HOME » NEWS » Coronavirus-latest-news » CONGRESS DELEGATION LED BY FORMER CM SIDDARAMAIAH SUBMIT DETAIL REPORT ON CORONA TO THE KARNATAKA GOVERNMENT MAK

ಕೊರೋನಾ ಕ್ರಮದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ; ವರದಿಯಲ್ಲೇನಿದೆ?

ಇಂದು ಸಿಎಂ ಯಡಿಯೂರಪ್ಪ ಅವರ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸರ್ಕಾರಕ್ಕೆ 15 ಅಂಶಗಳ ವರದಿ ನೀಡಿದ್ದಾರೆ.

news18-kannada
Updated:April 19, 2020, 12:08 PM IST
ಕೊರೋನಾ ಕ್ರಮದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ; ವರದಿಯಲ್ಲೇನಿದೆ?
ಸಿಎಂ ಸಭೆಯಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್‌ ನಾಯಕರು.
  • Share this:
ಬೆಂಗಳೂರು (ಏಪ್ರಿಲ್ 19); ಕೊರೋನಾ ವೈರಸ್ ಇಂದು ದೇಶ ಮಾತ್ರವಲ್ಲ ರಾಜಕ್ಕೂ ಮಾರಕವಾಗಿ ಪರಿಣಮಿಸಿದೆ. ಕರ್ನಾಟಕದಲ್ಲಿ ಈಗಾಗಲೇ ಈ ಸೋಂಕಿಗೆ 14 ಜನ ಮೃತಪಟ್ಟಿದ್ದಾರೆ. ಹೀಗಾಗಿ ಈ ಮಹಾಮಾರಿಯ ವಿರುದ್ಧ ಸರ್ಕಾರ ಎಂತಹಾ ಕ್ರಮವನ್ನು ಜಾರಿಗೊಳಿಸಬೇಕು? ಏನೇನು ಯೋಜನೆಗಳು ತುರ್ತು ಜಾರಿಗೆ ಬರಬೇಕು? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ನಿಯೋಗ ಇಂದು ಸಿಎಂ ಯಡಿಯೂರಪ್ಪ ಅವರಿಗೆ 15 ಅಂಶಗಳನ್ನೊಳಗೊಂಡ ವರದಿಯೊಂದನ್ನು ನೀಡಿದೆ.

ಇಂದು ಸಿಎಂ ಯಡಿಯೂರಪ್ಪ ಅವರ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ದಿನೇಶ ಗುಂಡೂರಾವ್,ಮಾಜಿ ಡಿಸಿಎಂ ಜಿ ಪರಮೇಶ್ವರ್, ಮಾಜಿ ಸ್ಪೀಕರ್ ರಮೇಶ್‌ ಕುಮಾರ್, ಶಾಸಕ ಅಜೇಯ ಸಿಂಗ್ ಸೇರಿ ಎಲ್ಲರೂ ಒಟ್ಟಾರೆ ಈ ವರದಿಯನ್ನು ಸರ್ಕಾರಕ್ಕೆ ನೀಡಿದ್ದಾರೆ.

ಕಾಂಗ್ರೆಸ್ ನಿಯೋಗದ ವರದಿಯಲ್ಲಿ ಏನಿದೆ?

1. ಕೊರೋನಾ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ, ಆರ್ಥಿಕ ಸಹಾಯ ನೀಡಲು ಕೇಂದ್ರಕ್ಕೆ ಒತ್ತಾಯ ಮಾಡಿ

2. ಪ್ರತಿ 10 ಲಕ್ಷ ಜನರಲ್ಲಿ 10 ಸಾವಿರ ಜನರಿಗೆ ಟೆಸ್ಟ್ ಆಗಬೇಕಿದೆ, ಪ್ರತಿ ಜಿಲ್ಲೆಗೊಂದು ಟೆಸ್ಟಿಂಗ್ ಲ್ಯಾಬ್, ಟೆಸ್ಟಿಂಗ್ ಕಿಟ್ ನೀಡಿ, ಅಗತ್ಯ ವೈದ್ಯರು ನರ್ಸ್ ಗಳನ್ನು ಒದಗಿಸಿ.

3. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಅವಕಾಶ ಮಾಡಿಕೊಡಿ
ಕೊರೋನಾ ರೆಡ್ ಜೋನ್ ಭಾಗದಲ್ಲಿ ಸೀಲ್ ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಿ.4. ಕೊರೋನಾ ವಿರುದ್ಧ ಹೋರಾಡುತ್ತಿರೋ ವೈದ್ಯರಿಗೆ ವಿಮಾ ಸೌಲಭ್ಯ ನೀಡಿರೋದು ಶ್ಲಾಘನೀಯ.

5. ಕೊರೋನಾ ವಿಚಾರದಲ್ಲಿ ಒಂದು ಧರ್ಮ, ಜಾತಿಯನ್ನ ಗುರಿಯಾಗಿಸಿಕೊಂಡು ಮಾಡುತ್ತಿರೋ ಆರೋಪಕ್ಕೆ ಅಪಪ್ರಚಾರಕ್ಕೆ ಬ್ರೇಕ್ ಹಾಕಿ.

6. ನಿಮ್ಮ ಪಕ್ಷದ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನೆ ಮಾಡ್ತಿದ್ದಾರೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಿ.

7. ಲಾಕ್ ಡೌನ್ ಅವಧಿಯಲ್ಲೂ ಸರ್ಕಾರದ ಆಹಾರದ ಕಿಟ್ ಮೇಲಿನ ಸರ್ಕಾರದ ಲೇಬಲ್ ತೆಗೆದು ಆಡಳಿತ ಪಕ್ಷದ ಶಾಸಕರು ತಮ್ಮ ಲೇಬಲ್ ಹಾಕಿ ವಿತರಣೆ ಮಾಡುತ್ತಿದ್ದಾರೆ  ಇಂತಹ ಕೃತ್ಯಕ್ಕೆ ಕೂಡಲೇ ಬ್ರೇಕ್ ಹಾಕಿ

8. ಸುಳ್ಳು ಸುದ್ದಿ ಹರಡುವ ಮೂಲಕ ಸಮಾಜದ ಶಾಂತಿ ಕದಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡ ಪೊಲೀಸ್ ಅಧಿಕಾರಿಗಳನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ. ಇದನ್ನು ಕೂಡಲೇ ವಾಪಾಸ್ ಪಡೆಯಿರಿ.

9. ಸರ್ಕಾರ ನೀಡುತ್ತಿರುವ ಅನುದಾನದಲ್ಲಿ ತಾರತಮ್ಯ ಎಸಗಲಾಗುತ್ತಿದ್ದು ಇದನ್ನು ಸರಿಪಡಿಸಿ.

10. ಕೊರೋನಾ ರೆಡ್ ಝೋನ್ ನಲ್ಲಿ ಕಟ್ಟುನಿಟ್ಟಾಗಿ ಲಾಕ್ ಡೌನ್ ಪಾಲನೆ ಮಾಡಿ

11. ಕೊರೋನಾ ವಿಮಾ ಸೌಲಭ್ಯವನ್ನು ಆಶಾ ಕಾರ್ಯಕರ್ತೆಯರು, ನರ್ಸ್ ಗಳು, ಪ್ಯಾರಾ ಮೆಡಿಕಲ್ ಸಿಬ್ಬಂದಿಗೂ ವಿಸ್ತರಣೆ ಮಾಡಿ.

12. ನಷ್ಟ ಅನುಭವಿಸಿದ ರೈತರಿಗೆ ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿ ಅಡಿಯಲ್ಲಿ ಪರಿಹಾರ ನೀಡಿ

13. ಹೊರ ರಾಜ್ಯಗಳ ಲಕ್ಷಾಂತರ ಜನ ಲಾಕ್ ಡೌನ್ ನಿಂದ ಸಮಸ್ಯೆಗೆ ಸಿಲುಕಿದ್ದಾರೆ, ಅವರನ್ನು ತಮ್ಮ ತಮ್ಮ ಊರುಗಳಿಗೆ ತೆರಳಲು ಅವಕಾಶ ಕಲ್ಪಿಸಿ.

14. ನರೇಗಾ ಯೋಜನೆಯ ಅಡಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸಿ.

15. ಅಸಂಘಟಿತ ವಲಯದ ವ್ಯಾಪಾರಸ್ಥರು, ಕುಶಲ ಕರ್ಮಿಗಳು, ಅರ್ಚಕರು, ಹಮಾಲಿಗಳು, ಅಡುಗೆ ಕೆಲಸದವರು, ಆಟೋ ಡ್ರೈವರ್ ಗಳು ಸೇರಿ ಇಂಥ ವರ್ಗದವರನ್ನು ವಿಶೇಷ ಪ್ಯಾಕೇಜ್ ರೂಪದಲ್ಲಿ ಲಾಕ್ ಡೌನ್ ಅವಧಿಯಲ್ಲಿ ಪ್ರತಿ ತಿಂಗಳು 10,000 ರೂ. ಹಣ ನೀಡಿ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : ಕೊರೋನಾ ಎಫೆಕ್ಟ್‌; ಮದ್ಯದ ಅಂಗಡಿ ತೆರೆಯದ ಸರ್ಕಾರ, ಕಳ್ಳಬಟ್ಟಿ ಇಳಿಸಲು ಮುಂದಾದ ಜನ!
Youtube Video
First published: April 19, 2020, 12:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories