ಕೊರೋನಾ ರಣಕೇಕೆ; ಔಷಧಿ ಮಳಿಗೆಗಳಿಂದ ಮಾಹಿತಿ ಸಂಗ್ರಹಿಸಿ; ಬಿಬಿಎಂಪಿ ಕಮಿಷನರ್ ಡಾ ಮಂಜುನಾಥ್

ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ನೀಡುತ್ತಿರುವ ಬಗ್ಗೆ ಧ್ವನಿವರ್ಧಕಗಳ ಮೂಲಕ ಲಸಿಕೆ ತೆಗೆದುಕೊಳ್ಳಲು ನಾಗರಿಕರಿಲ್ಲಿ ಅರಿವು ಮೂಡಿಸಿ. ಈ ಪೈಕಿ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 1 ಅಥವಾ 2 ಆಟೋಗಳನ್ನು ಪಡೆದು ಧ್ವನಿ ವರ್ಧಕಗಳ ಮೂಲಕ ಜಾಗೃತಿ ಮೂಡಿಸಿ ಎಂದು ಬಿಬಿಎಂಪಿ ಆಯುಕ್ತರು ಸೂಚನೆ ನೀಡಿದರು.

ಬಿಬಿಎಂಪಿ

ಬಿಬಿಎಂಪಿ

  • Share this:
ಬೆಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಆಯಾ ವಾರ್ಡ್ ಗಳ ಪ್ರಾಥಮಿಕ ಆರೋಗ್ಯ ಕೇಂದ್ರ ಗಳ ಮಟ್ಟದಲ್ಲಿ ಬರುವ ಎಲ್ಲಾ ಔಷಧ ಮಳಿಗೆಗಳಲ್ಲಿ ಕೋವಿಡ್ ಸೋಂಕು ಲಕ್ಷಣಗಳಿಗೆ ಸಂಬಂಧಿಸಿದ ಮಾತ್ರೆಗಳನ್ನು ತೆಗೆದುಕೊಂಡು ಹೋಗಿರುವವರ ವಿವರವನ್ನು ನೀಡಲು ಸೂಚನೆ ನೀಡಬೇಕು. ಔಷಧಿ ಮಳಿಗೆಗಳಿಂದ ಪಡೆದ ಮಾಹಿತಿಯನ್ನು ಪ್ರತಿನಿತ್ಯ ಸಂಜೆ ಸಂಗ್ರಹಿಸಿಕೊಂಡು ಅಂತಹವರಿಗೆ ಕೋವಿಡ್ ಪರೀಕ್ಷೆ ಮಾಡಿ ಎಂದು ಬಿಬಿಎಂಪಿ ಆಯುಕ್ತ ಡಾ ಮಂಜುನಾಥ್ ಸೂಚನೆ ನೀಡಿದರು. ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಲ್ಯಾಬ್‌ಗಳಿಗೆ ದಿನಕ್ಕೆರಡು ಬಾರಿ ಸ್ಯಾಂಪಲ್ ಕೊಡಿ. ನಗದರಲ್ಲಿ ಐಎಲ್‌ಐ ಹಾಗೂ ಸಾರಿ ಲಕ್ಷಣಗಳಿರುವವರಿಂದ ಸಂಗ್ರಹ ಮಾಡಿದ ಸ್ವಾಬ್‌ನ ಸ್ಯಾಂಪಲ್‌ಗಳನ್ನು ದಿನಕ್ಕೆರಡು ಬಾರಿ ಲ್ಯಾಬ್‌ಗಳಿಗೆ ಕಳುಹಿಸಿಕೊಡಿ. ಈ ಸಂಬಂಧ ವಿಶೇಷ ಆಯುಕ್ತರು(ಆರೋಗ್ಯ) ರವರಿಗೆ ಲ್ಯಾಬ್‌ಗಳ ಜೊತೆ ಮಾತನಾಡಲು ಆಯುಕ್ತರು ಸೂಚನೆ ನೀಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಕಾಂಟ್ಯಾಕ್ಟ್ ಟ್ರೇಸಿಂಗ್ ವ್ಯವಸ್ಥಿತವಾಗಿ ಯೋಜನೆ ರೂಪಿಸಿಕೊಂಡು ಮಾಡಬೇಕು. ಒಬ್ಬ ವ್ಯಕ್ತಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ಲಭ್ಯವಾದ ಕೂಡಲೆ, ಬೂತ್ ಮಟ್ಟದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪಟ್ಟಿಯನ್ನು ಸಂಬಂಧಪಟ್ಟ ಸಹಾಯ ಕಂದಾಯ ಅಧಿಕಾರಿಗಳಿಗೆ ನೀಡಬೇಕು. ಅವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ನೀಡಿ ಪಾಸಿಟಿವ್ ಆದ ವ್ಯಕ್ತಿಯ ಸಂಪರ್ಕದಲ್ಲಿದ್ದವರಿಗೆಲ್ಲಾ ತ್ವರಿತವಾಗಿ ಕೋವಿಡ್ ಪರೀಕ್ಷೆ ಮಾಡಬೇಕು ಎಂದರು.

ಕೋವಿಡ್ ನಿಯಮಗಳ ಪಾಲನೆ

ನಗರದ ಆಯಾ ವಲಯಗಳಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವ ಬಗ್ಗೆ ವಲಯ ಜಂಟಿ ಆಯಕ್ತರುಗಳು ಸೂಕ್ತ ಕ್ರಮ ವಹಿಸಬೇಕು. ಹೆಚ್ಚು ಜನಸಂದಣಿಯಾಗುವ ಪ್ರದೇಶಗಳಿಗೆ ಮಾರ್ಷಲ್‌ಗಳನ್ನು ಕಳುಹಿಸಿ ದಂಡ ವಿಧಿಸಬೇಕು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಬೇಕು ಎಂದರು.

ಹೋಮ್ ಐಸೋಲೇಶನ್

ಕೋವಿಡ್ ಸೋಂಕು ದೃಢಪಟ್ಟ ಶೇ. 85 ಮಂದಿ ಹೋಮ್ ಐಸೋಲೇಷನ್ ನಲ್ಲಿದ್ದಾರೆ. ಈ ಪೈಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಐಸೋಲೇಷನ್‌ನಲ್ಲಿರುವವರ ಮೇಲೆ ನಿಗಾವಹಿಸಿ ಅವರ ಆರೋಗ್ಯ ವಿಚಾರಿಸಿಕೊಳ್ಳುತ್ತಿರಬೇಕು. ಪ್ರಮುಖವಾಗಿ 60 ವರ್ಷ ಮೇಲ್ಪಟ್ಟವರು ಹೋಮ್ ಐಸೋಲೇಷನ್ ನಲ್ಲಿದ್ದರೆ ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಏನಾದರು ಸಮಸ್ಯೆ ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಉತ್ತಮ ಚಿಕಿತ್ಸೆ ನೀಡಬೇಕು ಎಂದರು.

ಇದನ್ನು ಓದಿ: ಸಿಡಿ ಪ್ರಕರಣದ ಹಿಂದೆ ಬಿಜೆಪಿಯವರೇ ಇದ್ದಾರೆ; ಮಾಜಿ ಸಚಿವೆ ಮೋಟಮ್ಮ ಆರೋಪ

ಪಿ.ಹೆಚ್.ಎ.ಎಸ್.ಟಿ (PHAST) ಪೋರ್ಟಲ್

ಪ್ರಾಥಮಿಕ ಆರೋಗ್ಯ ಕೆಂದ್ರಗಳ ಮಟ್ಟದಲ್ಲಿ ಕಣ್ಗಾವಲು ಚಟುವಟಿಕೆ, ಕೋವಿಡ್ ಪಾಸಿಟಿವ್ ಮಾಹಿತಿ, ಐಎಲ್‌ಐ-ಸಾರಿಯಿರುವವರ ಲೈನ್ ಲಿಸ್ಟ್ ಪಡೆದು ಸ್ವಾಬ್ ಸಂಗ್ರಹ ಮಾಡುವುದು, ಪ್ರಾಥಮಿಕ/ದ್ವಿತೀಯ ಸಂಪರ್ಕಿತರ ಲೈನ್‌ಲಿಸ್ಟ್ ಪಡೆದು ಪರೀಕ್ಷೆಗೊಳಪಡಿಸುವುದು, ಕೋವಿಡ್ ದೃಢಪಟ್ಟ ಪ್ರದೇಶವನ್ನು ಸರ್ವೇ ಮಾಡುವ ಕಾರ್ಯ, ಅಂತಾರಾಷ್ಟ್ರೀಯ ಹಾಗೂ ಹೊರ ರಾಜ್ಯದಿಂದ ಬಂದವರಿಗೆ 7ನೇ ದಿನ ಪರೀಕ್ಷೆ ಮಾಡುವುದು ಸೇರಿದಂತೆ ಪಿ.ಹೆಚ್.ಎ.ಎಸ್.ಟಿ ಪೋರ್ಟಲ್ ನಲ್ಲಿ ಎಲ್ಲಾ ಮಾಹಿತಿ ಲಭ್ಯವಿರಲಿದ್ದು, ಸದರಿ ಪೋರ್ಟಲ್ ಮೂಲಕ ಎಲ್ಲವನ್ನೂ ತ್ವರಿತವಾಗಿ ಕಾರ್ಯನಿರ್ವಹಿಸಬಹುದಾಗಿದೆ ಎಂದರು.

ಲಸಿಕೆ ಹೆಚ್ಚಳಕ್ಕೆ ಕ್ರಮ

45 ವರ್ಷ ಮೇಲ್ಪಟ್ಟವರೆಲ್ಲರಿಗೂ ಲಸಿಕೆ ನೀಡಬೇಕು. ಲಸಿಕೆಗೆ ಯಾವುದೇ ಕೊರತೆಯಿಲ್ಲ. ಆದ್ದರಿಂದ ಏಪ್ರಿಲ್ 1 ರಿಂದ ಹೆಚ್ಚು ಲಸಿಕೆ ನೀಡಲು ಕ್ರಮವಹಿಸಬೇಕು. ಜೊತೆಗೆ ಹೆಚ್ಚು ಪ್ರಕರಣಗಳು ಕಂಡುಬರುತ್ತಿರುವ ಕಡೆ ಹೆಚ್ಚು ಲಸಿಕೆ ನೀಡಲು ಮುಂದಾಗಬೇಕು. ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ನೀಡುತ್ತಿರುವ ಬಗ್ಗೆ ಧ್ವನಿವರ್ಧಕಗಳ ಮೂಲಕ ಲಸಿಕೆ ತೆಗೆದುಕೊಳ್ಳಲು ನಾಗರಿಕರಿಲ್ಲಿ ಅರಿವು ಮೂಡಿಸಿ. ಈ ಪೈಕಿ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 1 ಅಥವಾ 2 ಆಟೋಗಳನ್ನು ಪಡೆದು ಧ್ವನಿ ವರ್ಧಕಗಳ ಮೂಲಕ ಜಾಗೃತಿ ಮೂಡಿಸಿ. ಸ್ಲಂಗಳಲ್ಲಿ ಲಸಿಕೆ ಪಡೆಯುವವರಿಗೆ ವಾಹನಗಳನ್ನು ಕಳುಹಿಸಿ ಅವರಲ್ಲಿ ಲಸಿಕೆ ಪಡೆಯುವ ಬಗ್ಗೆ ಅರಿವು ಮೂಡಿಸಿ. ಈ ಮೂಲಕ ಎಲ್ಲರಿಗೂ ಲಸಿಕೆ ನೀಡಲು ಕ್ರಮ ವಹಿಸಬೇಕು ಎಂದು ಆಯುಕ್ತರು ಸೂಚನೆ ನೀಡಿದರು.
Published by:HR Ramesh
First published: