• Home
 • »
 • News
 • »
 • coronavirus-latest-news
 • »
 • ಸರ್ಕಾರದ ಆದೇಶ ಉಲ್ಲಂಘಿಸಿ ಮದುವೆಯಲ್ಲಿ ಭಾಗಿಯಾದ ಸಿಎಂ ಬಿಎಸ್​ವೈ ಸೇರಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು

ಸರ್ಕಾರದ ಆದೇಶ ಉಲ್ಲಂಘಿಸಿ ಮದುವೆಯಲ್ಲಿ ಭಾಗಿಯಾದ ಸಿಎಂ ಬಿಎಸ್​ವೈ ಸೇರಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು

ಸಿಎಂ ಬಿಎಸ್​ವೈ ವಿರುದ್ಧ ನರಸಿಂಹಮೂರ್ತಿ ಅವರು ದಾಖಲಿಸಿರುವ ದೂರು.

ಸಿಎಂ ಬಿಎಸ್​ವೈ ವಿರುದ್ಧ ನರಸಿಂಹಮೂರ್ತಿ ಅವರು ದಾಖಲಿಸಿರುವ ದೂರು.

ಕಳೆದ ಭಾನುವಾರ (ಮಾರ್ಚ್​ 15) ಬೆಳಗಾವಿಯಲ್ಲಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ಅವರ ಮಗಳ ಮದುವೆ ಸಮಾರಂಭ ನಡೆದಿತ್ತು. ಈ ವಿವಾಹ ಕಾರ್ಯಕ್ರಮದಲ್ಲಿ ಸಿಎಂ ಸೇರಿ ಹಲವು ಶಾಸಕರು, ಸಚಿವರು ಭಾಗಿಯಾಗಿದ್ದರು.

 • Share this:

  ಬೆಂಗಳೂರು: ರಾಜ್ಯದಲ್ಲೂ ಕೊರೋನಾ ವೈರಸ್​ ವ್ಯಾಪಕವಾಗಿ ಹರಡುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜನ ಸೇರುವ ಪ್ರದೇಶಗಳಾದ ಮಾಲ್​, ಥಿಯೇಟರ್, ಮದುವೆ, ಸಮಾರಂಭಗಳಿಗೆ ಒಂದು ವಾರಗಳ ಕಾಲ ಬಂದ್ ಮಾಡುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರ ಆದೇಶ ನೀಡಿದೆ. ಆದರೆ, ತಾವೇ ನಿಷೇಧ ಹೇರಿ ತಾವು ಮಾತ್ರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಮಾನವ ಹಕ್ಕು ಕಾರ್ಯಕರ್ತರೊಬ್ಬರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. 


  ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಮದುವೆ ಸಮಾರಂಭಗಳನ್ನು ಮುಂದೂಡುವಂತೆ ಸಿಎಂ ಬಿಎಸ್​ವೈ ಕಳೆದ ಶುಕ್ರವಾರ ಆದೇಶ ಹೊರಡಿಸಿದ್ದರು. ಸರ್ಕಾರವೇ ಸುತ್ತೋಲೆ ಹೊರಡಿಸಿದ್ದರೂ ಸಿಎಂ ಬಿಎಸ್​ವೈ ತಮ್ಮ ಸಹೋದ್ಯೋಗಿಯ ಮಗಳ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಅವರಷ್ಟೇ ಅಲ್ಲದೇ, ಅವರೊಂದಿಗೆ ಸಚಿವರು, ಶಾಸಕರು ಪಾಲ್ಗೊಂಡಿದ್ದರು. ಈ ಮೂಲಕ ಸರ್ಕಾರವೇ ಸುತ್ತೋಲೆ ಹೊರಡಿಸಿದ್ದರು ಆದೇಶ ಉಲ್ಲಂಘಿಸಿದ್ದಾರೆ. ಐಪಿಸಿ 188ರ ಅಡಿ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಮಾನವ ಹಕ್ಕು ಕಾರ್ಯಕರ್ತರಾದ ಟಿ.ನರಸಿಂಹ ಮೂರ್ತಿ ಅವರು ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ದೂರು ನೀಡಿದ್ದಾರೆ.

  ಇಂದು ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಮಧ್ಯಾಹ್ನ ರಾಜಭವನದಲ್ಲಿ ಭೇಟಿಯಾದ ನರಸಿಂಹ ಮೂರ್ತಿ ಅವರು, ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಎಲ್ಲ ಶಾಸಕರು, ಸಚಿವರು, ಸಂಸದರ ವಿರುದ್ಧ ದೂರು ದಾಖಲಿಸಿದ್ದಾರೆ.


  ಇದನ್ನು ಓದಿ: ಭಾರತದಲ್ಲಿ ಹೆಚ್ಚಿದ ಕೊರೋನಾವೈರಸ್ ಪ್ರಕರಣ: ಇಲ್ಲಿದೆ ನಗರವಾರು COVID-19 ಪಟ್ಟಿ


  ಕಳೆದ ಭಾನುವಾರ (ಮಾರ್ಚ್​ 15) ಬೆಳಗಾವಿಯಲ್ಲಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ಅವರ ಮಗಳ ಮದುವೆ ಸಮಾರಂಭ ನಡೆದಿತ್ತು. ಈ ವಿವಾಹ ಕಾರ್ಯಕ್ರಮದಲ್ಲಿ ಸಿಎಂ ಸೇರಿ ಹಲವು ಶಾಸಕರು, ಸಚಿವರು ಭಾಗಿಯಾಗಿದ್ದರು.

  Published by:HR Ramesh
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು