ಕರ್ನಾಟಕದಲ್ಲಿ ಕೊರೋನಾ ಹೆಚ್ಚಳಕ್ಕೆ ಕಾಂಗ್ರೆಸ್​ ನಾಯಕರೇ ಕಾರಣ; ಸಚಿವ ಬಿ.ಸಿ. ಪಾಟೀಲ್ ಆರೋಪ

Karnataka Coronavirus Updates: ಕೊರೋನಾವನ್ನು ಕಾಂಗ್ರೆಸ್ ಕೊರೋನಾ ಎಂದರೂ ತಪ್ಪಾಗುವುದಿಲ್ಲ. ತಬ್ಲಿಘಿಗಳಿಗೆ ಕಾಂಗ್ರೆಸ್ ನಾಯಕರು ಬೆಂಬಲ ನೀಡಿದ್ದರಿಂದಲೇ ಕೊರೋನಾ ರಾಜ್ಯದಲ್ಲಿ ಹೆಚ್ಚಳವಾಯಿಯಿತು ಎಂದು ಸಚಿವ ಬಿ.ಸಿ. ಪಾಟೀಲ್ ಆರೋಪಿಸಿದ್ದಾರೆ.

ಬಿ.ಸಿ. ಪಾಟೀಲ್.

ಬಿ.ಸಿ. ಪಾಟೀಲ್.

  • Share this:
ಬೆಂಗಳೂರು (ಜು. 11): ಕರ್ನಾಟಕದಲ್ಲಿ ತಬ್ಲಿಘಿಗಳಿಂದಲೇ ಕೊರೋನಾ ಜಾಸ್ತಿ ಆಗಿದೆ. ಆ ತಬ್ಲಿಘಿಗಳಿಗೆ ಕಾಂಗ್ರೆಸ್ ಬೆಂಬಲ ನೀಡಿದ್ದರಿಂದಲೇ ರಾಜ್ಯದಲ್ಲಿ ಕೊರೋನಾ ಜಾಸ್ತಿ ಆಗಿದೆ. ಕಾಂಗ್ರೆಸ್ ಪಕ್ಷವನ್ನು ಕೊರೋನಾ ಕಾಂಗ್ರೆಸ್ ಎಂದು ಕರೆಯಬೇಕು. ಕಾಂಗ್ರೆಸ್​ನಿಂದಲೇ ಕೊರೋನಾ ಜಾಸ್ತಿಯಾಗಿದೆ. ಇನ್ನಾದ್ರೂ ಕಾಂಗ್ರೆಸ್ ರಾಜಕೀಯ ಮಾಡೋದು ಬಿಟ್ಟು ಸರ್ಕಾರದ ಜೊತೆ ಕೈ ಜೋಡಿಸಲಿ ಎಂದು ಕಾಂಗ್ರೆಸ್ ನಾಯಕರಿಗೆ ಸಚಿವ ಬಿ.ಸಿ. ಪಾಟೀಲ್ ತಿರುಗೇಟು ನೀಡಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್,  ಕೊರೋನಾವನ್ನು ಕಾಂಗ್ರೆಸ್ ಕೊರೋನಾ ಎಂದರೂ ತಪ್ಪಾಗುವುದಿಲ್ಲ. ಕಾಂಗ್ರೆಸ್ ಕೂಡ ನಮ್ಮ ಜೊತೆಗೆ ಕೈ ಜೋಡಿಸಬೇಕು. ಮಾಜಿ ಸಿಎಂ ಕುಮಾರಸ್ವಾಮಿ ನಮ್ಮ ಜೊತೆಗೆ ಕೈ ಜೋಡಿಸಿದ್ದಾರೆ. ಕಾಂಗ್ರೆಸ್ ಲೆಕ್ಕ ಕೊಡಿ ಅಭಿಯಾನ ಎಂದು ಮಾಡುತ್ತಿದೆ. ಲೆಕ್ಕ ಎಲ್ಲರಿಗೂ ಕೊಟ್ಟೇ ಕೊಡುತ್ತೇವೆ. ಲೆಕ್ಕ ಕೊಡದೇ ನಾವು ಎಲ್ಲೂ ಹೋಗುವುದಿಲ್ಲ. ಲೆಕ್ಕ ಕೊಡಿ ಅಭಿಯಾನ ಬಿಟ್ಟು, ಸರ್ಕಾರದ ಜೊತೆಗೆ ನಿಲ್ಲಲಿ. ಅದನ್ನು ಬಿಟ್ಟು ಎಲ್ಲೋ ಕುಳಿತು ಮಾತನಾಡುವುದು ಬೇಡ ಎಂದು ಬಿ.ಸಿ. ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕೋವಿಡ್​​-19 ಆರ್ಭಟ: ಸೋಮವಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಜತೆ ಸಿಎಂ ಯಡಿಯೂರಪ್ಪ ಸಭೆ

ಕೊಪ್ಪಳಕ್ಕೆ ಹೊರಗಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ್ದೇವೆ. ಕೊಪ್ಪಳಕ್ಕೆ ಬರೋರು ಮೊದಲು ಕೊರೋನಾ ಟೆಸ್ಟ್ ಗೆ ಒಳಗಾಗಬೇಕು ಆಗಬೇಕು. ಟೆಸ್ಟ್ ರಿಸಲ್ಟ್ ಬರೋವರೆಗೂ ಸಾಂಸ್ಥಿಕ ಕ್ವಾರಂಟೈನ್​ನಲ್ಲಿರಬೇಕು. ವೈದ್ಯಕೀಯ ವರದಿಯಲ್ಲಿ ನೆಗೆಟಿವ್ ಬಂದ ಬಳಿಕವೇ ಅವರನ್ನು ಕಳುಹಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ‌ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

ಈಗಾಗಲೇ ಇಂಜಿನಿಯರಿಂಗ್, ಡಿಗ್ರಿ, ಡಿಪ್ಲೊಮಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್​ನಲ್ಲಿ ಪರೀಕ್ಷೆ ನಡೆಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಬೇರೆ ತರಗತಿಗಳ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಅವರ ಆಂತರಿಕ ಮೌಲ್ಯಮಾಪನವನ್ನು ಆಧರಿಸಿ ಮುಂದಿನ ತರಗತಿಗೆ ಪಾಸ್​ ಮಾಡಲಾಗುವುದು, ಅವರಿಗೆ ಯಾವುದೇ ಪರೀಕ್ಷೆಯೂ ಇರುವುದಿಲ್ಲ ಎಂದು ಕೂಡ ನಿನ್ನೆ ಡಿಸಿಎಂ ಅಶ್ವಥ್ ನಾರಾಯಣ ತಿಳಿಸಿದ್ದರು. ಅಲ್ಲದೆ, ಸಿಇಟಿ ಪರೀಕ್ಷೆಯ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೂಡ ತಿಳಿಸಿದ್ದರು. ಇಂದು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪರೀಕ್ಷೆಯ ಬಗ್ಗೆ ಮಾಹಿತಿ ನೀಡಿರುವ ಬಿ.ಸಿ. ಪಾಟೀಲ್ , ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅಂತಿಮ‌ ಪರೀಕ್ಷೆ ಆಗಸ್ಟ್​ವರೆಗೂ ಇಲ್ಲ. ಪಿಎಚ್​ಡಿ, ಎಂಎಸ್​ಸಿ ಪರೀಕ್ಷೆಗಳು ಆಗಸ್ಟ್​ವರೆಗೂ ಇಲ್ಲ ಎಂದು ತಿಳಿಸಿದ್ದಾರೆ.
Published by:Sushma Chakre
First published: