CoronaVirus: ಶಾಸಕ ಅಜಯ್ ಸಿಂಗ್‌ ಗೆ ಕೊರೋನಾ ಪಾಸಿಟಿವ್; ಕ್ವಾರಂಟೈನ್‌ ಆಗ್ತಾರಾ ಕಾಂಗ್ರೆಸ್‌ ನಾಯಕರು?

ಅಜಯ್‌ ಸಿಂಗ್ ಅವರ ಕೋವಿಡ್‌-19 ಪರೀಕ್ಷಾ ವರದಿ ಇಂದು ಹೊರಬಂದಿದ್ದು, ಅವರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಹೀಗಾಗಿ ಅವರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಅವರ ಸಂಪರ್ಕದಲ್ಲಿದ್ದ ಕಾಂಗ್ರೆಸ್‌ ನಾಯಕರಿಗೆ ಇದೀಗ ಆತಂಕ ಶುರುವಾಗಿದೆ. ಕೊರೋನಾ ಭಯದಿಂದಾಗಿ ಈ ಎಲ್ಲಾ ನಾಯಕರೂ ಕ್ವಾರಂಟೈನ್ ಆಗ್ತಾರ? ಚಿಕಿತ್ಸೆ ಪಡೆಯುತ್ತಾರಾ? ಎಂಬ ಪ್ರಶ್ನೆ ಇದೀಗ ಎಲ್ಲೆಡೆ ಮೂಡಿದೆ.

news18-kannada
Updated:July 10, 2020, 6:35 PM IST
CoronaVirus: ಶಾಸಕ ಅಜಯ್ ಸಿಂಗ್‌ ಗೆ ಕೊರೋನಾ ಪಾಸಿಟಿವ್; ಕ್ವಾರಂಟೈನ್‌ ಆಗ್ತಾರಾ ಕಾಂಗ್ರೆಸ್‌ ನಾಯಕರು?
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು (ಜುಲೈ 10); ಕಾಂಗ್ರೆಸ್‌ ನಾಯಕ ಜೇವರ್ಗಿ ಶಾಸಕ ಅಜಯ್‌ ಸಿಂಗ್‌ ಗೆ ಕೊರೋನಾ ಪಾಸಿಟಿವ್ ಆಗಿದ್ದು, ಅವರ ಸಂಪರ್ಕದಲ್ಲಿದ್ದ ಕಾಂಗ್ರೆಸ್‌ ನಾಯಕರಲ್ಲಿ ಇದೀಗ ಆತಂಕ ಶುರುವಾಗಿದೆ. ಅಲ್ಲದೆ, ಅವರೆಲ್ಲಾ ಕ್ವಾರಂಟೈನ್‌ಗೆ ಒಳಗಾಗುತ್ತಾರೆಯೇ? ಎಂಬ ಪ್ರಶ್ನೆಯೂ ಮೂಡಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಹೆಚ್.ಕೆ. ಪಾಟೀಲ್, ರಾಮಲಿಂಗಾ ರೆಡ್ಡಿ ಹಾಗೂ ಕೃಷ್ಣ ಭೈರೇಗೌಡ ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಅಜಯ್‌ ಸಿಂಗ್‌ ಸಹ ಭಾಗವಹಿಸಿದ್ದರು. ಅಲ್ಲದೆ ಹೆಚ್.ಕೆ ಪಾಟೀಲ್ ಅವರನ್ನು ಅಜಯ್‌ ಸಿಂಗ್ ಖುದ್ದು ಭೇಟಿ ಮಾಡಿದ್ದರು. ಅವರ ಮನೆಗೆ ತೆರಳಿ, ಚರ್ಚೆ ನಡೆಸಿದ್ದರು.


ಆದರೆ, ಅಜಯ್‌ ಸಿಂಗ್ ಅವರ ಕೋವಿಡ್‌-19 ಪರೀಕ್ಷಾ ವರದಿ ಇಂದು ಹೊರಬಂದಿದ್ದು, ಅವರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಹೀಗಾಗಿ ಅವರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಅವರ ಸಂಪರ್ಕದಲ್ಲಿದ್ದ ಕಾಂಗ್ರೆಸ್‌ ನಾಯಕರಿಗೆ ಇದೀಗ ಆತಂಕ ಶುರುವಾಗಿದೆ. ಕೊರೋನಾ ಭಯದಿಂದಾಗಿ ಈ ಎಲ್ಲಾ ನಾಯಕರೂ ಕ್ವಾರಂಟೈನ್ ಆಗ್ತಾರ? ಚಿಕಿತ್ಸೆ ಪಡೆಯುತ್ತಾರಾ? ಎಂಬ ಪ್ರಶ್ನೆ ಇದೀಗ ಎಲ್ಲೆಡೆ ಮೂಡಿದೆ.
Published by: MAshok Kumar
First published: July 10, 2020, 5:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading