ಕೊರೋನಾ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ನಿರ್ಬಂಧ; ಶುಕ್ರವಾರದ ನಮಾಜಿಗೆ ಕಟ್ಟುಪಾಡು

ಕರ್ನಾಟಕದಲ್ಲಿ ಇಸ್ಲಾಮ್ ಧರ್ಮದ ಸರ್ವೋಚ್ಚ ಸಂಸ್ಥೆಯಾದ ಇಮರತ್-ಎ-ಶರಿಯಾ ನಡೆಸಿದ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ಬೆಂಗಳೂರು(ಮಾ. 18): ಕೊರೋನಾ ವೈರಾಣು ಸುಲಭವಾಗಿ ಹರಡುವ ಅಪಾಯ ಇರುವುದರಿಂದ ಗುಂಪುಗೂಡುವುದನ್ನು ಆದಷ್ಟೂ ತಪ್ಪಿಸಿ ಎಂದು ಸರ್ಕಾರ ಮತ್ತು ಆಡಳಿತಗಳು ಎಚ್ಚರಿಕೆ ಕೊಡುತ್ತಲೇ ಇವೆ. ಅನೇಕ ದೇವಸ್ಥಾನಗಳಲ್ಲಿ ಈ ನಿಟ್ಟಿನಲ್ಲಿ ನಿರ್ಬಂಧಗಳನ್ನ ಹೇರಲಾಗಿದೆ. ಜಾತ್ರೆಗಳನ್ನು ರದ್ದುಮಾಡಲಾಗಿದೆ. ಮುಸ್ಲಿಮ್ ಧರ್ಮೀಯರು ಹೆಚ್ಚು ಸೇರುವ ಶುಕ್ರವಾರ ನಮಾಜಿಗೂ ಕೆಲ ನಿರ್ಬಂಧಗಳನ್ನ ವಿಧಿಸಲಾಗಿದೆ. ಶುಕ್ರವಾರದ ನಮಾಜನ್ನು ಕೇವಲ 15 ನಿಮಿಷದಲ್ಲಿ ಮುಗಿಸಬೇಕು ಎಂದು ಕರ್ನಾಟಕದ ಆಮೀರ್-ಇ-ಶರಿಯತ್ ಆದ ಮೌಲಾನ ಸಗೀರ್ ಅಹ್ಮದ್ ರಶದಿ ಅವರು ನಿರ್ದೇಶನ ನೀಡಿದ್ಧಾರೆ.

  ಕರ್ನಾಟಕದಲ್ಲಿ ಇಸ್ಲಾಮ್ ಧರ್ಮದ ಸರ್ವೋಚ್ಚ ಸಂಸ್ಥೆಯಾದ ಇಮರತ್-ಎ-ಶರಿಯಾ ನಡೆಸಿದ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕದ ಆಮೀರ್-ಎ-ಶರಿಯತ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಧಾರ್ಮಿಕ ಪಂಡಿತರು, ಬುದ್ಧಿಜೀವಿಗಳು ಹಾಗೂ ವೈದ್ಯರೂ ಪಾಲ್ಗೊಂಡಿದ್ದರು. ಈ ವೇಳೆ ಕೊರೋನಾ ಹರಡದಂತೆ ಮಸೀದಿಗಳಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಅವಲೋಕನ ಮಾಡಲಾಯಿತು. ನಂತರ ರಾಜ್ಯದಲ್ಲಿರುವ ಎಲ್ಲಾ ಮಸೀದಿಗಳಿಗೆ ಈ ಸಂದೇಶ ರವಾನೆ ಮಾಡಲಾಗಿದೆ.

  ಇದನ್ನೂ ಓದಿ: ಕೊರೋನಾ ಸೋಂಕಿನಿಂದ ಅಮೆರಿಕದಲ್ಲಿ 22 ಲಕ್ಷ ಮಂದಿ ಸಾವು?: ಬ್ರಿಟಿಷ್ ಅಧ್ಯಯನದ ಅಂದಾಜು

  ಅದರಂತೆ, ಈ ಕೆಳಕಂಡ ಕ್ರಮಗಳನ್ನು ಸಭೆಯಲ್ಲಿ ಸೂಚಿಸಲಾಗಿದೆ:

  1) ಶುಕ್ರವಾರದ ನಮಾಜನ್ನು ಎಲ್ಲಾ ವಿಧಿವಿಧಾನ ಸೇರಿ 15 ನಿಮಿಷಗಳಲ್ಲಿ ಮುಗಿಸಬೇಕು. ಸಾಮಾನ್ಯ ಸಂದರ್ಭದಲ್ಲಿ ಶುಕ್ರವಾರ ನಮಾಜು ಪೂರ್ಣಗೊಳ್ಳಲು ಒಂದೂವರೆ ತಾಸು ಬೇಕಾಗುತ್ತದೆ. ಅಷ್ಟು ಹೊತ್ತು ಇದ್ದರೆ ವೈರಸ್ ಹರಡುವ ಸಾಧ್ಯತೆ ದಟ್ಟವಾದ ಹಿನ್ನೆಲೆಯಲ್ಲಿ 15 ನಿಮಿಷಕ್ಕೆ ನಮಾಜು ಮೊಟಕುಗೊಳಿಸಬೇಕು ಎಂದು ಮಸೀದಿಗಳಿಗೆ ಅಪ್ಪಣೆ ಮಾಡಲಾಗಿದೆ.

  2) ಕೊರೋನಾ ರೋಗದ ಲಕ್ಷಣಗಳಿರುವವರು ಮನೆಯಲ್ಲೇ ಇದ್ದು ನಮಾಜು ಮಾಡಬೇಕು.

  3) ಮಸೀದಿಗಳಲ್ಲಿ ವುಜು ಬಳಿಕ ಸಾಮಾನ್ಯ ಟವಲ್ ಹಾಗೂ ಸಾಮಾನ್ಯ ಟೊಪ್ಪಿ ಬಳಕೆಯನ್ನು ತಪ್ಪಿಸಿ.

  4) ಕೊರೋನಾ ವೈರಸ್ ನಿಗ್ರಹಕ್ಕೆ ಸರ್ಕಾರ ಸೂಚಿಸಿರುವ ಮಾರ್ಗದರ್ಶಿ ಮತ್ತು ನಿರ್ದೇಶನಗಳನ್ನು ತಪ್ಪದೇ ಪಾಲಿಸಿ.

  First published: