ಕ್ವಾರಂಟೈನ್ ಕೇಂದ್ರಕ್ಕೆ 500 ಬೆಡ್ ನೀಡಿದರೂ ಜಿಲ್ಲಾಡಳಿತ ತಿರಸ್ಕಾರ; ಕಾಂಗ್ರೆಸ್​ ಶಾಸಕ ಕೆ.ವೈ.ನಂಜೇಗೌಡ ಕಿಡಿ

ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ಸಹಾಯ ಹಸ್ತ ಚಾಚಿದರೂ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ ಎನ್ನುವ ಆರೋಪವನ್ನು ಶಾಸಕ ಕೆವೈ ನಂಜೇಗೌಡ ಮಾಡಿದ್ದಾರೆ. ಆದರೆ ಕೋಲಾರ ಜಿಲ್ಲಾಡಳಿತ ಈ ಬಗ್ಗೆ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ‌.

news18-kannada
Updated:August 3, 2020, 2:41 PM IST
ಕ್ವಾರಂಟೈನ್ ಕೇಂದ್ರಕ್ಕೆ 500 ಬೆಡ್ ನೀಡಿದರೂ ಜಿಲ್ಲಾಡಳಿತ ತಿರಸ್ಕಾರ; ಕಾಂಗ್ರೆಸ್​ ಶಾಸಕ ಕೆ.ವೈ.ನಂಜೇಗೌಡ ಕಿಡಿ
ಕಲ್ಯಾಣ ಮಂಟಪ
  • Share this:
ಕೋಲಾರ(ಆ.03): ಕೋಲಾರ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1800 ರ ಗಡಿ ದಾಟಿದ್ದು, ಪ್ರತಿದಿನ 40 ಕ್ಕೂ ಪ್ರಕರಣಗಳು ದಾಖಲಾಗುತ್ತಿವೆ. ಜಿಲ್ಲೆಯಾದ್ಯಂತ 5900 ಬೆಡ್​​ಗಳನ್ನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಸಿದ್ದಪಡಿಸಿರುವುದಾಗಿ ಜಿಲ್ಲಾಡಳಿತ ಹೇಳಿದೆ.

ಆದರೆ ತಾಲೂಕುವಾರು ಕೋವಿಡ್ ಕೇರ್ ಸೆಂಟರ್ ಆರಂಭಿಸಿರುವ ಜಿಲ್ಲಾಡಳಿತ, ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಂದಾಗಿದೆ.  ಹೀಗಾಗಿ  ಮಾಲೂರು ತಾಲೂಕಿನಲ್ಲಿ ಜಿಲ್ಲಾಡಳಿತ ಆರಂಭಿಸಲು ಹೊರಟಿರುವ ಕೋವಿಡ್ ಕೇರ್ ಸೆಂಟರ್ ಗೆ ಉಚಿತವಾಗಿ, 500 ಬೆಡ್ ಗಳನ್ನು ನೀಡಲು ಮಾಲೂರು ಶಾಸಕ ಕೆವೈ ನಂಜೇಗೌಡ ಸಹಾಯ ಹಸ್ತ ಚಾಚಲು ಮುಂದೆ ಬಂದಿದ್ದರು. ಆದರೆ ಕೋವಿಡ್ ಸೆಂಟರ್ ಆರಂಭಿಸಲು ಕೋಲಾರ ಜಿಲ್ಲಾಡಳಿತ ಅಡ್ಡಗಾಲು ಹಾಕಿದೆ ಎಂದು ನಂಜೇಗೌಡ ಕಿಡಿಕಾರಿದ್ದಾರೆ.

ಮಾಲೂರಿನ ಎರಡು ಕಡೆ ಕೋವಿಡ್ ಕೇರ್ ಸೆಂಟರ್ ಆರ‌ಂಭಿಸಲು 500 ಬೆಡ್ ಹಾಗೂ  ಉಳಿದ ಸಲಕರಣೆಗಳನ್ನು ನಾನು ಖರೀದಿ ಮಾಡಿದ್ದೇನೆ. ಸೆಂಟರ್ ಆರಂಭಿಸಲು ಜಿಲ್ಲಾಡಳಿತ ಮೊದಲು ಒಪ್ಪಿತ್ತು. ಆದರೆ ಜಿಲ್ಲೆಯಲ್ಲಿ ಅಧಿಕಾರದಲ್ಲಿರುವ ರಾಜಕಾರಣಿಗಳು ಜಿಲ್ಲಾಧಿಕಾರಿ ಮೇಲೆ ಒತ್ತಡ ಹಾಕಿದ‌ ಪರಿಣಾಮ, ಜಿಲ್ಲಾಡಳಿತ ಇದಕ್ಕೆ ಅನುಮತಿ ನೀಡಿಲ್ಲ. ಹಾಗಾಗಿ, ಕೋಲಾರ ಜಿಲ್ಲಾಡಳಿತ ರಾಜಕಾರಣ ಮಾಡುತ್ತಿದೆ ಎಂದು‌ ನಂಜೇಗೌಡ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದು,ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ದೂರು‌ ಕೊಡುವುದಾಗಿ ತಿಳಿಸಿದ್ದಾರೆ.

ಹೈಟೆಕ್ ಕಲ್ಯಾಣ ಮಂಟಪವನ್ನ ಕ್ವಾರಂಟೈನ್ ಸೆಂಟರ್ ಮಾಡಲು  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ್ಯ ಕೆ.ಚಂದ್ರಾರೆಡ್ಡಿ ಮನವಿ

ಕೋಲಾರದ ಬಂಗಾರಪೇಟೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲು ನೂತನ ಕಲ್ಯಾಣ ಮಂಟಪ ಬಿಟ್ಟುಕೊಡಲು ಜಿಲ್ಲಾ ಕಾಂಗ್ರೆಸ್ ಕೆ ಚಂದ್ರಾರೆಡ್ಡಿ ಮನವಿ ಮಾಡಿದ್ದಾರೆ. ಬಂಗಾರಪೇಟೆ ತಾಲೂಕಿನಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಹೀಗಾಗಿ ಬಂಗಾರಪೇಟೆ ಪಟ್ಟಣದ ಹೊರವಲಯದ ಬೆಂಗನೂರು ಬಳಿಯಿರುವ, ಕೆಸಿಆರ್ ಸರಸ್ವತಿ ಕಲ್ಯಾಣ ಮಂಟಪವನ್ನು ಕೋವಿಡ್ ಕೇರ್ ಸೆಂಟರ್​​​ಗೆಂದು ಬಿಟ್ಟುಕೊಡಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ್ಯ ಕೆ. ಚಂದ್ರಾರೆಡ್ಡಿ ಮನವಿ ಮಾಡಿದ್ದಾರೆ.

BS Yediyurappa: ನಾನು ಆರೋಗ್ಯವಾಗಿದ್ದೇನೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ; ಆಸ್ಪತ್ರೆಯಿಂದ ಸಿಎಂ ಯಡಿಯೂರಪ್ಪ ವಿಡಿಯೋ ಸಂದೇಶ

ಹೊಸದಾಗಿ ನಿರ್ಮಿಸಿರುವ ಭವನದಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಲು ಜಿಲ್ಲಾಡಳಿತ ಗಮನಕ್ಕೆ ತಂದಿದ್ದು, ಜಿಲ್ಲಾಧಿಕಾರಿಗಳು ಒಪ್ಪಿದಲ್ಲಿ ಉಚಿತವಾಗಿ ಐವತ್ತು ಬೆಡ್ ಖರೀದಿಸಿ, ಅಗತ್ಯ ಸಲಕರಣೆಯನ್ನು ನೀಡಿ, ಎಲ್ಲಾ ರೋಗಿಗಳಿಗೂ ಉಚಿತವಾಗಿ ಊಟದ ವ್ಯವಸ್ಥೆಯನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ. ನೂತನವಾಗಿ ನಿರ್ಮಾಣವಾಗಿರುವ ಕಲ್ಯಾಣ ಮಂಟಪದಲ್ಲಿ 15  ಶೌಚಾಲಯ, 20 ಕೊಠಡಿ, ದೊಡ್ಡದಾದ ಹಾಲ್, ಆಹಾರ ಸೇವಿಸಲು ಪ್ರತ್ಯೇಕಕೊಠಡಿಯ  ವ್ಯವಸ್ಥೆಯಿದೆ. ಈ ಕುರಿತು ಮಾತನಾಡಿರುವ ಚಂದ್ರಾರೆಡ್ಡಿ, ಸಮಾಜಸೇವೆ ಮಾಡುವ ದೃಷ್ಟಿಯಿಂದ ಸಮುದಾಯ ಭವನ ನೀಡಲು ಮುಂದಾಗಿದ್ದು ಇದರಲ್ಲಿ ರಾಜಕೀಯ ಬೆರೆಸುವ ಅಗತ್ಯವಿಲ್ಲ ಎಂದು ಮನವಿ ಮಾಡಿದ್ದಾರೆ.

ಹೀಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ಸಹಾಯ ಹಸ್ತ ಚಾಚಿದರೂ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ ಎನ್ನುವ ಆರೋಪವನ್ನು ಶಾಸಕ ಕೆವೈ ನಂಜೇಗೌಡ ಮಾಡಿದ್ದಾರೆ. ಆದರೆ ಕೋಲಾರ ಜಿಲ್ಲಾಡಳಿತ ಈ ಬಗ್ಗೆ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ‌.
Published by: Latha CG
First published: August 3, 2020, 2:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading