ಬೆಂಗಳೂರು(ಜೂನ್.01): ಅರಮೆನೆ ಮೈದಾನದಲ್ಲಿ ಭಾರೀ ಮಳೆಯಿಂದಾಗಿ ವಲಸೆ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಂದರ್ಭದಲ್ಲಿ ತನ್ನ ಪ್ರಾಣವನ್ನು ಲೆಕ್ಕಿಸದೇ ಕಾನ್ಸ್ ಟೇಬಲ್ ರವಿಕುಮಾರ್ ಎಲ್ಲರೂ ಪ್ರಾಣಾಪಾಯದಿಂದ ಪಾರು ಮಾಡಿ ಮೆಚ್ಚುಗೆ ಪಾತ್ರರಾಗಿದ್ದಾರೆ.
ಶಿವಾಜಿನಗರ ಪೊಲೀಸ್ ಠಾಣೆಗೆ ಹೋಗಿ ಕಾನ್ಸ್ ಟೇಬಲ್ ರವಿಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮತ್ತು ಡಿಸಿಪಿ ಡಾ.ಶರಣಪ್ಪ ಸನ್ಮಾನ ಸಹ ಮಾಡಿದ್ದಾರೆ. ಅಲ್ಲದೇ 10 ಸಾವಿರ ರೂಪಾಯಿ ನಗರದನ್ನು ಪೊಲೀಸ್ ಆಯುಕ್ತರು ಘೋಷಿಸಿದ್ದಾರೆ.
ಕಳೆದ ಶುಕ್ರವಾರ ಅರಮನೆ ಮೈದಾನದಲ್ಲಿ ವಲಸೆ ಕಾರ್ಮಿಕರನ್ನು ಶಿಫ್ಟ್ ಮಾಡಲಾಗುತ್ತಿತ್ತು. ಆಗ ಮಳೆ - ಗಾಳಿ ಬಂದ ಕಾರಣ 400 ಕ್ಕೂ ಹೆಚ್ಚು ಜನರ ಮೇಲೆ ಶೆಲ್ಟರ್ ಕುಸಿದು ಬಿದ್ದಿತ್ತು. ಸಮಯಪ್ರಜ್ಞೆ ಮೆರೆದ ಪೊಲೀಸ್ ಕಾನ್ಸ್ಟೇಬಲ್ ರವಿಕುಮಾರ್ ಶೆಲ್ಟರ್ ಮೇಲೆತ್ತಿ, ಜನರನ್ನು ಹೊರ ಬರುವಂತೆ ಮಾಡಿದರು. ಶೆಲ್ಟರ್ ಅವಶೇಷದಡಿ ಸಿಲುಕಿದ್ದ ಮಗು, ಮಹಿಳೆಯನ್ನು ರಕ್ಷಣೆ ಮಾಡಿದ್ದರು.
ಎಂಬಿಎ ಗೋಲ್ಡ್ ಮೆಡಲಿಸ್ಟ್ ಆಗಿರುವ ಕಾನ್ಸ್ ಟೇಬಲ್ ರವಿಕುಮಾರ್ ಮೂಲತಹ ದಾವಣಗೆರೆ ಜಿಲ್ಲೆಯವರು. ಮೌಂಟ್ ಕಾರ್ಮೆಲ್ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. 2019ರಲ್ಲಿ ನಗರ ಪೊಲೀಸ್ ಕಾನ್ಸ್ ಟೇಬಲ್ ಆಗಿ ಕೆಲಸಕ್ಕೆ ನೇಮಕಗೊಂಡರು.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ