ಕೊರೋನಾ ನಿಯಂತ್ರಣ ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಏಕವಚನದಲ್ಲೇ ಹರಿಹಾಯ್ದ ಡಿ.ಕೆ.ಸುರೇಶ್

ಇಂದಿನ ಮೀಟಿಂಗ್ ನಲ್ಲಿ ಸಾಮಾಜಿಕ ಅಂತರ ಇಲ್ಲ. ಇನ್ನು ಜನ ಏನ್ ಮಾಡ್ತಾರೆ. ಜನರೇ ನಮ್ಮನ್ನು ಕೇಳುತ್ತಾರೆ. 144 ಸೆಕ್ಷನ್ 24 ಗಂಟೆಗಳ ಕಾಲ ಮಾಡ್ಬೇಕು ಎಂದಿದ್ದೇವೆ. 144 ಸೆಕ್ಷನ್ ಮಾಡಿ. ಆದರೆ ಪೊಲೀಸರು ಹೆಚ್ಚಾಗಿ ಹೊಡಿಬೇಡಿ. ಕೊರೋನಾ ಇದೆ ಅಂದ್ರೆ ಅವರಿಗೆ ಭಯ ಇರಬೇಕು. ಲಾಕ್ ಡೌನ್ ಗೆ ನಮ್ಮ ವಿರೋಧವಿದೆ. ಲಾಕ್ ಡೌನ್ ಮಾಡಿದರೆ ಬಡವರು ಬದುಕಬೇಕಲ್ರಿ. ಮಾಡಿದರೆ 20 ಸಾವಿರ ಅಕೌಂಟಿಗೆ ಹಾಕಲಿ ಎಂದರು. 

ಬೆಂಗಳೂರು ಭಾಗದ ಜನಪ್ರತಿನಿಧಿಗಳ ಸಭೆ.

ಬೆಂಗಳೂರು ಭಾಗದ ಜನಪ್ರತಿನಿಧಿಗಳ ಸಭೆ.

 • Share this:
  ಬೆಂಗಳೂರು: ಬೆಂಗಳೂರಿನಲ್ಲಿ ಕೋವಿಡ್ 19 ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸಚಿವರು, ಸಂಸದರು ಹಾಗೂ ಶಾಸಕರ ಸಭೆ ಇಂದು ವಿಧಾನಸೌಧದಲ್ಲಿ ನಡೆಯಿತು. ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಸಂಸದ ಡಿ.ಕೆ.ಸುರೇಶ್ ಮುಗಿಬಿದ್ದರು. ಸುಧಾಕರ್ ಅವರೆ ನೀವು ಸರಿಯಾಗಿ ಕೆಲಸ ಮಾಡಿದ್ದೀರಾ? ನೀವು ಸರಿಯಾಗಿ‌ಕೆಲಸ ಮಾಡಿದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆಸ್ಪತ್ರೆಗಳಲ್ಲಿ ಸರಿಯಾಗಿ ಬೆಡ್​ಗಳೇ ಸಿಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಬಡ ರೋಗಿಗಳನ್ನು ದಾಖಲು ಮಾಡಿಕೊಳ್ಳುತ್ತಿಲ್ಲ.  ಅಂತ್ಯಸಂಸ್ಕಾರಕ್ಕೆ ಹೆಚ್ಚು ಹಣ ಕೇಳ್ತಾ ಇದ್ದಾರೆ. ಹೋಗ್ಲಿ ಈಗ ಎಷ್ಟು ಬೆಡ್ , ವೆಂಟಿಲೇಟರ್ ಗಳಿವೆ. ಇದರ ಬಗ್ಗೆಯಾದರೂ ಸರಿಯಾದ ಮಾಹಿತಿ ಕೊಡಿ. ನೀವು ಆರೋಗ್ಯ ಸಚಿವರು, ಜವಾಬ್ದಾರಿ ನಿಮ್ಮದೇ ಎಂದು  ಸುಧಾಕರ್ ವಿರುದ್ಧ ತಿರುಗಿಬಿದ್ದರು. ಈ ವೇಳೆ ಸುಧಾಕರ್ ಬೆಂಬಲಕ್ಕೆ ಸಚಿವ ವಿ.ಸೋಮಣ್ಣ ನಿಂತು, ಹಗಲು- ರಾತ್ರಿ ಓಡಾಡಿ ಅವರು ಕೆಲಸ ಮಾಡ್ತಿದ್ದಾರೆ. ಅವರ ಮೇಲೆ ನಿಮ್ಮ ಆರೋಪವೇಕೆ ಎಂದು ಸಮರ್ಥಿಸಿಕೊಂಡರು.

  ರೀ, ಆರೋಗ್ಯ ಸಚಿವರೇ, ಇವತ್ತು ಏನಾಗಿದೆ ಗೊತ್ತಾ? ಬರೀ ಮಾಧ್ಯಮಗಳಲ್ಲಿ ಹೇಳಿಕೆ ನೀಡುವುದನ್ನು ನಿಲ್ಲಿಸಿ. ಪ್ರತಿನಿತ್ಯ ನಿಮ್ಮನ್ನು ನೋಡೋದು, ಶವಸಂಸ್ಕಾರ ನೋಡೋದು. ಇದೇ ಆಗಿದೆ. ಸರಿಯಾಗಿ ಕೆಲಸ ಮಾಡಿ. ನಿಮ್ಮ ಸಹೋದ್ಯೋಗಿ ಆಪ್ತ ಸಹಾಯಕ ಇಂದು ಮೃತಪಟ್ಟಿದ್ದಾರೆ. ವಿಚಾರಿಸಿದ್ದೀರಾ ಕಾರಣ ಏನು ಅಂತಾ? ಸುರೇಶ್‌ಕುಮಾರ್ ಸಭ್ಯ ವ್ಯಕ್ತಿ. ಏನು ಮಾತನಾಡಿಲ್ಲ. ನಾನಾಗಿದ್ರೆ, ನಿಮಗೆ ಸರಿಯಾಗಿ ಮಾಡುತ್ತಿದ್ದೇ ಎಂದು ಏಕವಚನದಲ್ಲಿ ಸುಧಾಕರ್‌‌ ವಿರುದ್ಧ ಗುಡುಗಿದರು.

  ಇದಕ್ಕೆ ಸುಧಾಕರ್ ಅವರು, ಕಾಂಗ್ರೆಸ್ ಶಾಸಕರ ಮಾತಿಗೆ ನಾನು ಮಾತನಾಡಲ್ಲ ಎಂದು ಹೇಳಿದರು. ಸುಧಾಕರ್ ಮಾತಿಗೆ ಕಾಂಗ್ರೆಸ್ ಶಾಸಕರು ಆಕ್ರೋಶ ಹೊರ ಹಾಕಿದರು. ಮಾತಿಗೆ ಉತ್ತರ ಕೊಡಲ್ಲ ಅಂದರೆ, ಆ ಸ್ಥಾನದಲ್ಲಿ ಏಕೆ ಕುಳಿತಿದ್ದೀರಿ? ಮೊದಲು ರಾಜೀನಾಮೆ ಕೊಟ್ಟು ಹೊರ ಹೋಗಿ ಎಂದು ಕಾಂಗ್ರೆಸ್ ಶಾಸಕರು ವಾಗ್ದಾಳಿ ನಡೆಸಿದರು. ಈ ವೇಳೆ  ಆರ್. ಅಶೋಕ್ ಮಧ್ಯೆ ಪ್ರವೇಶಿಸಿ, ಇದು ಸಭೆ. ಇದರಲ್ಲಿ ಗಲಾಟೆ ಬೇಡ. ನಿಮಗೆ ಏನೇನು ಆಗಬೇಕೋ ಅದನ್ನು ಮಾಡೋಣ. ಸಮಾಧಾನವಾಗಿ ಮಾತನಾಡಿ ಎಂದು ಕಾಂಗ್ರೆಸ್ ಶಾಸಕರನ್ನು ಸಮಾಧಾನಪಡಿಸಿದರು.

  ಇದನ್ನು ಓದಿ: ಬೆಂಗಳೂರು ಭಾಗದ ಜನಪ್ರತಿನಿಧಿಗಳ ಸಭೆ; ಕೋವಿಡ್ ನಿಯಂತ್ರಣ ಸಂಬಂಧ ಮಹತ್ವದ ಮಾತುಕತೆ

  ಕಾಂಗ್ರೆಸ್ ಎಂಎಲ್​ಸಿ ಸಿಎಂ ಇಬ್ರಾಹಿಂ ಮಾತನಾಡಿ, ಸರ್ಕಾರ ಇನ್ನು ಗೊಂದಲದಲ್ಲಿದೆ.  ಆಕ್ಸಿಜನ್, ವೆಂಟಿಲೇಟರ್ ಕೊರತೆ ಇದೆ. ಇದರ ಬಗ್ಗೆ ಸಭೆಯಲ್ಲಿ ಸ್ಪಷ್ಟ ಉತ್ತರ ಸಿಗುತ್ತಿಲ್ಲ.  ಲಸಿಕೆ ತೆಗೆದುಕೊಂಡರೂ ಜನ ಸಾಯುತ್ತಿದ್ದಾರೆ. ಇದರ ಬಗ್ಗೆ ಅನುಮಾನ ಪರಿಹಾರ ಮಾಡಿ ಎಂದಿದ್ದೇವೆ. ಲಾಕ್ ಡೌನ್ ಮಾಡಿದ್ರೆ ಜನ ಸಾಯುತ್ತಾರೆ. ಲಾಕ್ ಡೌನ್ ಬದಲು 144 ಸೆಕ್ಷನ್ ಜಾರಿ ಮಾಡಿ, ನಾಲ್ಕು ಜನಕ್ಕಿಂತ ಹೆಚ್ಚು ಸೇರದಿರಲಿ ಎಂದು ಮಾಡಿ. ಸತ್ತ ಮೇಲಾದ್ರೂ ಮರ್ಯಾದೆಯಿಂದ ಅಂತ್ಯ ಸಂಸ್ಕಾರ ಮಾಡಿ. ಸತ್ತ ದೇಹದಿಂದ ಇನ್ನೊಬ್ಬ ವ್ಯಕ್ತಿಗೆ ಸೋಂಕು ಹರಡುವುದಿಲ್ಲ. ಚೌಟ್ರಿಗಳನ್ನು ತೆಗೆದುಕೊಂಡು ಆಸ್ಪತ್ರೆಯಾಗಿ ಪರಿವರ್ತಿಸಿ. ಇಲ್ಲದಿದ್ದರೆ ಸಮಸ್ಯೆ ಆಗುತ್ತೆ ಎಂದರು.

  ಇಂದಿನ ಮೀಟಿಂಗ್ ನಲ್ಲಿ ಸಾಮಾಜಿಕ ಅಂತರ ಇಲ್ಲ. ಇನ್ನು ಜನ ಏನ್ ಮಾಡ್ತಾರೆ. ಜನರೇ ನಮ್ಮನ್ನು ಕೇಳುತ್ತಾರೆ. 144 ಸೆಕ್ಷನ್ 24 ಗಂಟೆಗಳ ಕಾಲ ಮಾಡ್ಬೇಕು ಎಂದಿದ್ದೇವೆ. 144 ಸೆಕ್ಷನ್ ಮಾಡಿ. ಆದರೆ ಪೊಲೀಸರು ಹೆಚ್ಚಾಗಿ ಹೊಡಿಬೇಡಿ. ಕೊರೋನಾ ಇದೆ ಅಂದ್ರೆ ಅವರಿಗೆ ಭಯ ಇರಬೇಕು. ಲಾಕ್ ಡೌನ್ ಗೆ ನಮ್ಮ ವಿರೋಧವಿದೆ. ಲಾಕ್ ಡೌನ್ ಮಾಡಿದರೆ ಬಡವರು ಬದುಕಬೇಕಲ್ರಿ. ಮಾಡಿದರೆ 20 ಸಾವಿರ ಅಕೌಂಟಿಗೆ ಹಾಕಲಿ ಎಂದರು.
  Published by:HR Ramesh
  First published: