ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿಗೂ ಕೊರೋನಾ ಸೋಂಕು

ರಾಜ್ಯದಲ್ಲಿ ಹಲವು ಜನಪ್ರತಿನಿಧಿಗಳಿಗೆ ಮಾರಕ ಸೋಂಕು ವಕ್ಕರಿಸಿದೆ. ಕುಣಿಗಲ್ ಕ್ಷೇತ್ರದ ಕಾಂಗ್ರೆಸ್​ ಶಾಸಕ ಡಾ. ರಂಗನಾಥ್​ಗೆ ಅವರಿಗೂ ಸೋಂಕು ದೃಢಪಟ್ಟಿದೆ. ಅದೇ ರೀತಿ ಬಿಜೆಪಿ ಎಂಎಲ್​ಸಿ ಎಂ.ಕೆ.ಪ್ರಾಣೇಶ್ ಮತ್ತವರ ಪತ್ನಿಗೆ ಕೊರೋನಾ ಪಾಸಿಟಿವ್ ವರದಿಯಾಗಿದೆ. ಇತ್ತೀಚೆಗೆ ಮಂಗಳೂರು ಬಿಜೆಪಿ ಶಾಸಕ ಭರತ್‌ ಶೆಟ್ಟಿಗೆ ಕೊರೋನಾ ವೈರಸ್​ ಪಾಸಿಟಿವ್​​ ಕಾಣಿಸಿಕೊಂಡಿತ್ತು.

news18-kannada
Updated:July 6, 2020, 2:35 PM IST
ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿಗೂ ಕೊರೋನಾ ಸೋಂಕು
ಜನಾರ್ದನ ಪೂಜಾರಿ
  • Share this:
ಬೆಂಗಳೂರು: ಮಾರಕ ಕೊರೋನಾ ವೈರಸ್ ಎಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿದೆ. ಕೊರೋನಾ ವಿರುದ್ದ ಹೋರಾಡುತ್ತಿರುವ ವಾರಿಯರ್ಸ್​ಗಳಿಂದ ಹಿಡಿದು ಜನಪ್ರತಿನಿಧಿಗಳವರೆಗೂ ಸೋಂಕು ಹಬ್ಬಿದೆ. ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ಮಂತ್ರಿ ಜನಾರ್ದನ ಪೂಜಾರಿ ಅವರಿಗೂ ಇದೀಗ ಸೋಂಕು ತಗುಲಿದೆ.

ಕೇಂದ್ರದ ಮಾಜಿ ಮಂತ್ರಿ ಜನಾರ್ದನ ಪೂಜಾರಿ ಅವರಿಗೆ ಕೊರೋನಾ ವೈರಸ್ ಪಾಸಿಟಿವ್ ಬಂದಿದ್ದು, ಅವರು ಶೀಘ್ರ ಗುಣಮುಖರಾಗಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಹಾರೈಸಿದ್ದಾರೆ.


ಇದನ್ನು ಓದಿ: Kunigal MLA Dr. Ranganath: ಶಾಸಕ ಭರತ್‌ ಶೆಟ್ಟಿ ಬೆನ್ನಲ್ಲೀಗ ಕುಣಿಗಲ್​​ ಶಾಸಕ ಡಾ. ರಂಗನಾಥ್​ಗೆ ಕೊರೋನಾ ಪಾಸಿಟಿವ್​​​

 

ಇನ್ನು ರಾಜ್ಯದಲ್ಲಿ ಹಲವು ಜನಪ್ರತಿನಿಧಿಗಳಿಗೆ ಮಾರಕ ಸೋಂಕು ವಕ್ಕರಿಸಿದೆ. ಕುಣಿಗಲ್ ಕ್ಷೇತ್ರದ ಕಾಂಗ್ರೆಸ್​ ಶಾಸಕ ಡಾ. ರಂಗನಾಥ್​ಗೆ ಅವರಿಗೂ ಸೋಂಕು ದೃಢಪಟ್ಟಿದೆ. ಅದೇ ರೀತಿ ಬಿಜೆಪಿ ಎಂಎಲ್​ಸಿ ಎಂ.ಕೆ.ಪ್ರಾಣೇಶ್ ಮತ್ತವರ ಪತ್ನಿಗೆ ಕೊರೋನಾ ಪಾಸಿಟಿವ್ ವರದಿಯಾಗಿದೆ. ಇತ್ತೀಚೆಗೆ ಮಂಗಳೂರು ಬಿಜೆಪಿ ಶಾಸಕ ಭರತ್‌ ಶೆಟ್ಟಿಗೆ ಕೊರೋನಾ ವೈರಸ್​ ಪಾಸಿಟಿವ್​​ ಕಾಣಿಸಿಕೊಂಡಿತ್ತು.
Published by: HR Ramesh
First published: July 6, 2020, 2:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading