ಲಾಕ್ ಡೌನ್ ನಿಂದ ಅದ್ಧೂರಿ ಮದುವೆಗೆ ಬ್ರೇಕ್ - ಸರಳ ವಿವಾಹವಾಗಿ ಮಾದರಿಯಾದ ಅಂತಾರಾಷ್ಟ್ರೀಯ ಕುಸ್ತಿಪಟು

ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಗಳ ವಿಜೇತರಾಗಿರುವ ರಫೀಕ್ ಚಿತ್ರದುರ್ಗದ ಹಿನಾ ಕೌಸರ್ ಜೊತೆ ಹತ್ತು ಜನರ ಮಧ್ಯೆ ಸರಳ ವಿವಾಹವಾಗಿದ್ದಾರೆ

news18-kannada
Updated:April 23, 2020, 5:01 PM IST
ಲಾಕ್ ಡೌನ್ ನಿಂದ ಅದ್ಧೂರಿ ಮದುವೆಗೆ ಬ್ರೇಕ್ - ಸರಳ ವಿವಾಹವಾಗಿ ಮಾದರಿಯಾದ ಅಂತಾರಾಷ್ಟ್ರೀಯ ಕುಸ್ತಿಪಟು
ಸರಳ ವಿವಾಹವಾದ ಕುಸ್ತಿಪಟು ರಫೀಕ್
  • Share this:
ಧಾರವಾಡ(ಏ.23): ಕೊರೋನಾ ವೈರಸ್ ಭೀತಿಯಿಂದ ಇಡೀ ರಾಷ್ಟ್ರವನ್ನೇ ಲಾಕ್‌ ಡೌನ್ ಮಾಡಲಾಗಿದೆ. ಯಾರು ಕೂಡ ‌ಮನೆಯಿಂದ ಹೊರಗೆ ಬರದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಸಮಯದಲ್ಲಿ ಮದುವೆ ನಡೆಯುವುದು ಅಂದ್ರೆ ಸಾಧ್ಯವಾ? ಮದುವೆ ಸಾವಿರಾರು ಮಂದಿ‌ ನೆಂಟರು, ಸ್ನೇಹಿತರು ಸೇರುತ್ತಾರೆ. ಆದರೆ, ಈಗ ಲಾಕ್ ಡೌನ್ ಹಿನ್ನೆಲೆಯಲ್ಲಿ ಅದ್ದೂರಿ ಮದುವೆಗೆ ಸದ್ಯ ಬ್ರೇಕ್ ಬಿದ್ದಿದೆ. ಈ ಸಮಯದಲ್ಲಿಯೇ ಅಂತಾರಾಷ್ಟ್ರೀಯ ಕುಸ್ತಿಪಟುವೊಬ್ಬರು ಸರಳ ವಿವಾಹವಾಗಿ ಇತರರಿಗೆ ಮಾದರಿಯಾಗಿದ್ದಾರೆ.

ಧಾರವಾಡ ತಾಲೂಕಿನ ಶಿಗನಹಳ್ಳಿ ಗ್ರಾಮದ ರಫೀಕ್ ಹೊಳಿ ಸಿಂಪಲ್ ನಿಖಾ ಮಾಡಿಕೊಂಡಿದ್ದಾರೆ. ಕೇವಲ ಐದು ಜನರೊಂದಿಗೆ ಚಿತ್ರದುರ್ಗಕ್ಕೆ ತೆರಳಿ ವಿವಾಹವಾಗಿದ್ದಾರೆ.

ಇವರು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಬೆಳ್ಳಿ ಪದಕ‌ ಪಡೆಯುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದವರು. ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಗಳ ವಿಜೇತರಾಗಿರುವ ರಫೀಕ್ ಚಿತ್ರದುರ್ಗದ ಹಿನಾ ಕೌಸರ್ ಜೊತೆ ಹತ್ತು ಜನರ ಮಧ್ಯೆ ಸರಳ ವಿವಾಹವಾಗಿದ್ದಾರೆ. ತಂದೆ-ತಾಯಿ ಜೊತೆಗೆ ತೆರಳಿ ರಫೀಕ್ ನಿಖಾ ಮಾಡಿಕೊಂಡ ರಫೀಕ್ ಅವರ ಮದುವೆ ಮುಂಚಿತವಾಗಿಯೇ ನಿಶ್ಚಿತವಾಗಿತ್ತು.

ಮೊದಲು ಎಪ್ರಿಲ್ 3 ಮತ್ತು 5 ರಂದು ನಿಶ್ಚಯ ಮಾಡಲಾಗಿತ್ತು, ಆದರೆ, ಲಾಕ್ ಡೌನ್ ಇರುವ ಹಿನ್ನೆಲೆ‌ ಮದುವೆಯನ್ನು ಎಪ್ರಿಲ್ 17 ಮತ್ತು 18 ಕ್ಕೆ‌ ನಿಶ್ಚಯ ಮಾಡಲಾಯಿತು. ಆದರೆ‌ ಮತ್ತೆ‌ ಮೇ 3 ರ ವರೆಗೆ ಲಾಕ್‌ಡೌನ್ ‌ಮುಂದುವರೆದ ಹಿನ್ನೆಲೆ ಎಪ್ರಿಲ್ 22 ರಂದು ಮದುವೆ‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಲಾಕ್ ಡೌನ್ ಉಲ್ಲಂಘಿಸಿ ಸಾವಳಗಿ ಜಾತ್ರೆ - ಮತ್ತೆ ಮೂವರು ಅಧಿಕಾರಿಗಳ ಅಮಾನತು

ಇವರ ವಿವಾಹದಲ್ಲಿ ನೂರಕ್ಕೂ ಹೆಚ್ಚು ಕ್ರೀಡಾ ಸೆಲೆಬ್ರಿಟಿಗಳು ಭಾಗವಹಿಸಬೇಕಿತ್ತು. ಆದರೆ ಈಗ ಸರಳ ವಿವಾಹವಾದ್ದರಿಂದ ಕೆಲವೇ ಆಪ್ತರಷ್ಟೇ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ.‌ ಲಾಕ್ ಡೌನ್ ಮುಗಿದ ಬಳಿಕ ಅದ್ದೂರಿ ರಿಸೆಪ್ಷನ್ ಮಾಡಲು‌ ನಿರ್ಧಾರ ಮಾಡಲಾಗಿದೆ.

(ವರದಿ: ಮಂಜು ಯಡಳ್ಳಿ)
First published: April 23, 2020, 4:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading