‘ಡಿಕೆಶಿ ನಮ್ಮ ಕೈಗೆ ಸಿಗಂಗಿಲ್ಲ, ಎದುರಿಗೆ ಹೋಗಿ ನಿಂತರೆ ನೋಡಂಗಿಲ್ಲ’- ಕಾಂಗ್ರೆಸ್​ ಶಾಸಕ ಬಿ. ನಾರಾಯಣರಾವ್ ಅಳಲು

ಹೀಗೆ ಮುಂದುವರಿದ ಅವರು, ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್​​​​ ಪದಗ್ರಹಣ ಮಾಡಲಿದ್ದಾರೆ. ಹೀಗಾಗಿ ಇದರ ಪೂರ್ವಭಾವಿ ತಯಾರಿ ಸಭೆ ನಡೆಸಿದ್ದೇವೆ. ಡಿಕೆಶಿ ನಮ್ಮ ಕೈಗೆ ಸಿಗಂಗಿಲ್ಲ, ನಾವೇ ಎದರಿಗೆ ಹೋಗಿ ನಿಂತರೂ ನೋಡಂಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.

news18-kannada
Updated:June 1, 2020, 2:49 PM IST
‘ಡಿಕೆಶಿ ನಮ್ಮ ಕೈಗೆ ಸಿಗಂಗಿಲ್ಲ, ಎದುರಿಗೆ ಹೋಗಿ ನಿಂತರೆ ನೋಡಂಗಿಲ್ಲ’- ಕಾಂಗ್ರೆಸ್​ ಶಾಸಕ ಬಿ. ನಾರಾಯಣರಾವ್ ಅಳಲು
ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್​​
  • Share this:
ಬೀದರ್​​(ಜೂ.01): ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ ಶಿವಕುಮಾರ್​​​ ನಮ್ಮ ಕೈಗೆ ಸಿಗಂಗಿಲ್ಲ, ಎದುರಿಗೆ ಹೋಗಿ ನಿಂತರೆ ನೋಡಂಗಿಲ್ಲ ಎಂದು ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್​ ಶಾಸಕ ಬಿ. ನಾರಾಯಣರಾವ್ ಆಳಲು ತೋಡಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತಾಡುವ ವೇಳೆ ಬಿ. ನಾರಾಯಣರಾವ್​​ ಹೀಗೆಂದರು.

ಭೂಮಿ ಮೇಲೆ ಯಾವ ಸೂ.. ಮಗ ಅವ ನಮಗ ಖರೀದಿ ಮಾಡಾಂವ. ನಮ್ಮನ್ನು ಖರೀದಿ ಮಾಡಬಹುದಾದ ಯಾವ ಪಾರ್ಟಿಯೂ ಇನ್ನೂ ಹುಟ್ಟಿಲ್ಲ. ಪಕ್ಷದ್ರೋಹ ಬಗೆಯುವಂತಹ ನೀಚ ಕೆಲಸ ಯಾವತ್ತೂ ನಾನು ಮಾಡಲ್ಲ. ನಮಗೆ ಅದರ ಅವಶ್ಯಕತೆಯೂ ಇಲ್ಲ ಎಂದು ಕಾಂಗ್ರೆಸ್​ ಶಾಸಕ ಬಿ. ನಾರಾಯಣ್​​​ ರಾವ್​ ಸ್ಪಷ್ಟಪಡಿಸಿದರು.

ಹೀಗೆ ಮುಂದುವರಿದ ಅವರು, ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್​​​​ ಪದಗ್ರಹಣ ಮಾಡಲಿದ್ದಾರೆ. ಹೀಗಾಗಿ ಇದರ ಪೂರ್ವಭಾವಿ ತಯಾರಿ ಸಭೆ ನಡೆಸಿದ್ದೇವೆ. ಡಿಕೆಶಿ ನಮ್ಮ ಕೈಗೆ ಸಿಗಂಗಿಲ್ಲ, ನಾವೇ ಎದರಿಗೆ ಹೋಗಿ ನಿಂತರೂ ನೋಡಂಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಕೊರೋನಾ ಲಾಕ್​​ಡೌನ್ ನಡುವೆಯೂ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲು ಸಜ್ಜಾಗಿದ್ದಾರೆ. ಜೂನ್ 7 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷದ ಜವಬ್ದಾರಿಯನ್ನು ವಹಿಸಿಕೊಳ್ಳುತ್ತಿದ್ದಾರೆ. ಅಂದಿನ ಕಾರ್ಯಕ್ರಮಕ್ಕೆ ಬರೀ ರಾಜ್ಯದ ಆಯ್ದ ಗಣ್ಯರಿಗಷ್ಟೇ ಅವಕಾಶ ನೀಡಲಾಗಿದೆ. ಆದರೆ ಯಾವುದೇ ಮುಖಂಡರು ಆಗಲಿ ಪಕ್ಷದ ಕಾರ್ಯಕರ್ತರಿಗಾಗಲಿ, ಅಭಿಮಾನಿಗಳಿಗೆ ಆಹ್ವಾನ ನೀಡಿಲ್ಲ.

ಇದನ್ನೂ ಓದಿ: DK Shivakumar: ಜೂ.7ರಂದು ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್​​ ಪದಗ್ರಹಣ

ಹೀಗಾಗಿ, ಈ ಸರಳ ಸಮಾರಂಭ ವನ್ನು ಕಾರ್ಯಕರ್ತರು, ಅಭಿಮಾನಿಗಳಿಗೆ ತಲುಪಿಸಲು ಡಿಕೆ ಶಿವಕುಮಾರ್ ಪ್ಲಾನ್ ರೂಪಿಸಿದ್ದಾರೆ. ಅದು ಏನು ಅಂದರೆ ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲೂ ಎಲ್​​ಇಡಿ ಪರದೆಗಳನ್ನು ಹಾಕಲು ಸಿದ್ದತೆ ನಡೆಸಿದ್ದಾರೆ. ಪ್ರತಿ ಗ್ರಾಮ ಪಂಚಾಯತಿ ಗಳಲ್ಲೂ ಒಂದೊಂದು ಎಲ್​​ಇಡಿ ಪರದೆ ಅಳವಡಿಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಸವಕಲ್ಯಾಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯ್ತು. ಈ ವೇಳೆ ಶಾಸಕ ಬಿ. ನಾರಾಯಣರಾವ್​​ ಹೀಗೆ ಗಂಭೀರ ಆರೋಪ ಮಾಡಿದರು.
First published: June 1, 2020, 2:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading