news18-kannada Updated:March 13, 2020, 8:29 PM IST
ಸಿಎಂ ಇಬ್ರಾಹಿಂ
ದಾವಣಗೆರೆ(ಮಾ.13) : ದೇಶದಲ್ಲಿ ಎರಡು ವೈರಸ್ಗಳು ಕಾಡುತ್ತಿದ್ದು, ಒಂದು ಕೊರೋನಾ ವೈರಸ್, ಇನ್ನೊಂದು ಎನ್ಆರ್ ಸಿ ಹಾಗೂ ಸಿಎಎ ವೈರಸ್. ಈ ಎರಡು ವೈರಸ್ ನಿಂದ ಖಜಾನೆ ಖಾಲಿಯಾಗಿ ಷೇರು ಪೇಟೆ ಮುಳುಗಿ ಹೋಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ಗೃಹ ಸಚಿವ ಅಮಿತ್ ಶಾ ನಿನ್ನೆ ರಾಜ್ಯಸಭೆಯಲ್ಲಿ ಒಂದು ಪೌರತ್ವದ ಕಾಯ್ದೆಯಿಂದ ಒಂದು ಹೆಜ್ಜೆ ಕೆಳಗೆ ಇಳಿದಿದ್ದಾರೆ. ಪೌರತ್ವಕ್ಕೆ ಈಗ ಪತ್ರ ತೋರಿಸಬೇಕಿಲ್ಲ, ಎಲ್ಲೂ ಅಡ್ಡಿ ಮಾಡುವುದಿಲ್ಲ. ಎಂದಿದ್ದಾರೆ. ಆದರೆ ಇಷ್ಟು ದಿನ ಬೇಕಿತ್ತಾ ಇದನ್ನು ಮಾಡುವುದಕ್ಕೆ. ದೇಶದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿ ನಂತರ ಕಾನೂನು ಜಾರಿಮಾಡಬೇಕು ಎಂದರು.
ಎನ್ಆರ್ಸಿ ಕಾನೂನು ಜಾರಿ ಮಾಡುತ್ತೇವೆ ಎಂದು ಹೇಳಿದರು. ಈಗ ಕೆಳಗೆ ಇಳಿಯುವ ಮಾತನಾಡುತ್ತಿದ್ದಾರೆ. ರಾಜ್ಯಸಭೆಯಲ್ಲಿ ಹೇಳಿದರೆ ಸಾಲದು ಅದನ್ನು ಲಿಖಿತ ರೂಪದಲ್ಲಿ ಹೊರಡಿಸಬೇಕು. ಇದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಒಳ್ಳೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ ಎಂದು ತಿಳಿಸಿದರು.
ಇದನ್ನೂ ಓದಿ :
ಕೊರೋನಾಗೆ ವೃದ್ಧ ಸಾವು; ಕೆಮ್ಮಿನಿಂದ ಬಳಲುತ್ತಿರುವ ಕುಟುಂಬದ ನಾಲ್ವರ ಗಂಟಲು ದ್ರವ ಮಾದರಿ ಪರೀಕ್ಷೆಗೆ ರವಾನೆ
ಕೊರೋನಾ ವೈರಸ್ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಶ್ವೇತ ಪತ್ರ ಹೊರಡಿಸಬೇಕು. ಇದನ್ನೆಲ್ಲ ರಾಜ್ಯ ಸರ್ಕಾರ ಮೊದಲೇ ಮಾಡಬೇಕಿತ್ತು. ಮಧ್ಯಪ್ರದೇಶನಿಂದ 20 ಜನ ದೇವದಾಸಿಯರನ್ನು ಕರೆ ತಂದಿದ್ದಾರೆ. ಸರ್ಕಾರ ಅವರನ್ನು ನೋಡಿಕೊಳ್ಳುವುದರಲ್ಲಿ ಬ್ಯಸಿಯಾಗಿದೆ. ಆ ದೇವದಾಸಿಯರನ್ನು ಮೊದಲು ಕೊರೋನಾ ವೈರಸ್ ಟೆಸ್ಟ್ ಮಾಡಿಸಲಿ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರ ರೆಸಾರ್ಟ್ ವಾಸ್ತವ್ಯದ ಬಗ್ಗೆ ಇಬ್ರಾಹಿಂ ವ್ಯಂಗ್ಯವಾಡಿದರು.
First published:
March 13, 2020, 8:14 PM IST