರಸ್ ನಮ್ಮ ಮಗನಿಗೂ ಹರಡುತ್ತದೆ ಎಂಬ ಭಯ ನಮ್ಮ ತಂದೆ-ತಾಯಿಗೆ ಶುರುವಾಗಿದೆ. ಆ ಕಾರಣಕ್ಕಾಗಿ ನನಗೆ ನೂರು ದಿನಗಳ ಕಾಲ ಅಥವಾ ಅದಕ್ಕಿಂತಲೂ ಹೆಚ್ಚಿನ ದಿನ ರಜೆ ನೀಡಬೇಕು ಎಂದು ಪೋಲಿಸ್ ಮಹಾ ನಿರ್ದೇಶಕರಲ್ಲಿ ಪತ್ರ ಬರೆದು ಮನವಿ ಮಾಡಿದ್ದಾರೆ.

  ಪೊಲೀಸ್ ಕಾನ್ಸ್​ಟೇಬಲ್​ ಬರೆದ ಪತ್ರ.

  ಇದನ್ನು ಓದಿ: ಕಲಬುರ್ಗಿಯಲ್ಲಿ ಹೈ ಅಲರ್ಟ್​​ ಘೋಷಣೆ; ಮೃತ ವೃದ್ಧನ ಕುಟುಂಬಸ್ಥರು ಸೇರಿ 76 ಜನರ ಮೇಲೆ ನಿಗಾ

  ರಜೆ ಕೋರಿರುವ ಪತ್ರ ವೈರಲ್​ ಆಗುತ್ತಿದ್ದಂತೆ ತಮಾಷೆಗಾಗಿ ಈ ಪತ್ರ ಬರೆದಿದ್ದಾಗಿ ಕಾನ್ಸ್​ಟೇಬಲ್ ಪ್ರಶಾಂತ್ ಸ್ಪಷ್ಟನೆ ನೀಡಿದ್ದಾರೆ. ಸಹ ಸಿಬ್ಬಂದಿ ಜೊತೆಗೂಡಿ ತಮಾಷೆಗಾಗಿ ಹೀಗೆ ಪತ್ರ ಬರೆದಿದ್ದಾರೆ. ಆದರೆ, ವಾಸ್ತವವಾಗಿ ಈ ಪತ್ರವನ್ನು ಪೊಲೀಸ್ ಮಹಾನಿರ್ದೇಶಕರಿಗೆ ಬರೆದಿದ್ದಲ್ಲ ಎಂದು ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕೂಡ ಹೇಳಿದ್ದಾರೆ.
  First published: