ಬೈಕಿನಲ್ಲೇ 430 ಕಿ.ಮೀ ಪ್ರಯಾಣಿಸಿ ಕ್ಯಾನ್ಸರ್ ರೋಗಿಗೆ ಔಷಧಿ ಕೊಟ್ಟ ಪೊಲೀಸ್​ಗೆ ಕಮೀಷನರ್​​​ ಭಾಸ್ಕರ್​​ ರಾವ್ ಸನ್ಮಾನ

ಇದಾದ ನಂತರ ಉಮೇಶ್‍ಗೆ ಫೋನ್ ಮಾಡಿದ್ದ ಪೊಲೀಸ್​​​​ ಕಾನ್ಸ್​ಟೇಬಲ್​​ ಕುಮಾರಸ್ವಾಮಿ ಆನ್‍ನೈಲ್‍ನಲ್ಲಿ ಔಷಧಿ ಬುಕ್ ಮಾಡುವಂತೆ ಉಮೇಶ್‍ಗೆ ತಿಳಿಸಿದ್ದರು. ಇವರು ಹೇಳಿದಂತೆಯೇ ಉಮೇಶ್ ಆನ್‍ಲೈನ್‍ನಲ್ಲಿ ಔಷಧಿ ಬುಕ್ ಮಾಡಿದ್ದರು. ಬಳಿಕ ಕುಮಾರಸ್ವಾಮಿ ಈ ಔಷಧಿಯನ್ನ ತೆಗೆದುಕೊಂಡು ಬೆಂಗಳೂರಿಂದ ಧಾರವಾಡಕ್ಕೆ ತೆರಳಿ ರೋಗಿಗೆ ತಲುಪಿಸಿದ್ದರು.

ಬೈಕಿನಲ್ಲೇ 430 ಕಿ.ಮೀ ಪ್ರಯಾಣಿಸಿ ಕ್ಯಾನ್ಸರ್ ರೋಗಿಗೆ ಔಷಧಿ ಕೊಟ್ಟ ಪೊಲೀಸ್​ಗೆ​ ಭಾಸ್ಕರ್​​ ರಾವ್ ಸನ್ಮಾನ

ಬೈಕಿನಲ್ಲೇ 430 ಕಿ.ಮೀ ಪ್ರಯಾಣಿಸಿ ಕ್ಯಾನ್ಸರ್ ರೋಗಿಗೆ ಔಷಧಿ ಕೊಟ್ಟ ಪೊಲೀಸ್​ಗೆ​ ಭಾಸ್ಕರ್​​ ರಾವ್ ಸನ್ಮಾನ

 • Share this:
  ಬೆಂಗಳೂರು(ಏ.16): ಕೊರೋನಾ ತಡೆಗೆ ಪ್ರಧಾನಿ ನರೇಂದ್ರ ಮೋದಿ ಆದೇಶ ಮೇರೆಗೆ ದೇಶದಲ್ಲಿ ಲಾಕ್​​ಡೌನ್​​ ಜಾರಿಯಾದ ದಿನದಿಂದ ಇಲ್ಲಿಯವರೆಗೂ ಜನರಿಗಾಗಿ ಪೊಲೀಸರು ಶ್ರಮಿಸುತ್ತಲೇ ಇದ್ದಾರೆ. ಹೀಗೆಯೇ ಇತ್ತೀಚೆಗೆ ಏಪ್ರಿಲ್​​ 10ನೇ ತಾರೀಕಿನಂದು ಪೊಲೀಸ್​​ ಕಾನ್ಸ್​ಟೇಬಲ್​​ ಒಬ್ಬರು ಬೆಂಗಳೂರಿನಿಂದ ಬೈಕಿನಲ್ಲೇ 430 ಕಿಲೋ ಮೀಟರ್​​ ದೂರದ ಊರು ಧಾರವಾಡಕ್ಕೆ ಪ್ರಯಾಣಿಸಿ ಕ್ಯಾನ್ಸರ್ ರೋಗಿಯೊಬ್ಬರಿಗೆ ಔಷಧಿ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ಧಾರೆ. ಪೊಲೀಸ್​​​ ಕಾನ್ಸ್​ಟೇಬಲ್​​​ರ ಈ ಕಾರ್ಯಕ್ಕೆ ಬೆಂಗಳೂರು ನಗರ ಪೊಲೀಸ್​​ ಆಯುಕ್ತ ಭಾಸ್ಕರ್​​ ರಾವ್​​​​ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನ ಮಾಡಿದ್ದಾರೆ.

  ಕುಮಾರಸ್ವಾಮಿ ಎಂಬ ಹೆಡ್​​ ಕಾನ್ಸ್​ಟೇಬಲ್​​​ ಕ್ಯಾನ್ಸರ್ ರೋಗಿಯೊಬ್ಬರಿಗೆ ಔಷಧಿ ತಲುಪಿಸಿರುವ ಪೊಲೀಸ್. ಇವರು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್​​ ರಾವ್​​ ಅವರ ಕಚೇರಿಯಲ್ಲೇ ಹೆಡ್​ ಕಾನ್ಸ್​ಟೇಬಲ್​​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಧಾರವಾಡದ ಉಮೇಶ್ ಕೋಟಿ ಎಂಬ ಕ್ಯಾನ್ಸರ್ ರೋಗಿಗೆ ಔಷಧಿ ತಲುಪಿಸಿ ಇತರರಿಗೆ ಮಾದರಿಯಾಗಿದ್ಧಾರೆ.

  ಇತ್ತೀಚೆಗೆ ಯಾವುದೋ ಖಾಸಗಿ ಚಾನೆಲ್​​ನ ಕಾರ್ಯಕ್ರಮವೊಂದರಲ್ಲಿ ಉಮೇಶ್​ ಎಂಬುವರು ತನ್ನ ಕ್ಯಾನ್ಸರ್​​ ರೋಗಕ್ಕೆ ಔಷಧಿ ಸಿಗುತ್ತಿಲ್ಲ ಎಂದು ಹೇಳಿದ್ದರು. ಈ ಔಷದಿ ಕೇವಲ ಬೆಂಗಳೂರಿನಲ್ಲಿ ಮಾತ್ರ ಸಿಗುತ್ತೆ ಎಂದು ಉಮೇಶ್ ಹೇಳಿದ್ದನ್ನು ಕುಮಾರಸ್ವಾಮಿ ಕೇಳಿದ್ದರು.

  ಇದನ್ನೂ ಓದಿ: ವಾಹನ ಸಂಚಾರ, ಫ್ಯಾಕ್ಟರಿ ಬಂದ್ ಆದರೂ ದೆಹಲಿ ಮಾಲಿನ್ಯ ಕಡಿಮೆಯಾಗಿಲ್ಲ ಯಾಕೆ? ರಿಯಾಲಿಟಿ ಚೆಕ್

  ಇದಾದ ನಂತರ ಉಮೇಶ್‍ಗೆ ಫೋನ್ ಮಾಡಿದ್ದ ಪೊಲೀಸ್​​​​ ಕಾನ್ಸ್​ಟೇಬಲ್​​ ಕುಮಾರಸ್ವಾಮಿ ಆನ್‍ನೈಲ್‍ನಲ್ಲಿ ಔಷಧಿ ಬುಕ್ ಮಾಡುವಂತೆ ಉಮೇಶ್‍ಗೆ ತಿಳಿಸಿದ್ದರು. ಇವರು ಹೇಳಿದಂತೆಯೇ ಉಮೇಶ್ ಆನ್‍ಲೈನ್‍ನಲ್ಲಿ ಔಷಧಿ ಬುಕ್ ಮಾಡಿದ್ದರು. ಬಳಿಕ ಕುಮಾರಸ್ವಾಮಿ ಈ ಔಷಧಿಯನ್ನ ತೆಗೆದುಕೊಂಡು ಬೆಂಗಳೂರಿಂದ ಧಾರವಾಡಕ್ಕೆ ತೆರಳಿ ರೋಗಿಗೆ ತಲುಪಿಸಿದ್ದರು.
  First published: