Karti Chidambaram: ಕಾಂಗ್ರೆಸ್​ ಸಂಸದ ಕಾರ್ತಿ ಚಿದಂಬರಂಗೆ ಕೊರೋನಾ ಪಾಸಿಟಿವ್​​

ತಮಿಳುನಾಡಿನ ಶಿವಗಂಗಾ ಲೋಕಸಭಾ ಕ್ಷೇತ್ರದ ಸಂಸದರಾದ ಕಾರ್ತಿಯವರಿಗೆ ಅದೇ ರಾಜ್ಯದ ರಾಜ್ಯಪಾಲ ಬನ್ವರಿಲಾಲ್​ ಪುರೋಹಿತ್​​ಗೆ ಕೊರೋನಾ ಕಾಣಿಸಿಕೊಂಡ ಬೆನ್ನಲ್ಲೇ ಸೋಂಕು ವಕ್ಕರಿಸಿದೆ.

news18-kannada
Updated:August 3, 2020, 9:54 PM IST
Karti Chidambaram: ಕಾಂಗ್ರೆಸ್​ ಸಂಸದ ಕಾರ್ತಿ ಚಿದಂಬರಂಗೆ ಕೊರೋನಾ ಪಾಸಿಟಿವ್​​
ಕಾರ್ತಿ ಪಿ. ಚಿದಂಬರಂ
  • Share this:
ನವದೆಹಲಿ(ಆ.03): ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್​ ಹಿರಿಯ ನಾಯಕ ಪಿ.ಚಿದಂಬರಂ ಪುತ್ರ ಸಂಸದ ಕಾರ್ತಿ ಚಿದಂಬರಂಗೆ ಕೊರೋನಾ ಪಾಸಿಟಿವ್​​ ಬಂದಿದೆ. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಚಿದಂಬರಂ ಮನೆಯಲ್ಲೇ ಕ್ವಾರಂಟೈನ್​​ ಆಗಿದ್ದಾರೆ.

ನನಗೆ ಕೊರೋನಾ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ತಪಾಸಣೆಗೆ ಒಳಗಾಗಿದ್ದೆ. ಕೋವಿಡ್​​-19 ಟೆಸ್ಟ್​ ರಿಪೋರ್ಟ್​ ಕೂಡ ಪಾಸಿಟಿವ್​​ ಬಂದಿದೆ. ಹಾಗಾಗಿ ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಕ್ವಾರಂಟೈನ್​​ ಆಗಿದ್ದೇನೆ ಎಂದು ತನಗೆ ಪಾಸಿಟಿವ್​​ ಬಂದ ಬೆನ್ನಲ್ಲೇ ಟ್ವೀಟ್​​ ಮಾಡಿ ಸಂಸದ ಕಾರ್ತಿ ಚಿದಂಬರಂ ಟ್ವೀಟ್​​ ಮಾಡಿದ್ದಾರೆ.
ಹಾಗೆಯೇ ತನ್ನೊಂದಿಗೆ ಪ್ರಾರ್ಥಮಿಕ ಸಂಪರ್ಕ ಹೊಂದಿದ್ದ ಎಲ್ಲರನ್ನೂ ಕೋವಿಡ್​-19 ಟೆಸ್ಟ್​​ ಮಾಡಿಸಿಕೊಳ್ಳುವಂತೆ ಚಿದಂಬರಂ ಮನವಿ ಮಾಡಿದ್ದಾರೆ. ಕಾರ್ತಿ ಚಿದಂಬರಂ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: ಕೊರೋನಾ ಸೋಂಕಿತ ಸಿಎಂ ಯಡಿಯೂರಪ್ಪ ಆರೋಗ್ಯ ಸ್ಥಿರ; ಹೆಲ್ತ್‌ ಬುಲೆಟಿನ್ ಬಿಡುಗಡೆ ಮಾಡಿದ ಮಣಿಪಾಲ್ ಆಸ್ಪತ್ರೆ

ತಮಿಳುನಾಡಿನ ಶಿವಗಂಗಾ ಲೋಕಸಭಾ ಕ್ಷೇತ್ರದ ಸಂಸದರಾದ ಕಾರ್ತಿಯವರಿಗೆ ಅದೇ ರಾಜ್ಯದ ರಾಜ್ಯಪಾಲ ಬನ್ವರಿಲಾಲ್​ ಪುರೋಹಿತ್​​ಗೆ ಕೊರೋನಾ ಕಾಣಿಸಿಕೊಂಡ ಬೆನ್ನಲ್ಲೇ ಸೋಂಕು ವಕ್ಕರಿಸಿದೆ.
Published by: Ganesh Nachikethu
First published: August 3, 2020, 7:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading