’ಎ ಸಿಂಪ್ಟಮ್ ರೋಗಿಗಳಿಗೂ ಕಡ್ಡಾಯ ಕ್ವಾರಂಟೈನ್; ಸಚಿವ ಶ್ರೀರಾಮುಲು ಸ್ಪಷ್ಟನೆ

ಲಾಕ್‌ಡೌನ್ ಕುರಿತು ಮಾತನಾಡಿರುವ ಶ್ರೀರಾಮುಲು ಬೆಂಗಳೂರಿನ ಎಲ್ಲಾ ಶಾಸಕರನ್ನು ಕರೆದು ಸಿಎಂ ಸಭೆ ಮಾಡಿದ್ದಾರೆ. ಅನೇಕ ಸಲಹೆಗಳನ್ನು ಕೂಡ ಪಡೆದಿದ್ದಾರೆ. ಅಲ್ಲದೆ, ಎಂಥ ಪರಿಸ್ಥಿತಿಯಲ್ಲಿಯೂ ಬೆಂಗಳೂರಲ್ಲಿ ಲಾಕ್‌ಡೌನ್ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಸಚಿವ ಬಿ ಶ್ರೀರಾಮುಲು

ಸಚಿವ ಬಿ ಶ್ರೀರಾಮುಲು

  • Share this:
ಬೆಂಗಳೂರು (ಜೂನ್‌ 26); ರೋಗದ ಲಕ್ಷಣಗಳು ಕಾಣಿಸಿಕೊಳ್ಳದ ಎ ಸಿಂಪ್ಟಮ್‌ ರೋಗಿಗಳಿಗೂ ಇನ್ನೂ ಕ್ವಾರಂಟೈನ್‌ ಕಡ್ಡಾಯ ಎಂದು ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಿಸುವ ಮತ್ತು ಲಾಕ್‌ಡೌನ್‌ ಕುರಿತು ಚರ್ಚಿಲು ಸಿಎಂ ಯಡಿಯೂರಪ್ಪ ಶಾಸಕರ ಸಭೆ ಕರೆದಿದ್ದರು. ಈ ಸಭೆಯ ಬಳಿಕ ಮಾತನಾಡಿರುವ ಶ್ರೀರಾಮುಲು, "ಎ ಸಿಂಪ್ಟಮ್‌ ರೋಗಿಗಳನ್ನೂ ಕೋವಿಡ್‌ ರೋಗಿಗಳು ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಅವರೆನ್ನೆಲ್ಲಾ ಕೋವಿಡ್ ಕೇರ್ ಗಳಿಗೆ ಸ್ಥಳಾಂತರ ಮಾಡಲಾಗುತ್ತದೆ. ಅಲ್ಲದೆ, ಕಡ್ಡಾಯ ಕ್ವಾರಂಟೈನ್ ಮಾಡಲಾಗುವುದು" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಕೊರೋನಾ ಚಿಕಿತ್ಸೆ ನೀಡಿ - ಪ್ರಧಾನಿ ಮೋದಿಗೆ ಜಿ.ಸಿ. ಚಂದ್ರಶೇಖರ್ ಪತ್ರ

ಇದೇ ಸಂದರ್ಭದಲ್ಲಿ ಲಾಕ್‌ಡೌನ್ ಕುರಿತು ಮಾತನಾಡಿದ ಅವರು, "ಬೆಂಗಳೂರಿನ ಎಲ್ಲಾ ಶಾಸಕರನ್ನು ಕರೆದು ಸಿಎಂ ಸಭೆ ಮಾಡಿದ್ದಾರೆ. ಅನೇಕ ಸಲಹೆಗಳನ್ನು ಕೂಡ ಪಡೆದಿದ್ದಾರೆ. ಅಲ್ಲದೆ, ಎಂಥ ಪರಿಸ್ಥಿತಿಯಲ್ಲಿಯೂ ಬೆಂಗಳೂರಲ್ಲಿ ಲಾಕ್‌ಡೌನ್ ಮಾಡಲಾಗುವುದಿಲ್ಲ" ಎಂದು ತಿಳಿಸಿದ್ದಾರೆ.
First published: