HOME » NEWS » Coronavirus-latest-news » COMMUNAL HATRED IN THE NAME OF BED BLOCKING CASE COMPLAINT AGAINST MP TEJASWI SURYA AND MLA RAVI SUBRAMANYA MAK

ಬೆಡ್​ ಬ್ಲಾಕಿಂಗ್ ಹೆಸರಲ್ಲಿ ಕೋಮು ದ್ವೇಷ; ಸಂಸದ ತೇಜಸ್ವಿ ಸೂರ್ಯ ಶಾಸಕರವಿ ಸುಬ್ರಹ್ಮಣ್ಯ ಸೇರಿ ನಾಲ್ವರ ವಿರುದ್ಧ ದೂರು

ಈ ನಡುವೆ ಬೆಡ್​ ಬ್ಲಾಕಿಂಗ್ ದಂಧೆಯಲ್ಲಿ ಸ್ವತಃ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹೆಸರೂ ಇದೀಗ ಕೇಳಿ ಬರುತ್ತಿರುವುದು ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್​ಗೆ ಕಾರಣವಾಗಿದೆ.

news18-kannada
Updated:May 6, 2021, 4:02 PM IST
ಬೆಡ್​ ಬ್ಲಾಕಿಂಗ್ ಹೆಸರಲ್ಲಿ ಕೋಮು ದ್ವೇಷ; ಸಂಸದ ತೇಜಸ್ವಿ ಸೂರ್ಯ ಶಾಸಕರವಿ ಸುಬ್ರಹ್ಮಣ್ಯ ಸೇರಿ ನಾಲ್ವರ ವಿರುದ್ಧ ದೂರು
ತೇಜಸ್ವಿ ಸೂರ್ಯ.
  • Share this:
ಬೆಂಗಳೂರು (ಮೇ 06); ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ ಪರಿಸ್ಥಿತಿ ಕೈಮೀರಿದೆ. ಆದರೆ, ಕೊರೋನಾ ರೋಗಿಗಳಿಗೆ ರಾಜ್ಯದಲ್ಲಿ ಸೂಕ್ತ ಬೆಡ್​ ಮತ್ತು ಆಕ್ಸಿಜನ್​ ಸೌಲಭ್ಯ ಲಭ್ಯವಾಗುತ್ತಿಲ್ಲ. ಆದರೆ, ಇದಕ್ಕೆ ಬೆಡ್​ ಬ್ಲಾಕಿಂಗ್ ದಂಧೆಯೇ ಕಾರಣ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿ ಪತ್ರಿಕಾಗೋಷ್ಠಿ ನಡೆಸಿದ್ದರು. ಆದರೆ, ಪ್ರಕರಣದ ಬಗ್ಗೆ ಸೂಕ್ತ ಮಾಹಿತಿ ನೀಡಬೇಕಿದ್ದ ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿ ವಾರ್​ ರೂಮ್​ನಲ್ಲಿರುವವರೆ ಬೆಡ್​ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ 16 ಜನ ಮುಸ್ಲಿಂ ನೌಕರರ ಹೆಸರನ್ನು ಓದಿದ್ದರು. ಇಷ್ಟಕ್ಕೆ ಸುಮ್ಮನಾಗದ ತೇಜಸ್ವಿ ಸೂರ್ಯ ಇದೇನು ಮದರಸಾ, ಹಜ್ ಕಮಿಟೀನ ಅಥವಾ ಬಿಬಿಎಂಪಿ ಕಚೇರಿಯಾ? ಎಂದು ಪ್ರಶ್ನೆ ಮಾಡುವ ಮೂಲಕ ಕೊರೋನಾ ಸಂದರ್ಭದಲ್ಲೂ ಕೋಮು ಸೌಹಾರ್ದ ಕದಡುವ ಕೆಲಸಕ್ಕೆ ಮುಂದಾಗಿದ್ದರು.ಆದರೆ, ಸಂಸದರ ದೂರಿನ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆಗೆ ಇಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ, ಈ ಪೈಕಿ ಸಂಸದ ತೇಜಸ್ವಿ ಸೂರ್ಯ ಓದಿದ ಯಾವ ಮುಸ್ಲಿಂ ಯುವಕರನ್ನು ಬಂಧಿಸಿಲ್ಲ. ಬದಲಾಗಿ ನೇತ್ರಾ ಮತ್ತು ರೋಹಿತ್ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಅಲ್ಲದೆ, ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ ಮುಸ್ಲಿಂ ಯುವಕರಿಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಎಂಬುದು ದೃಢಪಟ್ಟಿದೆ. ಈ ನಡುವೆ ಬೆಡ್​ ಬ್ಲಾಕಿಂಗ್ ದಂಧೆಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹೆಸರೂ ಇದೀಗ ಕೇಳಿ ಬರುತ್ತಿರುವುದು ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್​ಗೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕರಾದ ರವಿ ಸುಬ್ರಹ್ಮಣ್ಯ ,ಉದಯ್ ಗರುಡಾಚಾರ್ ಮತ್ತು ಸತೀಶ್ ರೆಡ್ಡಿಯಿಂದ ವಿರುದ್ಧ ಬೆಡ್ ಬ್ಲಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಸಮುದಾಯದ ವಿರುದ್ಧ ಮಾತನಾಡಿ ಕೋಮು ಸೌಹಾರ್ದತೆ ಹಾಳು ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ ವಕೀಲರಿಂದ ದೂರು ದಾಖಲಾಗಿದೆ.  ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆಯೂ ಒತ್ತಾಯಿಸಲಾಗಿದೆ.

ತೇಜಸ್ವಿ ಸೂರ್ಯ ವಿರುದ್ಧ ಜಮೀರ್ ಕಿಡಿ:ಇದೇ ವೇಳೆ ಬೆಡ್​​ ಬ್ಲಾಕಿಂಗ್​ ಪ್ರಕರಣ ಬಯಲಿಗೆಳೆದ ಸಂಸದ ತೇಜಸ್ವಿ ಸೂರ್ಯ 17 ಮಂದಿ ಮುಸ್ಲಿಂ ಸಿಬ್ಬಂದಿಯ ಹೆಸರನ್ನು ಮಾತ್ರ ಉಲ್ಲೇಖಿಸಿರುವುದರ ವಿರುದ್ಧ ಕಾಂಗ್ರೆಸ್​ ಶಾಸಕ ಜಮೀರ್​ ಅಹಮದ್​ ಖಾನ್​​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಾಮರಾಜಪೇಟೆ ಶಾಸಕ ಜಮೀರ್​, 205 ಸಿಬ್ಬಂದಿಯಲ್ಲಿ ಕೇವಲ ಮುಸ್ಲಿಮರ ಹೆಸರನ್ನು ಮಾತ್ರ ಉಲ್ಲೇಖಿಸಿರೋದು ಎಷ್ಟು ಸರಿ ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾಡಿದರು. ಭಾವೋದ್ವೇಗಕ್ಕೆ ಒಳಗಾದ ಜಮೀರ್​ ಅವರು ರಂಜಾನ್​ ಸಮಯದಲ್ಲಿ ಹೀಗೆಲ್ಲಾ ಮಾಡುತ್ತಿರಲ್ಲ, ನಿಮಗೆ ಒಳ್ಳೆಯದಾಗುತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೇಜಸ್ವಿ ಸೂರ್ಯ ಬೆಡ್​​ ಬ್ಲಾಕಿಂಗ್​ ದಂಧೆ ಬಯಲಿಗೆಳೆದು ಒಳ್ಳೆಯ ಕೆಲಸ ಮಾಡಿದ್ದಾರೆ. ಅದಕ್ಕೆ ನಿಮ್ಮಗೆ ಧನ್ಯವಾದ ಹೇಳ್ತಿನಿ. ಆದರೆ ನಿಮ್ಮ ಸರ್ಕಾರದ ಆಡಳಿತದಲ್ಲೇ ಈ ಬೆಡ್ ಆಕ್ರಮ ನಡೆದಿದೆ. ಹಾಗಾದರೆ ನೀವು ಸಿಎಂ ಯಡಿಯೂರಪ್ಪ ರಾಜೀನಾಮೆ ಕೇಳಬೇಕು ಅಲ್ವಾ. ಏಕೆ ತೇಜಸ್ವಿ ಅವರೇ ಸಿಎಂ ರಾಜೀನಾಮೆ ಕೇಳುತ್ತಿಲ್ಲ ಎಂದು ಜಮೀರ್​ ಪ್ರಶ್ನಿಸಿದರು. ನೀವು ಆಕ್ರಮಣದಲ್ಲಿ ಭಾಗಿಯಾದವರ ಹೆಸರು ಹೇಳಿದ್ರಿ. ಎಲ್ಲಾ ಮುಸ್ಲಿಂ ಯವಕರ ಹೆಸರನ್ನು ಹೇಳಿದ್ದೀರ ಏಕೆ ಬೇರೆ ಯಾರು ಹೆಸರು ಸಿಕ್ಕಿಲ್ವಾ. ಇಂತಹ ಪ್ಲಬಿಕ್ ಸಿಟಿ ಬೇಕಾ ತೇಜಸ್ವಿ ಅವರೇ. ಇಂತಹ ಹೀನ ಕೃತ್ಯವನ್ನು ಮೊದಲು ನಿಲ್ಲಿಸಿ ಎಂದು ಕುಟುಕಿದರು.

ಬೆಡ್​ ಬ್ಲಾಕಿಂಗ್ ದಂಧೆಯಲ್ಲಿ ಶಾಸಕ ಸತೀಶ್​ ರೆಡ್ಡಿ ಪಿಎ ಹರೀಶ್​ ಎಂಬುವರು ಶಾಮೀಲಾಗಿದ್ದಾರೆ ಎಂದು ಪೇಪರ್​ ತೋರಿಸಿದ ಜಮೀರ್​ ಇದಕ್ಕೆ ತೇಜಸ್ವಿ ಸೂರ್ಯ ಏನ್​ ಹೇಳ್ತಾರೆ ಎಂದು ಪ್ರಶ್ನಿಸಿದರು. ಸಂಸದರು ಉಲ್ಲೇಖಿಸಿರುವ 17 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ರೆ ನಾನು ಅವರಿಗೆಲ್ಲಾ ಕೆಲಸ ಕೊಡುತ್ತೇನೆ ಎಂದು ಜಮೀರ್​ ಇದೇ ವೇಳೆ ಘೋಷಿಸಿದರು.

ಇದನ್ನೂ ಓದಿ: ತೇಜಸ್ವಿ ಸೂರ್ಯ ಉಲ್ಲೇಖಿಸಿರುವ 17 ಮಂದಿ ಮುಸ್ಲಿಮರಿಗೆ ನಾನು ಕೆಲಸ ಕೊಡ್ತೀನಿ: ಶಾಸಕ ಜಮೀರ್

ಈ ಹಿಂದೆ ಸಂಸದರ ಕ್ಷೇತ್ರದಲ್ಲಿ ಕೋವಿಡ್ ನಿಂದ ಮೃತಪಟ್ಟವರನ್ನು ಹಿಂದೂ, ಮುಸ್ಲಿಂ ಅಂತ ನೋಡದೆ ನಾವು ಅಂತ್ಯ ಸಂಸ್ಕಾರದ ಮಾಡಿದ್ದೀವಿ. ಅವಾಗ ನೀವು ಎಲ್ಲಿ ಹೋಗಿದ್ರಿ ತೇಜಸ್ವಿ ಅವರೇ. ನಾವು ಯಾವ ಧರ್ಮ ಯಾವ ಜಾತಿ ಅಂತ ಕೇಳಿ ಅಂತ್ಯಸಂಸ್ಕಾರ ಮಾಡಿಲ್ಲ. ನೀವು ಜಾತಿ-ಧರ್ಮ ನೋಡದನ್ನು ಬಿಡಿ. ಇದೇ ಕೊನೆ ಈ ರೀತಿ ಮಾತನಾಡಬೇಡಿ ಎಂದು ಜಮೀರ್​ ಎಚ್ಚರಿಕೆ ನೀಡಿದರು. ಇದು ನಮ್ಮ ದೇಶ. ರಂಜಾನ್​ ವೇಳೆ ಹೀಗೆಲ್ಲಾ ನೋಯಿಸಬೇಡಿ ಎಂದು ಜಮೀರ್​ ಸುದ್ದಿಗೋಷ್ಠಿಯಲ್ಲಿ ಭಾವುಕರಾದರು.ಮುಸ್ಲಿಮರಿಗೆ ಮಾತ್ರ ಆಕ್ಸಿಜನ್​ ಕೊಡಿ ಎಂದು ಅವರು ಹೇಳಿದ್ದಾರಾ?
Youtube Video

ಬಹರೈನ್​​ ರಾಷ್ಟ್ರದಿಂದ ನಿನ್ನೆ ಆಕ್ಸಿಜನ್​ ಬಂದಿದೆ. ಅದು ಮುಸ್ಲಿಂ ರಾಷ್ಟ್ರ ಅಲ್ಲವೇ ಮತ್ತೇಕೆ ಅಲ್ಲಿಂದ ಆಕ್ಸಿಜನ್​ ತರಿಸಿಕೊಂಡಿದ್ದೀರ. ನಾವು ಕಳುಹಿಸಿದ ಆಕ್ಸಿಜನ್​​ನ ಮುಸ್ಲಿಮರಿಗೆ ಮಾತ್ರ ಬಳಸಿ ಎಂದು ಅಲ್ಲಿನವರು ಹೇಳಿದ್ದಾರಾ? ಪರಿಸ್ಥಿತಿ ಹೀಗಿರುವಾಗ ಸಂಸದರಾದ ತೇಜಸ್ವಿ ಸೂರ್ಯ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ ಎಂದು ಜಮೀರ್​​ ತಿರುಗೇಟು ನೀಡಿದರು.
Published by: MAshok Kumar
First published: May 6, 2021, 3:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories