Coronavirus: ಪಾಸಿಟಿವ್ ಬಂದಾಗ ಗೋಮೂತ್ರ ಕುಡಿದು, ಬೆಳ್ಳುಳ್ಳಿ ತಿನ್ನಬಹುದಿತ್ತಲ್ಲಾ? ಬಿಜೆಪಿಯನ್ನು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ

ಪಾಸಿಟೀವ್ ಬಂದ್ರೆ ಯಾಕೆ ಗೂಮೂತ್ರ ಕುಡಿಯಲಿಲ್ಲ, ಯಾಕೆ ಬೆಳ್ಳುಳ್ಳಿ ತಿಂದು ವಾಸಿಮಾಡಿಕೊಳ್ತಿಲ್ಲ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು. ಇವೆಲ್ಲ ಸಲಹೆ ಬಡವರಿಗೆ ಮಾತ್ರ ಹೇಳೋದು, ತಾವು ಹೋಗಿ ಮಣಿಪಾಲ್ ಸೇರೋದು ಎಂದು ರಾಜ್ಯ ಸರ್ಕಾರದ ಸಚಿವರುಗಳನ್ನು ಆಡಿಕೊಂಡರು.

ಕಾಂಗ್ರೆಸ್ ಪತ್ರಿಕಾಗೋಷ್ಟಿ

ಕಾಂಗ್ರೆಸ್ ಪತ್ರಿಕಾಗೋಷ್ಟಿ

  • Share this:
ಬೆಂಗಳೂರು (ಮೇ 28): ಕೊರೊನಾ ವಿರುದ್ಧ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು, ನಿಭಾಯಿಸುತ್ತಿರುವ ರೀತಿ ಎಲ್ಲದಕ್ಕೂ ಕಾಂಗ್ರೆಸ್ ಮತ್ತು ಉಳಿದ ಪಕ್ಷಗಳು ಧಾರಾಳವಾಗಿ ಟೀಕೆ, ಟಿಪ್ಪಣಿ ಎರಡನ್ನೂ ನೀಡುತ್ತಲೇ ಬಂದಿವೆ. ಇಂದು ಕೂಡಾ ರಾಜಧಾನಿ ಬೆಂಗಳೂರಿನಲ್ಲಿ ಕೆಪಿಸಿಸಿ ಮುಖಂಡರು ಪತ್ರಿಕಾಗೋಷ್ಟಿ ನಡೆಸಿ ಕೋವಿಡ್ ಮತ್ತು ಲಾಕ್​ಡೌನ್ ನಿರ್ವಹಣೆಯಲ್ಲಿ ಬಿಜೆಪಿಯ ತಪ್ಪುಗಳೇನು, ಜನ ಅದರಿಂದ ಎಷ್ಟು ನೋವು ಅನುಬವಿಸಿದ್ದಾರೆ ಎನ್ನುವುದನ್ನು ವಿವರಿಸಿ, ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದರು.  ಮೊದಲಿಗೆ ಮಾತನಾಡಿದ ಮಾಜಿ ಸಚಿವ ಕೃಷ್ಣಭೈರೇಗೌಡ, ಲಾಕ್ಡೌನ್ ನಿಂದ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಕೋಟ್ಯಂತರ ಮಂದಿ ಆದಾಯವನ್ನ ಕಳೆದುಕೊಂಡಿದ್ದಾರೆ ಎಂದು ಆರಂಭಿಸಿದರು.

ಲಾಕ್ಡೌನ್ ಮಾಡಿ ಐದು ವಾರ ಕಳೆದಿದೆ. ಆದರೆ ಇವರೆಲ್ಲ ಸಂಕಷ್ಟಕ್ಕೊಳಗಾಗಿದ್ದಾರೆ. ಸರ್ಕಾರ ಕಣ್ಣೊರೆಸುವ ಪ್ಯಾಕೇಜ್ ಘೋಷಿಸಿದೆ ಎಂದು ಆರೋಪಿಸಿದರು. ಕಳೆದ ವರ್ಷವೂ ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಿಸಿತ್ತು, ಆಗ ಘೋಷಿಸಿದ ಪ್ಯಾಕೇಜ್ ಸರಿಯಾಗಿ ತಲುಪಿಲ್ಲ ಎಂದು ಅಂಕಿ ಅಂಶಗಳ ಸಮೇತ ಹೇಳಿದರು. ಕಳೆದ ವರ್ಷ ತೋಟಗಾರಿಕೆಗೆ ೧೩೭ ಕೋಟಿ ಘೋಷಿಸಿತ್ತು, ಅದರಲ್ಲಿ ಪಾವತಿಯಾಗಿದ್ದು ಕೇವಲ ೫೦ ಕೋಟಿ ಮಾತ್ರ. ಇನ್ನು ಹೂ ಬೆಳೆಗಾರರಿಗೆ ೩೧ ಕೋಟಿ ಘೋಷಣೆ ಮಾಡಲಾಗಿತ್ತು ಆದರೆ ಪಾವತಿಯಾಗಿದ್ದು ಕೇವಲ ೧೫ ಕೋಟಿ. ಅದೇ ರೀತಿ ೨.೩ ಲಕ್ಷ ಸವಿತಾ ಸಮಾಜದವರಿಗೆ ೫ಸಾವಿರ ಘೋಷಣೆ ಮಾಡಿದ್ರು. ಆದರೆ ಕೇವಲ ೫೫೪೬೬ ಜನರಿಗೆ ಮಾತ್ರ ಇದು ತಲುಪಿದ್ದು ಎಂದರು.

ಇದನ್ನೂ ಓದಿ: Corona Death: ಫುಟ್ಪಾತ್​ ಮೇಲೆ ಶವ ಬಿಟ್ಟು ಆಂಬ್ಯುಲೆನ್ಸ್ ಚಾಲಕ ಪರಾರಿ, ಕೋವಿಡ್ ನೆಪದಲ್ಲಿ ಮುಂದುವರಿದ ಸುಲಿಗೆ

ಇನ್ನು ೭.೪೫ ಲಕ್ಷ ಚಾಲಕರಿಗೆ ೫ ಸಾವಿರ ಘೋಷಣೆ ಆಗಿತ್ತು. ಆದರೆ ಕೊನೆಗೆ ಕೊಟ್ಟಿದ್ದು ೨ ಲಕ್ಷ ೧೪ ಸಾವಿರ ಜನರಿಗೆ ಮಾತ್ರ. ೧೬.೪೮ ಲಕ್ಷ ಕಟ್ಟಡಕಾರ್ಮಿಕರಿಗೆ ೫ ಸಾವಿರ ಘೋಷಣೆ ಆಗಿದ್ರೆ ಕೊಟ್ಟಿದ್ದು ೫ ಲಕ್ಷ ಜನರಿಗೆ ಮಾತ್ರ. ಇನ್ನು ೧.೨೫ ಲಕ್ಷ ನೇಕಾರರಿಗೆ ತಲಾ ೨ ಸಾವಿರ ಘೋಷಣೆ ಮಾಡಲಾಗಿತ್ತು. ಆದರೆ ೪೯,೭೫೬ ಜನರಿಗೆ ಮಾತ್ರ ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಈ ವರ್ಷವೂ ೧೨೫೦ ಕೋಟಿ ಪ್ಯಾಕೇಜ್ ಘೋಷಣೆಯಾಗಿದೆ. ರಾಜ್ಯದಲ್ಲಿ ೩.೫ ಲಕ್ಷ ರೈತರು ಇದ್ದಾರೆ. ಆದರೆ ೮೯ ಸಾವಿರ ರೈತರಿಗೆ ಮಾತ್ರ ನೆರವು ಘೋಷಿಸಿದ್ದಾರೆ. ಉಳಿದ ರೈತರಿಗೆ ನಷ್ಟವಾಗಿಲ್ಲವೇ? ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು. ೧೫ ರಿಂದ ೨೦ ಲಕ್ಷ ಆಟೋ,ಕ್ಯಾಬ್ ಚಾಲಕರಿದ್ದಾರೆ, ಇವರೆಲ್ಲರೂ ತಮ್ಮ ಆದಾಯ ಕಳೆದುಕೊಂಡಿದ್ದಾರೆ. ಆದರೆ ೨.೧ ಲಕ್ಷ ರೈತರಿಗೆ ಮಾತ್ರ ಸರ್ಕಾರ ನೆರವು ಘೋಷಿಸಿದೆ. ಇನ್ನು ೫೦ ಲಕ್ಷ ಅಸಂಘಟಿತ ಕಾರ್ಮಿಕರಿದ್ದಾರೆ, ಕುಂಬಾರ, ಅಕ್ಕಸಾಲಿಗ, ಗಾಣಿಗ ಸೇರಿದಂತೆ ಅನೇಕ ಕುಲಕುಸುಬಿನವರಿದ್ದಾರೆ. ಇವರಲ್ಲಿ ೩ ಲಕ್ಷ ಜನರಿಗೆ ಮಾತ್ರ ಪರಿಹಾರ ನೀಡಲು ಹೊರಟಿದೆ.

೧೦ ಲಕ್ಷ ಕುಟುಂಬ ಬೀದಿಬದಿ ವ್ಯಾಪಾರ ನಂಬಿದ್ದಾರೆ. ಅವರಲ್ಲಿ ಸರ್ಕಾರ ೨.೨ ಲಕ್ಷ ಮಂದಿಗೆ ಮಾತ್ರ ತಲಾ 2 ಸಾವಿರ ರೂಪಾಯಿ ಪರಿಹಾರ ಘೋಷಿಸಿದೆ. ಉಳಿದ ಬೀದಿಬದಿ ವ್ಯಾಪಾರಿಗಳು ಎಲ್ಲಿಗೆ ಹೋಗಬೇಕು ಎಂದು ಸರ್ಕಾರಕ್ಕೆ ಮಾಜಿ ಸಚಿವ ಕೃಷ್ಣಬೈರೇಗೌಡ ಪ್ರಶ್ನಿಸಿದ್ದಾರೆ. ಆದರೆ ನೆರೆಯ ತಮಿಳುನಾಡಿನಲ್ಲಿ ೨.೦೭ ಕೋಟಿ ಬಡವರಿಗೆ ೮೩೬೮ ಕೋಟಿ ರೂಪಾಯಿ ನೀಡಲಾಗಿದೆ. ೨.೭ ಕೋಟಿ ಪಡಿತರ ದಾರರಿಗೆ ೪ ಸಾವಿರ ಕೊಟ್ಟಿದೆ. ಕೇರಳ ಕೂಡಾ ೨೦ ಸಾವಿರ ಪ್ಯಾಕೇಜ್ ಘೋಷಿಸಿದೆ. ಈಗಾಗಲೇ ಕೇರಳ ಎರಡು ಪ್ಯಾಕೇಜ್ ಕೊಟ್ಟಿದೆ. ಇನ್ನು ಆಂಧ್ರ ಸರ್ಕಾರ ಚಾಲಕರಿಗೆ ೧೦,೦೦೦, ವಿವಿಧ ಕಾರ್ಮಿಕರಿಗೆ ೫೦೦೦, ಸ್ವಉದ್ಯೋಗಿ ಮಹಿಳೆಯರಿಗೆ ೧೫ ಸಾವಿರ ನೀಡಿದೆ.

ಇದನ್ನೂ ಓದಿ: Corona Testing: ನಾಯಿಗಳು ಆರ್ಟಿಪಿಸಿಆರ್ ಟೆಸ್ಟ್​​ಗಿಂತಲೂ ವೇಗವಾಗಿ ಕೋವಿಡ್ ಸೋಂಕನ್ನು ಪತ್ತೆ ಮಾಡಬಲ್ಲವು !

ಇನ್ನು ಆಮ್ಲಜನಕ ಸಿಗದೆ ಸಾವನ್ನಪ್ಪಿದವರಿಗೆ ೧೦ ಲಕ್ಷ ನೀಡಿದೆ. ಆದರೆ ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಸತ್ತವರಿಗೆ ನಮ್ಮ ಸರ್ಕಾರ ೨ ಲಕ್ಷ ಹಣ ನೀಡಿದೆ. ಇವರಿಗೆ ಏನಾದ್ರೂ ಮರ್ಯಾದೆ ಇದ್ಯಾ? ಎಂದು ಸರ್ಕಾರದ ವಿರುದ್ಧ ಕೃಷ್ಣಬೈರೇಗೌಡ ವಾಗ್ದಾಳಿ ನಡೆಸಿದರು. ಇನ್ನುಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ ಕೇಂದ್ರ ಸರ್ಕಾರ ೨೦ ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿತ್ತು, ಆದರೆ ಆ ಪ್ಯಾಕೇಜ್ ಎಲ್ಲಿ ಹೋಯ್ತು ‌ಗೊತ್ತಿಲ್ಲ. ಇದರ ಬಗ್ಗೆ ಯಾವ ದಾಖಲೆಗಳೂ ಸಿಕ್ಕಿಲ್ಲ. ಪೀಣ್ಯದಲ್ಲೇ ೩೦ ಸಾವಿರ ಕೈಗಾರಿಕೆ ಕ್ಲೋಸ್ ಆಗಿವೆ. ಆದರೆ ಪರಿಹಾರ ಮಾತ್ರ ಕಾಣೆಯಾಗಿದೆ ಎಂದರು. ರಾತ್ರೋರಾತ್ರಿ ಘೋಷಿಸಿದ ೨೦ ಲಕ್ಷ ಕೋಟಿ ಪ್ಯಾಕೇಜ್ ಎಲ್ಲಿ ಹೋಯ್ತು ? ಅದರ ಶ್ವೇತ ಪತ್ರ ಹೊರಡಿಸಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಇನ್ನು ಮುಂದುವರೆದು ಕೇರಳ ಅನಾಥಮಕ್ಕಳಿಗೆ ೩ ಲಕ್ಷ ಘೋಷಿಸಿದೆ. ಅವರ ಸಂಪೂರ್ಣ ವಿದ್ಯಾಭ್ಯಾಸದ ಖರ್ಚು ನೀಡಲಿದೆ. ಹೈಕೋರ್ಟ್ ಹೆಚ್ಚು ಪರಿಹಾರಕ್ಕೆ ಸೂಚನೆ ನೀಡಿದ್ರೂ ಅದು ಆಗಿಲ್ಲ. ನರೆಗಾ ಅಡಿ ಮಾನವ ದಿನಗಳನ್ನ ಹೆಚ್ಚಿಸಬೇಕು, ನಿರುದ್ಯೋಗಿಗಳಿಗೆ ಉದ್ಯೋಗ ಕೊಡಬೇಕು. ಈ ನಿಟ್ಟಿನಲ್ಲಿ ಕೇಂದ್ರದ ಮೇಲೆ ಒತ್ತಡವನ್ನ ತರಬೇಕು, ೨೫ ಸಂಸದರು ಏನೂ‌ಮಾತನಾಡ್ತಿಲ್ಲ, ಮೋದಿಯವರು ರಾಜ್ಯಕ್ಕೆ  ಏನನ್ನೂ ಕೊಡ್ತಿಲ್ಲ ಎಂದು ದೂರಿದರು.

ನಂತರ ಮಾತನಾಡಿದ ಮಾಜಿ ಸಚಿವ ಪ್ರಿಯಾಂಕ‌ ಖರ್ಗೆ, ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಯಾರಿಗೂ ತಲುಪಿಲ್ಲ ಎಂದರು. ಆಕ್ಸಿಜನ್ ಕೊರತೆ, ವೆಂಟಿಲೇಟರ್ ಕೊರತೆ, ವ್ಯಾಕ್ಸಿನ್ ಕೊರತೆ, ಪಿಎಂ ಕೇರ್ ಹಣದ ಬಗ್ಗೆ ಮಾತನಾಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ಹೊರಡಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ಕಡೆ ಮಾತನಾಡಬಾರದಂತೆ, ಉಳಿದ ಕಡೆ ಹೇಳಿಕೆ ಕೊಡಲು ಸೂಚನೆ ನೀಡಿದ್ದಾರೆ ಎಂದು ದೂರಿದರು. ಗಂಗಾನದಿಯಲ್ಲಿ ಸಾವಿರಾರು ಶವ ಬಂದ್ರೂ ಕೇಳುವಂತಿಲ್ಲ ಎಂದರು.

ಪಾಸಿಟೀವ್ ಬಂದ್ರೆ ಯಾಕೆ ಗೂಮೂತ್ರ ಕುಡಿಯಲಿಲ್ಲ, ಯಾಕೆ ಬೆಳ್ಳುಳ್ಳಿ ತಿಂದು ವಾಸಿಮಾಡಿಕೊಳ್ತಿಲ್ಲ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು. ಇವೆಲ್ಲ ಸಲಹೆ ಬಡವರಿಗೆ ಮಾತ್ರ ಹೇಳೋದು, ತಾವು ಹೋಗಿ ಮಣಿಪಾಲ್ ಸೇರೋದು ಎಂದು ರಾಜ್ಯ ಸರ್ಕಾರದ ಸಚಿವರುಗಳನ್ನು ಆಡಿಕೊಂಡರು. ಅಭಯ್ ಪಾಟೀಲ್ ಹೊಗೆ ಬೇರೆ ಹಾಕಿದ್ರು, ಹೊಗೆಯಿಂದ ತೊಂದರೆ ಅ‌ನ್ನೋದು ಗೊತ್ತಿಲ್ವೇ? ಈ ಅವೈಜ್ಙಾನಿಕ ಪ್ರಚಾರ ನಿಲ್ಲಿಸಿ ಎಂದು ಬಿಜೆಪಿ ನಾಯಕರಿಗೆ ಪ್ರಿಯಾಂಕ ಖರ್ಗೆ ಆಗ್ರಹಿಸಿದರು.
Published by:Soumya KN
First published: