HOME » NEWS » Coronavirus-latest-news » CONGRESS MLC MOHAN KUMAR KONDAJJI SENT A MESSAGE TO HELP ATHLETE WHO IS SUFFERING FROM CORONA KVD

ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸಕ್ಕೆ ಹೋಗುವ ಬದಲು ಕೊರೋನಾ ಸಂಕಷ್ಟಕ್ಕೆ ನೆರವಾಗಲಿ: MLC ಮೋಹನ್ ಕೊಂಡಜ್ಜಿ

ಈ ವೇಳೆ ಇಂಗ್ಲೆಂಡ್​ಗೆ ಪ್ರವಾಸ ಕೈಗೊಳ್ಳುವುದು ಭಾರತದ ಆಟಗಾರರಿಗೆ ಸುರಕ್ಷಿತವಲ್ಲ. ಇಂಗ್ಲೆಂಡ್​​ ಪ್ರವಾಸಕ್ಕೆ ತೆರಳುವ ಬದಲು ಭಾರತದಲ್ಲಿ ಸಂಕಷ್ಟದಲ್ಲಿರುವ ಆಟಗಾರರಿಗೆ ನೆರವಾಗಬೇಕು ಎಂದು MLC ಕೊಂಡಜ್ಜಿ ಆಗ್ರಹಿಸಿದ್ದಾರೆ.

Kavya V | news18-kannada
Updated:May 9, 2021, 7:40 PM IST
ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸಕ್ಕೆ ಹೋಗುವ ಬದಲು ಕೊರೋನಾ ಸಂಕಷ್ಟಕ್ಕೆ ನೆರವಾಗಲಿ: MLC ಮೋಹನ್ ಕೊಂಡಜ್ಜಿ
MLC ಮೋಹನ್ ಕುಮಾರ್ ಕೊಂಡಜ್ಜಿ
  • Share this:
ಬೆಂಗಳೂರು: ಕೊರೋನಾ 2ನೇ ಅಲೆ ದೇಶದ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಸಾವು-ನೋವಿನಿಂದ ಎಲ್ಲಾ ಕ್ಷೇತ್ರಗಳಿಗೂ ಹೊಡೆತ ಬಿದ್ದಿದ್ದು, ಕ್ರೀಡಾ ಲೋಕವೂ ಇದಕ್ಕೆ ಹೊರತಾಗಿಲ್ಲ. ಸೋಂಕು ಸರ್ವವ್ಯಾಪಿಯಾಗಿದ್ದು ಕ್ರಿಕೆಟ್​ ಆಟಗಾರರು ಸೋಂಕಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವೇ ದಿನಗಳ ಹಿಂದೆ ಐಪಿಎಲ್​​ ಟೂರ್ನಿಯನ್ನು ರದ್ದು ಮಾಡಲಾಗಿದೆ. ಒಲಂಪಿಕ್​ ಚಿನ್ನದ ಪದಕ ವಿಜೇತರಾದ ರವೀಂದರ ಪಾಲ್​ ಸಿಂಗ್ ಹಾಗೂ ಕೌಶಿಕ್​ ಕೊರೋನಾಗೆ ಬಲಿಯಾಗಿದ್ದಾರೆ. ಹಲವು ಕ್ರೀಡಾಪಟುಗಳು ಸೋಂಕಿಗೆ ತುತ್ತಾಗಿ ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಶ್ರೀಮಂತ ಆಟವಾದ ಕ್ರಿಕೆಟ್​​​ನ ಆಟಗಾರರು ಬಡ ಕ್ರೀಡಾಳುಗಳ ಸಹಾಯಕ್ಕೆ ಧಾವಿಸಬೇಕು ಎಂದು ಕಾಂಗ್ರೆಸ್​ ಎಂಎಲ್​ಸಿ ಮೋಹನ್​ ಕುಮಾರ್​​ ಕೊಂಡಜ್ಜಿ ಅಭಿಪ್ರಾಯ ಪಟ್ಟಿದ್ದಾರೆ.

ಕೊರೋನಾದಿಂದ ಕ್ರೀಡಾಲೋಕ ಬಳಲುತ್ತಿರುವ ಬಗ್ಗೆ ಪರಿಷತ್​ ಸದಸ್ಯ ಮೋಹನ್​ ಕೊಂಡಜ್ಜಿ ಕಳವಳ ವ್ಯಕ್ತಪಡಿಸಿದ್ದಾರೆ. ಕೊರೋನಾದಿಂದಾಗಿಯೇ ಐಪಿಎಲ್​ ರದ್ದಾಗಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಆಟಗಾರರು ಇಂಗ್ಲೆಂಡ್​ ಪ್ರವಾಸ ಕೈಗೊಂಡು ನ್ಯೂಜಿಲ್ಯಾಂಡ್​ ತಂಡದ ವಿರುದ್ಧ 6 ಟೆಸ್ಟ್​​ ಪಂದ್ಯಗಳನ್ನು ಆಡಲು ಹೊರಟಿದೆ. ಇಂಗ್ಲೆಂಡ್​ನಲ್ಲಿ ಭಾರತಕ್ಕಿಂತ ಅಪಾಯಕಾರಿಯಾದ ರೂಪಾಂತರಿ ಕೊರೋನಾ ಸೋಂಕಿದೆ. ಈ ವೇಳೆ ಇಂಗ್ಲೆಂಡ್​ಗೆ ಪ್ರವಾಸ ಕೈಗೊಳ್ಳುವುದು ಭಾರತದ ಆಟಗಾರರಿಗೆ ಸುರಕ್ಷಿತವಲ್ಲ. ಇಂಗ್ಲೆಂಡ್​​ ಪ್ರವಾಸಕ್ಕೆ ತೆರಳುವ ಬದಲು ಭಾರತದಲ್ಲಿ ಸಂಕಷ್ಟದಲ್ಲಿರುವ ಆಟಗಾರರಿಗೆ ನೆರವಾಗಬೇಕು. ಹೀಗಾಗಿ ಇಂಗ್ಲೆಂಡ್​ ಪ್ರವಾಸ ರದ್ದುಗೊಳಿಸಿ ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿಯವರನ್ನು ಮನವಿ ಮಾಡುತ್ತೇನೆ ಎಂದು ಕೊಂಡಜ್ಜಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಂಟ್ವಾಳದಲ್ಲಿ ತಲೆಸುತ್ತಿ ಬಿದ್ದ ವ್ಯಕ್ತಿಯ ಬದುಕೇ ಬದಲಾಯ್ತು; 26 ವರ್ಷಗಳ ಬಳಿಕ ಮನೆಗೆ ಮರಳಿದ ಪುತ್ರ!

ಸಾಂಕ್ರಾಮಿಕ ರೋಗದ ಸಮಯದಲ್ಲಿ ಮಾಜಿ ಆಟಗಾರರು, ಹಾಲಿ ಆಟಗಾರರಿಗೆ ನೆರವಾಗಲು ಕೆಎಸ್​ಪಿಎ ತಂಡಗಳನ್ನು ರಚಿಸಬೇಕು ಎಂದು ಕೊಂಡಜ್ಜಿ ಸಲಹೆ ನೀಡಿದ್ದಾರೆ. ಈ ಮೂಲಕ ಸೋಂಕಿಗೆ ತುತ್ತಾಗಿರುವ ಕ್ರೀಡಾಪಟುಗಳು, ಕ್ರೀಡಾ ಸಿಬ್ಬಂದಿಗೆ ನೆರವಾಗಬೇಕು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸೇರಿ ರಾಜ್ಯದ ಹಲವು ಕ್ರೀಡಾಂಗಣಗಳಲ್ಲಿ ಕೊಠಡಿಗಳು ಇವೆ. ಈ ಕೊಠಡಿಗಳನ್ನು ಕೋವಿಡ್​ ಆಸ್ಪತ್ರೆಗಳಾಗಿ ಪರಿವರ್ತಿಸಬೇಕು. ಭಾರತದಲ್ಲಿ ಕ್ರಿಕೆಟ್​ಗಿಂತ ಬೇರೆ ಯಾವ ಕ್ರೀಡೆಯ ಆಟಗಾರರೂ ಶ್ರೀಮಂತರಲ್ಲ. ಹೀಗಾಗಿ ಕ್ರಿಕೆಟ್​ ಆಟಗಾರರು, ಮಾಜಿ ಆಟಗಾರರು ದೇಶದ ಬಡ ಆಟಗಾರರ ನೆರವಿ ಧಾವಿಸುವುದು ಅತ್ಯಂತ ಅಗತ್ಯ ಎಂದು ಎಂಎಲ್​ಸಿ ಮೋಹನ್​ ಕೊಂಡಜ್ಜಿ ಮನವಿ ಮಾಡಿಕೊಂಡರು.
Published by: Kavya V
First published: May 9, 2021, 7:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories