ಮಾನಗೆಟ್ಟ ಬಿಜೆಪಿಗರೇ ನಿಮ್ಮವರೇ ನಿಮ್ಮ ಮುಖಕ್ಕೆ ಉಗಿಯುತ್ತಿದ್ದಾರಲ್ಲ ಕೊಂಚವೂ ನಾಚಿಕೆ ಎನಿಸುತ್ತಿಲ್ಲವೇ?; ಕಾಂಗ್ರೆಸ್​ ಕಿಡಿ!

ಹೌದು ಬಿಡಿ ಈಶ್ವರಪ್ಪ ಅವರೇ, ನಿಮ್ಮ ಮಾತು ಒಪ್ಪುತ್ತೇವೆ ರಾಜ್ಯದ ಬದುಕು ಉಳಿಸಲು ನೆರವು ನೀಡಿ ಎಂದರೆ ನೋಟ್ ಪ್ರಿಂಟ್ ಮಾಡ್ತಿಲ್ಲ ಎಂದ ನೀವು ಜನತೆಯನ್ನು 'ಹೆಣ'ವನ್ನಾಗಿಸಲು ಕರ್ನಾಟಕದ ಬಿಜೆಪಿ  ಹಾಗೂ ಆರ್‌ಎಸ್ಎಸ್ ತುಂಬಾ ಪ್ರಯತ್ನ ಮಾಡುತ್ತಿದ್ದೀರಿ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಸಿದ್ದರಾಮಯ್ಯ-ಯಡಿಯೂರಪ್ಪ.

ಸಿದ್ದರಾಮಯ್ಯ-ಯಡಿಯೂರಪ್ಪ.

 • Share this:
  ಬೆಂಗಳೂರು (ಮೇ 12); ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಟ್ವಿಟರ್​ನಲ್ಲಿ ಇಂದು ಕಿಡಿಕಾರಿರುವ ಕಾಂಗ್ರೆಸ್​, "ಮಾನಗೆಟ್ಟ ಬಿಜೆಪಿ ನಾಯಕರೇ ಕೊರೋನಾವನ್ನು ನಿಯಂತ್ರಿಸುವಲ್ಲಿ ನೀವು ಎಡವಿದ್ದೀರಿ. ಜನರಿಗೆ ಸಾವಿನ ಭಾಗ್ಯ ನೀಡುತ್ತಿದ್ದೀರಿ ಹೀಗಾಗಿ ನಿಮ್ಮವರೇ ನಿಮ್ಮ ಮುಖಕ್ಕೆ ಉಗಿಯುತ್ತಿದ್ದಾರೆ. ನಿಮಗೆ ಕೊಂಚವಾದರೂ ನಾಚಿಕೆಯಾಗುತ್ತಿಲ್ಲವೇ? ಎಂದು ಲೇವಡಿ ಮಾಡಿದೆ. ಅಸಲಿಗೆ ಕರ್ನಾಟಕದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದೀಗ ಮಹಾರಾಷ್ಟ್ರವನ್ನೂ ಹಿಂದಿಕ್ಕಿ ಕರ್ನಾಟಕ ಸೋಂಕು ಪೀಡಿತರ ರಾಜ್ಯಗಳ ಪಟ್ಟಿಯಲ್ಲಿ ಮೇಲಕ್ಕೇರಿದೆ. ಹೀಗಾಗಿ ಸ್ವತಃ ಬಿಜೆಪಿ ಮಾಜಿ ಸಚಿವರಾದ ಸಿ.ಟಿ. ರವಿ, "ಸರ್ಕಾರ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವಲ್ಲಿ ಎಡವಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಿಗೆ ಇದೀಗ ಕಾಂಗ್ರೆಸ್​ ಸಹ ಕಿಡಿಕಾರಿದೆ.  ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, "ಮಾನಗೆಟ್ಟ ಬಿಜೆಪಿ ನಾಯಕರೇ ನಿಮ್ಮವರೇ ನಿಮಗೆ ಮುಖಕ್ಕೆ ಉಗಿಯುತ್ತಿದ್ದಾರಲ್ಲ ಕೊಂಚವೂ ನಾಚಿಕೆ ಎನಿಸುತ್ತಿಲ್ಲವೇ? ತಜ್ಞರ ಎಚ್ಚರಿಕೆ ಕಡೆಗಣಿಸಿ ಮುಂಜಾಗ್ರತೆ ವಹಿಸದೆ ಜನತೆಯನ್ನು ಸಾವಿನ ದವಡೆಗೆ ದೂಡಿದ ತಾವು ಲಸಿಕೆ ನೀಡುವಲ್ಲಿಯೂ ವಿಫಲರಾಗಿದ್ದೀರಿ. ವಿಪಕ್ಷ ನಾಯಕರ ಟೀಕೆ ಮಾಡಿದಾಕ್ಷಣ ನಿಮ್ಮ ಲೋಪ ಮುಚ್ಚಲಾರವು. ಕರ್ನಾಟಕದ ಬಿಜೆಪಿ ಸರ್ಕಾರ ಜನತೆಗೆ ಸಾವಿನ ಭಾಗ್ಯ ಯೋಜನೆ ಜಾರಿಗೊಳಿಸಿದೆ.  ನಿಮ್ಮ ಯೋಜನೆ "ಶವ ಭಾಗ್ಯ" "ಸ್ಮಶಾನ ಭಾಗ್ಯ" ಅಲ್ಲವೇ? ಜನಾಕ್ರೋಶ ಹೆಚ್ಚಿದಾಗ ದಿಕ್ಕು ತಪ್ಪಿಸಲು ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರ ವೈಯುಕ್ತಿಕವಾಗಿ ಗುರಿಯಾಗಿಸುವ ತಂತ್ರ ಬಿಜೆಪಿಯದ್ದು. ಬಿಜೆಪಿ ಐಟಿ ಸೆಲ್‌ನಲ್ಲಿ ಹೇಳುವ ಈ ಸುಳ್ಳನ್ನ ಆಸ್ಪತ್ರೆಗಳ ಮುಂದೆ ನಿಂತು ಜನತೆಯ ಎದುರು ಹೇಳುವ ತಾಕತ್ತಿದೆಯೇ ಹೇಳಿ ನಿಮ್ಮ ನಾಯಕರಿಗೆ ಹಾಗು 25 ಸಂಸದರಿಗೆ" ಎಂದು ಕಾಂಗ್ರೆಸ್ ಸವಾಲು ಹಾಕಿದೆ.  ಬಿಜೆಪಿ ಶಾಸಕ ಭೈರತಿ ಸುರೇಶ್ ಇತ್ತೀಚೆಗೆ ಸ್ಮಶಾನದಲ್ಲೂ ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗಿದ್ದರು. ಈ ಬಗ್ಗೆಯೂ ಕಿಡಿಕಾರಿರುವ ಕಾಂಗ್ರೆಸ್, "ಬಿಜೆಪಿ ಕರ್ನಾಟಕ ಸ್ಮಶಾನದ ಎದುರೂ ಸಹ ಪ್ರಚಾರದ ತೆವಲು ತೀರಿಸಿಕೊಂಡ ತಾವು ತುತ್ತಿನ ಚೀಲದ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ. ಅದು ಶಾಸಕ ಭೈರತಿ ಸುರೇಶ್ ಅವರ ಸೇವೆಯ ರೇಷನ್ ಕಿಟ್, ಫೋಟೋ ಕೂಡ ಅವರದ್ದೇ, ಅದನ್ನ ನೋಡಲಾಗದ ನಿಮ್ಮ ಬುದ್ಧಿಗೆ ಅಷ್ಟೇ ಅಲ್ಲ ಕಣ್ಣಿಗೂ ಮಂಕು ಕವಿದಿದೆ" ಎಂದು ಕಿಡಿಕಾರಿದೆ.  ಇದೇ ವೇಳೆ ಸಚಿವ ಈಶ್ವರಪ್ಪ ಅವರ ಹೇಳಿಕೆಯ ವಿರುದ್ಧವೂ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, "ಹೌದು ಬಿಡಿ ಈಶ್ವರಪ್ಪ ಅವರೇ, ನಿಮ್ಮ ಮಾತು ಒಪ್ಪುತ್ತೇವೆ ರಾಜ್ಯದ ಬದುಕು ಉಳಿಸಲು ನೆರವು ನೀಡಿ ಎಂದರೆ ನೋಟ್ ಪ್ರಿಂಟ್ ಮಾಡ್ತಿಲ್ಲ ಎಂದ ನೀವು ಜನತೆಯನ್ನು 'ಹೆಣ'ವನ್ನಾಗಿಸಲು ಕರ್ನಾಟಕದ ಬಿಜೆಪಿ  ಹಾಗೂ ಆರ್‌ಎಸ್ಎಸ್ ತುಂಬಾ ಪ್ರಯತ್ನ ಮಾಡುತ್ತಿದ್ದೀರಿ!" ಎಂದು ಲೇವಡಿ ಮಾಡಿದೆ.

  ಇದನ್ನೂ ಓದಿ: R Ashok: ಲಾಕ್​ಡೌನ್ ವಿಶೇಷ ಪ್ಯಾಕೇಜ್ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ; ಸಚಿವ ಆರ್​. ಅಶೋಕ್

  ಕರ್ನಾಟಕದಲ್ಲಿ ಕೊರೋನಾ ಅಬ್ಬರ:

  ಎರಡನೇ ಅಲೆ ಕೊರೋನಾ ಸೋಂಕು ರಾಜ್ಯದಲ್ಲಿ ನಿಯಂತ್ರಣ ಮೀರಿದೆ. ಲಾಕ್​ಡೌನ್ ನಡುವೆಯೋ ಸೋಂಕು ನಿಯಂತ್ರಣ ವಾಗುತ್ತಿಲ್ಲ. ಕಳೆದ ಒಂದು ವಾರದಿಂದ ದಿನವೊಂದಕ್ಕೆ ಸರಿ ಸುಮಾರು 50 ಸಾವಿರ ಪ್ರಕರಣಗಳು ದಾಖಲಾಗುತ್ತಿದೆ. ಈ ನಡುವೆ ಮಂಗಳವಾರ ಒಂದೇ ದಿನದಲ್ಲಿ ರಾಜ್ಯದಲ್ಲಿ 480 ಜನ ಕೊರೋನಾದಿಂದಾಗಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕು ನಿಯಂತ್ರಣ ಮೀರಿರುವುದು ಸ್ಪಷ್ಟವಾಗಿದೆ.

  ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ದಾಖಲೆಯಲ್ಲಿ ಕಳೆದ 24 ಗಂಟೆಗಳ ಅವಧಿ ಯಲ್ಲಿ ರಾಜ್ಯದಲ್ಲಿ 39,510 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನಲ್ಲಿ 20, 897 ಪ್ರಕರಣಗಳು ಪತ್ತೆ ಯಾಗಿದೆ. ರಾಜ್ಯದಲ್ಲಿ 7 ಲಕ್ಷಕ್ಕೂ ಅಧಿಕ ಸಕ್ರೀಯ ಪ್ರಕರಣಗಳಿವೆ. ಇನ್ನೂ ಬೆಂಗಳೂರು ಒಂದರಲ್ಲೇ 15,879 ಹೊಸ ಕೇಸ್ ಹಾಗೂ 259 ಸಾವು ಸಂಭವಿಸಿದ್ದು, 4.2 ಲಕ್ಷ ಸಕ್ರೀಯ ಸೋಂಕಿತರು ಬೆಂಗಳೂರಲ್ಲೆ ಇದ್ದಾರೆ.
  Published by:MAshok Kumar
  First published: