HOME » NEWS » Coronavirus-latest-news » CONFUSED ON REGISTERING FOR COVID 19 VACCINE HERE ALL YOU NEED TO KNOW SNVS

Vaccine Confusion - ಲಸಿಕೆ ನೊಂದಣಿಗೆ ಆ್ಯಪ್ ಇಲ್ಲ; ವೆಬ್ ತಾಣ ಬಳಸಿ - ಇಲ್ಲಿದೆ ರಿಜಿಸ್ಟ್ರೇಷನ್ ಮಾಹಿತಿ

ಕೋವಿನ್ ಲಸಿಕೆ ವಿತರಣೆಗೆ COWIN ಮೊಬೈಲ್ ಆ್ಯಪ್ ರಚಿಸಲಾಗಿದೆ. ಆದರೆ, ಇದು ಫಲಾನುಭವಿಗಳು ನೊಂದಣಿ ಮಾಡಲು ಅಲ್ಲ, ಲಸಿಕೆ ವಿತರಣೆ ಹಾಗೂ ಆಡಳಿತದ ದೃಷ್ಟಿಯಿಂದ ತಯಾರಿಸಿದ ಆ್ಯಪ್ ಆಗಿದೆ. ಲಸಿಕೆಗೆ ನೊಂದಾಯಿಸಲು www.cowin.gov.in ವೆಬ್ ತಾಣವನ್ನು ಬಳಸಬಹುದು.

news18
Updated:March 1, 2021, 11:56 AM IST
Vaccine Confusion - ಲಸಿಕೆ ನೊಂದಣಿಗೆ ಆ್ಯಪ್ ಇಲ್ಲ; ವೆಬ್ ತಾಣ ಬಳಸಿ - ಇಲ್ಲಿದೆ ರಿಜಿಸ್ಟ್ರೇಷನ್ ಮಾಹಿತಿ
ಸಾಂದರ್ಭಿಕ ಚಿತ್ರ
  • News18
  • Last Updated: March 1, 2021, 11:56 AM IST
  • Share this:
ಬೆಂಗಳೂರು: ಇವತ್ತಿನಿಂದ ಭಾರತದಲ್ಲಿ ಅತಿದೊಡ್ಡ ಹಾಗೂ ಮೂರನೇ ಹಂತದ ಲಸಿಕಾ ಅಭಿಯಾನ ನಡೆಯುತ್ತಿದೆ. ಪ್ರಧಾನಿ ಮೋದಿ ಅವರು ಅಭಿಯಾನಕ್ಕೆ ಚಾಲನೆ ನೀಡಿ, ಭಾರತ್ ಬಯೋಟೆಕ್​ನ ವ್ಯಾಕ್ಸಿನ್ ಪಡೆದು ಮೇಲ್ಪಂಕ್ತಿ ಹಾಕಿದ್ದಾರೆ. ಈ ಮೂರನೇ ಹಂತದ ಲಸಿಕಾ ಅಭಿಯಾನದಲ್ಲಿ 27 ಕೋಟಿ ಮಂದಿ ಫಲಾನುಭವಿಗಳ ಗುರಿ ಇದೆ. 60 ವರ್ಷ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರು ಹಾಗೂ ನಿರ್ದಿಷ್ಟ ರೋಗಗಳಿರುವ 45ರಿಂದ 59 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಈ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ. ಈ ಮೂರನೇ ಹಂತದ ಅಭಿಯಾನಕ್ಕಾಗಿ ಫಲಾನುಭವಿಗಳು ಮೊದಲು ನೊಂದಣಿ ಮಾಡಿಕೊಳ್ಳಬೇಕು. ಆದರೆ, ಇವತ್ತು ನೊಂದಣಿ ವಿಚಾರದಲ್ಲಿ ಗೊಂದಲಗಳು ಮೂಡಿ ಅನೇಕ ಕಡೆ ಸರ್ವರ್ ಕ್ರ್ಯಾಷ್ ಆದ ದೂರುಗಳು ಬಂದಿವೆ.

COWIN ಎಂಬ ಮೊಬೈಲ್ ಆ್ಯಪ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು ಎಂಬ ಸಂದೇಶಗಳು ಮಾಧ್ಯಮಗಳಲ್ಲಿ ನಿರಂತರವಾಗಿ ಬಿತ್ತರವಾಗಿದ್ದೇ ಈ ಗೊಂದಲಕ್ಕೆ ಕಾರಣವಾಗಿದೆ. COWIN ಮೊಬೈಲ್ ಅಪ್ಲಿಕೇಶನ್ ಅನ್ನು ಅಡ್ಮಿನ್​ಗಳಿಗಷ್ಟೇ ಅವಕಾಶ ಕೊಡಲಾಗಿದೆ. ಫಲಾನುಭವಿಗಳು ಹೆಸರು ನೊಂದಾಯಿಸಲು www.cowin.gov.in ವೆಬ್ ತಾಣವನ್ನು ಪ್ರವೇಶಿಸಬೇಕಾಗುತ್ತದೆ. ಅಲ್ಲಿ ಅರ್ಹ ಫಲಾನುಭವಿಗಳು ತಮ್ಮ ಮೊಬೈಲ್ ನಂಬರ್ ಹಾಗೂ ಆಧಾರ್ ನಂಬರ್ ಅನ್ನು ನಮೂದಿಸಬೇಕಾಗುತ್ತದೆ.

ಇದನ್ನೂ ಓದಿ: ಲಸಿಕೆ ನೀಡಿದ ನರ್ಸ್​ಗೆ ಪ್ರಧಾನಿ ಮೋದಿ ಮೆಚ್ಚುಗೆ; ಸಂಭಾಷಣೆಯ ಸಾರ ಬಿಚ್ಚಿಟ್ಟ ಏಮ್ಸ್​ ಆಸ್ಪತ್ರೆ ದಾದಿ

45ರಿಂದ 59 ವರ್ಷ ವಯಸ್ಸಿನವರು ಸರ್ಕಾರ ನಿರ್ದಿಷ್ಟಪಡಿಸಿದ ಯಾವ ರೋಗವನ್ನು ಹೊಂದಿದ್ದಾರೆ ಎಂಬುದನ್ನು ನಮೂದಿಸಬೇಕು. ವೈದ್ಯರಿಂದ ಅದರ ಪ್ರಮಾಣಪತ್ರ ಹೊಂದಿರಬೇಕು. ನೀವು ಯಾವ ಲಸಿಕಾ ಕೇಂದ್ರದಲ್ಲಿ ವ್ಯಾಕ್ಸಿನ್ ಪಡೆಯಲು ಇಚ್ಛಿಸುತ್ತೀರಿ, ಯಾವ ದಿನದಂದು ಹಾಕಿಸಿಕೊಳ್ಳುತ್ತೀರಿ ಎಂಬುದನ್ನೂ ಆಯ್ಕೆ ಮಾಡಿಕೊಳ್ಳಬಹುದು.



ವೆಬ್ ಸೈಟ್​ನಲ್ಲಿ ನೀವು ನೊಂದಣಿ ಮಾಡಲು ಆಗದೇ ಹೋದರೆ ಲಸಿಕಾ ಕೇಂದ್ರಕ್ಕೆ ಹೋಗಿ ಮುಖತಃ ನೊಂದಣಿ ಮಾಡಿಸಬಹುದು. ಅದಕ್ಕೆ ಆಧಾರ್ ಕಾರ್ಡ್ ಅಥವಾ ಬೇರೆ ನಿರ್ದಿಷ್ಟ ಗುರುತು ಚೀಟಿ ಅನ್ನು ತೆಗೆದುಕೊಂಡು ಹೋಗಬೇಕು. ಇನ್ನು, ಲಸಿಕೆ ಹಾಕಿಸಿಕೊಳ್ಳುವಾಗಲೂ ಆಧಾರ್ ಕಾರ್ಡ್ ಹಾಗೂ ಅಗತ್ಯಬಿದ್ದರೆ ವೈದ್ಯರ ಪ್ರಮಾಣಪತ್ರವನ್ನೂ ತೆಗೆದುಕೊಂಡು ಹೋಗಬೇಕು.

ಇದನ್ನೂ ಓದಿ: ಲಸಿಕೆ ಪಡೆದ ಪ್ರಧಾನಿ; ಇಂದಿನಿಂದ 27 ಕೋಟಿ ಮಂದಿಗೆ ವ್ಯಾಕ್ಸಿನ್ ನೀಡುವ ಮಹಾ ಅಭಿಯಾನ

ಒಂದೇ ಮೊಬೈಲ್ ನಂಬರ್​ಗೆ ಕುಟುಂಬದ ಇತರ ಸದಸ್ಯರ ಹೆಸರನ್ನೂ ವ್ಯಾಕ್ಸಿನ್​ಗಾಗಿ ನೊಂದಾಯಿಸಲು ಅವಕಾಶ ಇದೆ. ವ್ಯಾಕ್ಸಿನ್​ನ ಮೊದಲ ಡೋಸ್ ಪಡೆದು 29 ದಿನಗಳ ಬಳಿಕ ಎರಡನೇ ಡೋಸ್ ಹಾಕಿಸಿಕೊಳ್ಳಲು ನೊಂದಾಯಿಸಬೇಕಾಗುತ್ತದೆ. ಸದ್ಯ ಈ ಮೂರನೇ ಹಂತದ ಲಸಿಕಾ ಅಭಿಯಾನದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲೂ ವ್ಯಾಕ್ಸಿನ್ ಸೌಲಭ್ಯ ಇದ್ದು, ಒಂದು ಡೋಸ್​ಗೆ 250 ರೂ ಕೊಡಬೇಕಾಗುತ್ತದೆ.
Published by: Vijayasarthy SN
First published: March 1, 2021, 11:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories