ಹಾಸನದಲ್ಲಿ ಕಾಂಗ್ರೆಸ್​​​-ಜೆಡಿಎಸ್​​ ಕಿತ್ತಾಟ: ಕೊರೋನಾಗೆ ಬಳಸಬೇಕಿದ್ದ 112 ಕೋಟಿ ರೂ. ಮತ್ತೆ ಸರ್ಕಾರಕ್ಕೆ ವಾಪಸ್​​?

ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಯಮ್ಮನಿಂದ ನಾವು ಮಾಸ್ಕ್ ಹಂಚಿ, ಸ್ಯಾನಿಟೈಜರ್ ಹಂಚಿ ಎಂದುಕೇಳಬೇಕಿಲ್ಲಾ. ಕಳೆದ 8 ತಿಂಗಳಿನಿಂದ ಸಾಮಾನ್ಯ ಸಭೆ ಕರೆಯದ ಇವರು ಈಗ್ಯಾಕೆ ದಿಢೀರ್​​ ಸಭೆ ಕರೆದರು ಎಂದು ಜಿಲ್ಲಾ ಪಂಚಾಯಿತ್​​ ಅಧ್ಯಕ್ಷೆ ಶ್ವೇತಾ ದೇವರಾಜ್​ಗೆ ಪ್ರಶ್ನಿಸಿದ್ದಾರೆ.

 ಎಚ್​.ಡಿ. ರೇವಣ್ಣ

ಎಚ್​.ಡಿ. ರೇವಣ್ಣ

  • Share this:
ಹಾಸನ(ಮೇ.28): ಇಡೀ ದೇಶ ಕೊರೋನಾ ವಿರುದ್ಧ ಹೇಗೆ ಹೋರಾಟ ಮಾಡಬೇಕು? ಎಂಬ ಯೋಚನೆಯಲ್ಲಿದ್ದರೆ ಹಾಸನದಲ್ಲಿ ಮಾತ್ರ ಇದೇ ವಿಚಾರ ಕಾಂಗ್ರೆಸ್​ ಮತ್ತು ಜೆಡಿಎಸ್ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಇದಕ್ಕೆ ಸಾಕ್ಷಿಯೇ ಕೊರೋನಾ ವಿರುದ್ಧ ಹೋರಾಟಕ್ಕೆ ಬಳಸಬಹುದಾಗಿದ್ದ 112 ಕೋಟಿ ರೂಪಾಯಿ ಮಾಜಿ ಸಚಿವ ಎಚ್​​.ಡಿ ರೇವಣ್ಣನವರಿಂದಲೇ ಸರ್ಕಾರಕ್ಕೆ ವಾಪಸ್ಸಾಗುವ ಪರಿಸ್ಥಿತಿ ಬಂದಿದೆ ಎಂಬ ಕಾಂಗ್ರೆಸ್​​ನ ಗಂಭೀರ ಆರೋಪ.

ಹೌದು, ಹೀಗೆ ಜೆಡಿಎಸ್​​ನ ಪ್ರಮುಖ ನಾಯಕ ಮತ್ತು ಮಾಜಿ ಸಚಿವ ರೇವಣ್ಣನವರ ಮೇಲೆ ಹಾಸನ ಕಾಂಗ್ರೆಸ್​​ನ ಎಂಎಲ್​​ಸಿ ಗೋಪಾಲ ಸ್ವಾಮಿ ಆರೋಪ ಮಾಡಿದ್ದಾರೆ. ಈ ಹಿಂದೆ ಜೆಡಿಎಸ್​ನವರು ಇಲ್ಲಿನ ಕಾಂಗ್ರೆಸ್​​​ನ ಜಿಲ್ಲಾ ಪಂಚಾಯತ್​​ ಅಧ್ಯಕ್ಷೆ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಬೆನ್ನಲ್ಲೀಗ ಕಾಂಗ್ರೆಸ್ಸಿಗರು ಜೆಡಿಎಸ್​ ಮೇಲೆ ಆರೋಪ ಮಾಡಿ ರಾಜಕೀಯ ಮುಂದುವರಿಸಿದ್ದಾರೆ.

15ನೇ ಹಾಣಕಾಸು ಯೋಜನೆಯಡಿ ಇಡೀ ಜಿಲ್ಲೆಗೆ ಕೊರೋನಾ ವಿರುದ್ಧ ಹೋರಾಟಕ್ಕೆಂದು 112 ಕೋಟಿ ರೂ. ಹಣ ಬಂದಿದೆ.  ಈ ಹಣ ಕೊರೋನಾ ವಿರುದ್ಧ ಹೋರಾಟಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ ಬಳಸಬಹುದಾಗಿದೆ. ಆದರೀಗ, ಇದನ್ನು ಬಳಸಲು ಮುಂದಿನ 31ನೇ ತಾರೀಕು ಜಿಲ್ಲಾ ಪಂಚಾಯತ್​ ಸದಸ್ಯರ​ ಸಭೆ ಕರಿಯಬೇಕು. ಜೆಡಿಎಸ್​​ ಸದಸ್ಯರ ಅನುಮೋದನೆ ಪಡೆಯಬೇಕು. ಆದರೆ, ಇವರು ಸಭೆಗೆ ಹಾಜರಾಗದೆ ಬೇಕಂತಲೇ 112 ಕೋಟಿ ಹಣ ಸರ್ಕಾರಕ್ಕೆ ವಾಪಸ್ಸಾಗಲಿ ಎಂಬ ದುರುದ್ದೇಶ ಹೊಂದಿದ್ದಾರೆ ಎಂಬುದು ಕಾಂಗ್ರೆಸ್​​ನ ಎಂಎಲ್​​ಸಿ ಗೋಪಾಲ ಸ್ವಾಮಿ ದೂರು.

ಇನ್ನು, ನಿನ್ನೆಯಷ್ಟೇ ಕೊರೋನಾ ಹಿನ್ನೆಲೆಯಲ್ಲಿ ಹಣ ಬಳಸುವ ಸಂಬಂಧ ಜಿಲ್ಲಾ ಪಂಚಾಯಿತಿಯಲ್ಲಿ‌ ಅಧ್ಯಕ್ಷೆ ಶ್ವೇತಾ ದೇವರಾಜ್ ನೇತೃತ್ವದಲ್ಲಿ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು. ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್‌ನ 23, ಕಾಂಗ್ರೆಸ್‌ನ 16, ಬಿಜೆಪಿಯ ಒಬ್ಬರು ಸದಸ್ಯರಿದ್ದಾರೆ. ಈ ಸಭೆಗೆ ಜೆಡಿಎಸ್‌ನ 23 ಸದಸ್ಯರು ಸಾಮೂಹಿಕವಾಗಿ ಗೈರಾಗಿದ್ದರು. ಇದಕ್ಕೆ ಮಾಜಿ ಸಚಿವ ಎಚ್​.ಡಿ ರೇವಣ್ಣ  ನೇರ ಹೊಣೆ ಎಂದು ಕಾಂಗ್ರೆಸ್ಸಿಗರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: COVID-19: ಹೀಗಿದೆ ಕೊರೋನಾ ಪೀಡಿತರ ರಾಜ್ಯವಾರು ವಿವರ..!

ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಯಮ್ಮನಿಂದ ನಾವು ಮಾಸ್ಕ್ ಹಂಚಿ, ಸ್ಯಾನಿಟೈಜರ್ ಹಂಚಿ ಎಂದುಕೇಳಬೇಕಿಲ್ಲಾ. ಕಳೆದ 8 ತಿಂಗಳಿನಿಂದ ಸಾಮಾನ್ಯ ಸಭೆ ಕರೆಯದ ಇವರು ಈಗ್ಯಾಕೆ ದಿಢೀರ್​​ ಸಭೆ ಕರೆದರು ಎಂದು ಜಿಲ್ಲಾ ಪಂಚಾಯಿತ್​​ ಅಧ್ಯಕ್ಷೆ ಶ್ವೇತಾ ದೇವರಾಜ್​ಗೆ ಪ್ರಶ್ನಿಸಿದ್ದಾರೆ.

ಜತೆಗೆ ಜೆಡಿಎಸ್​​ ಅನುಮೋದನೆ ಇಲ್ಲದೆ ಜಿಲ್ಲಾ ಪಂಚಾಯಿತ್​​ ಅಧ್ಯಕ್ಷೆ ಶ್ವೇತಾ ದೇವರಾಜ್ ಹಣ ಬಳಕೆ ಮಾಡಿದ್ದಾರೆ. ಇವರು ಕಚೇರಿಯಿಂದ ಹೊರಬರಲಿ, ಈಕೆಯಿಂದ ಜಿಲ್ಲಾ ಪಂಚಾಯಿತಿ ಕಚೇರಿ ಭ್ರಷ್ಟಚಾರದಿಂದ ತುಂಬಿ ತುಳುಕಿದೆ ಎಂದರು ಎಚ್​.ಡಿ ರೇವಣ್ಣ.
First published: