• Home
 • »
 • News
 • »
 • coronavirus-latest-news
 • »
 • ‘ಕೊರೋನಾ ವಿರುದ್ಧದ ಹೋರಾಟಕ್ಕೆ ವಿಶೇಷ ಬಜೆಟ್​​​ ಮೀಸಲಿಡಬೇಕು‘: ಕೇಂದ್ರಕ್ಕೆ ಸೋನಿಯಾ ಗಾಂಧಿ ಆಗ್ರಹ

‘ಕೊರೋನಾ ವಿರುದ್ಧದ ಹೋರಾಟಕ್ಕೆ ವಿಶೇಷ ಬಜೆಟ್​​​ ಮೀಸಲಿಡಬೇಕು‘: ಕೇಂದ್ರಕ್ಕೆ ಸೋನಿಯಾ ಗಾಂಧಿ ಆಗ್ರಹ

ಸೋನಿಯಾ ಗಾಂಧಿ

ಸೋನಿಯಾ ಗಾಂಧಿ

ಇದೇ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ನಕಲಿ ಸ್ಯಾನಿಟೈಸರ್​​ಗಳು, ಮಾಸ್ಕ್, ದ್ರವ ಸೋಪುಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

 • Share this:

  ನವದೆಹಲಿ(ಮಾ.22): ಕೊರೋನಾ ವೈರಸ್​​ಗೆ ಯಾವುದೇ ಕಾರಣಕ್ಕೂ ಜನ ಹೆದರಬಾರದು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಇಂದು ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್​​ ಅಧ್ಯಕ್ಷೆ, ಕೊರೋನಾ ವೈರಾಣು ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇಂತಹ ವಿಷಮ ಸ್ಥಿತಿಯಲ್ಲಿ ಜನ ಆತಂಕಕ್ಕೀಡಾಗಬಾರದು ಮತ್ತು ದೇಶವೂ ತಲೆಬಾಗಬಾರದು ಎಂದಿದ್ದಾರೆ.


  ಕೋವಿಡ್​​​-19 ವೈರಾಣು ತಡೆಗೆ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಈ ಮಾರಕ ರೋಗದಿಂದ ಬಳಲುತ್ತಿರುವ ಸೋಂಕಿತರನ್ನು ಪಾರು ಮಾಡಲು ಪರಿಹಾರ ಪ್ಯಾಕೇಜ್​​ ಘೋಷಣೆ ಮಾಡಬೇಕು. ಜತೆಗೆ ದೇಶಾದ್ಯಂತ ಕೊರೋನಾ ವೈರಸ್ ತಪಾಸಣೆ ಕೇಂದ್ರಗಳನ್ನು ಹೆಚ್ಚಿಸುವ ಮೂಲಕ ಮುಂಜಾಗೃತ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್​​​​ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

  ಭಾರತ ಕೊರೋರಾ ವೈರಸ್​​ನ್ನು ಸಮರ್ಥವಾಗಿ ಎದುರಿಸಲು ವಿಶೇಷ ಬಜೆಟ್ ಮೀಸಲಿಡಬೇಕು. ವೈರಾಣು ವಿರುದ್ಧ ಹೋರಾಡಲು ವಿಶೇಷ ಆರ್ಥಿಕ ಪ್ರೋತ್ಸಾಹ ನೀಡಬೇಕು. ಇದೇ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ನಕಲಿ ಸ್ಯಾನಿಟೈಸರ್​​ಗಳು, ಮಾಸ್ಕ್, ದ್ರವ ಸೋಪುಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.


  ಇದನ್ನೂ ಓದಿ: ಮಹಾರಾಷ್ಟ್ರ, ಬಿಹಾರದಲ್ಲಿ ಕೊರೋನಾಗೆ ಮತ್ತೆರಡು ಬಲಿ; ಭಾರತದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆ


  ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್​ಗೆ 2ನೇ ವ್ಯಕ್ತಿ ಸಾವನ್ನಪ್ಪಿದ್ದು, ಬಿಗಹಾರದಲ್ಲಿಯೂ ಓರ್ವ ಸಾವನ್ನ್ಪಪಿದ್ದಾರೆ. ಈ ಮೂಲಕ ಭಾರತದಲ್ಲಿ ಕೋವಿಡ್​-19ಗೆ ಬಲಿಯಾದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಇಟಲಿಯ ಪ್ರಜೆಯೋರ್ವ ರಾಜಸ್ಥಾನದ ಜೈಪುರದಲ್ಲಿ ಸಾವನ್ನಪ್ಪಿದ ಪ್ರಕರಣವನ್ನೂ ಸೇರಿಸಿದರೆ ದೇಶದಲ್ಲಿ 7 ಜನರು ಸಾವನ್ನಪ್ಪಿದಂತಾಗಿದೆ.


  ಮಹಾರಾಷ್ಟ್ರ ಮೂಲದ 63 ವರ್ಷದ ವ್ಯಕ್ತಿಯೊಬ್ಬರು ಕೊರೋನಾ ವೈರಸ್​ಗೆ ಬಲಿಯಾಗಿದ್ದಾರೆ. ಮಾ. 1ರಂದು ಕೊರೋನಾ ಶಂಕೆಯಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ ಈ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮಾ. 21ರ ರಾತ್ರಿ 11 ಗಂಟೆಗೆ ಸಾವನ್ನಪ್ಪಿದ್ದಾರೆ. ಡಯಾಬಿಟಿಸ್, ಅಧಿಕ ರಕ್ತದೊತ್ತಡವಿದ್ದ ಅವರಿಗೆ ಹೃದಯದಲ್ಲಿ ನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ.


  ರಾಜಸ್ತಾನದ ಜೈಪುರದಲ್ಲಿ ಚಿಕಿತ್ಸೆಯಲ್ಲಿದ್ದ 69 ವರ್ಷದ ಇಟಲಿ ಪ್ರಜೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದರು. ಅದನ್ನೂ ಸೇರಿಸಿದರೆ ಭಾರತದಲ್ಲಿ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಭಾರತದ ಪ್ರಜೆಗಳನ್ನು ಮಾತ್ರ ಪರಿಗಣಿಸಿದರೆ ಸಾವಿನ ಸಂಖ್ಯೆ 6 ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕರ್ನಾಟಕದ ಕಲಬುರ್ಗಿಯಲ್ಲಿ ಮೊದಲ ವ್ಯಕ್ತಿ ಕೊರೋನಾ ವೈರಸ್​ಗೆ ಬಲಿಯಾಗಿದ್ದರು. ನಂತರ ದೆಹಲಿ, ಮುಂಬೈನಲ್ಲಿ ಸಾವಿನ ಪ್ರಕರಣ ದಾಖಲಾಗಿತ್ತು.


  !function(e,i,n,s){var t="InfogramEmbeds",d=e.getElementsByTagName("script")[0];if(window[t]&&window[t].initialized)window[t].process&&window[t].process();else if(!e.getElementById(n)){var o=e.createElement("script");o.async=1,o.id=n,o.src="https://e.infogram.com/js/dist/embed-loader-min.js",d.parentNode.insertBefore(o,d)}}(document,0,"infogram-async");

  Published by:Ganesh Nachikethu
  First published: