ಹುಬ್ಬಳ್ಳಿಯಲ್ಲಿ ಲಾಕ್​ಡೌನ್​​ ಆದೇಶ ಉಲ್ಲಂಘಿಸಿ ಕೋಚಿಂಗ್​​ ಕ್ಲಾಸ್​​ - ವಿದ್ಯಾರ್ಥಿಗಳ ಜೀವನದ ಜತೆ ಶಿಕ್ಷಕರ ಚೆಲ್ಲಾಟ

ಪಂಚಮುಖಿ ಕೋಚಿಂಗ್ ಕ್ಲಾಸ್‌ ಕೇಂದ್ರವನ್ನು ಮೂವರು ಶಿಕ್ಷಕರು ನಡೆಸುತ್ತಾರೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿರುವ ಮೂವರು ಸೇರಿಕೊಂಡು ಈ ಪಾರ್ಟ್‌ಟೈಮ್ ಕೆಲಸ ಮಾಡುತ್ತಾರೆ. ಆದರೆ ಲಾಕ್‌ಡೌನ್‌ ನಿಯಮದಂತೆ ಪ್ರಕಾರ ಕೋಚಿಂಗ್ ಕ್ಲಾಸ್‌ಗಳನ್ನು ತೆರೆಯದಂತೆ ಸರ್ಕಾರದ ಸ್ಪಷ್ಟ ಆದೇಶವಿದೆ. ಆದರೂ ಯಾವುದೇ ಕಾನೂನು ಭಯವಿಲ್ಲದೆ ಕೋಚಿಂಗ್ ಕ್ಲಾಸ್ ನಡೆಯುತ್ತಿವೆ.

ಕೊರೋನಾ ನಡುವೆ ಕೋಚಿಂಗ್​​ ಕ್ಲಾಸ್​​

ಕೊರೋನಾ ನಡುವೆ ಕೋಚಿಂಗ್​​ ಕ್ಲಾಸ್​​

  • Share this:
ಹುಬ್ಬಳ್ಳಿ(ಜೂ.16): ಕೊರೋನಾ ಲಾಕ್​ಡೌನ್​​​ ಆದೇಶ ಉಲ್ಲಂಘಿಸಿ ಹುಬ್ಬಳ್ಳಿಯಲ್ಲಿ ಕೋಚಿಂಗ್​​ ಕ್ಲಾಸ್​​​​ ನಡೆಸಲಾಗುತ್ತಿದೆ. ಬಿಕಾಮ್, ಬಿಬಿಎ, ಸಿಬಿಎಸ್‌ಸಿ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡಲಾಗುತ್ತಿದೆ. ವಿದ್ಯಾನಗರದ ಶಿರೂರು ಪಾರ್ಕ್‌ನಲ್ಲಿರುವ ಪಂಚಮುಖಿ ಕೋಚಿಂಗ್ ಕ್ಲಾಸ್‌‌ನಲ್ಲಿ ಲಾಕ್‌ಡೌನ್ ಆದೇಶ ಕಡೆಗಣಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ.

ಶಿಕ್ಷಕರು ಕೊಠಡಿಯಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡುತ್ತಿದ್ದಾರೆ. ಮಾಸ್ಕ್ ಧರಿಸದೆ ಸಾಮಾಜಿಕ ಅಂತರವಿಲ್ಲದೆ ಕ್ಲಾಸ್‌ಗಳು ನಡೆಯುತ್ತಿವೆ. ಪ್ರತಿನಿತ್ಯ ಕೋಚಿಂಗ್‌ಗೆ ಬರುವ ನೂರಾರು ವಿದ್ಯಾರ್ಥಿಗಳಿಗೆ ಬ್ಯಾಚ್‌ವೈಜ್ ಪಾಠಗಳನ್ನು ಹೇಳಲಾಗುತ್ತಿದೆ. ಕೊರೋನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಪಂಚಮುಖಿ ಕೋಚಿಂಗ್ ಕ್ಲಾಸ್‌ನವರ ನಡೆ ತೀವ್ರ ಟೀಕೆಗೆ ಗುರಿಯಾಗಿದೆ.

ಕೋಚಿಂಗ್ ನಡೆಸುವ ಶಿಕ್ಷಕರ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೋಚಿಂಗ್ ಕ್ಲಾಸ್ ನಡೆಸುತ್ತಿರುವ ವಿಡಿಯೋ ಚಿತ್ರೀಕರಿಸಿದ ಸ್ಥಳೀಯರು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಕ್ಷಕರ ವಿರುದ್ಧ ಆಕ್ರೋಶ ಭುಗುಲೆದ್ದಿದೆ. ಮಕ್ಕಳ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಪಂಚಮುಖಿ ಕೋಚಿಂಗ್ ಕ್ಲಾಸ್‌ ಕೇಂದ್ರವನ್ನು ಮೂವರು ಶಿಕ್ಷಕರು ನಡೆಸುತ್ತಾರೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿರುವ ಮೂವರು ಸೇರಿಕೊಂಡು ಈ ಪಾರ್ಟ್‌ಟೈಮ್ ಕೆಲಸ ಮಾಡುತ್ತಾರೆ. ಆದರೆ ಲಾಕ್‌ಡೌನ್‌ ನಿಯಮದಂತೆ ಪ್ರಕಾರ ಕೋಚಿಂಗ್ ಕ್ಲಾಸ್‌ಗಳನ್ನು ತೆರೆಯದಂತೆ ಸರ್ಕಾರದ ಸ್ಪಷ್ಟ ಆದೇಶವಿದೆ. ಆದರೂ ಯಾವುದೇ ಕಾನೂನು ಭಯವಿಲ್ಲದೆ ಕೋಚಿಂಗ್ ಕ್ಲಾಸ್ ನಡೆಯುತ್ತಿವೆ.

ಇದನ್ನೂ ಓದಿ: ದೆಹಲಿಯಲ್ಲಿ ಕೋವಿಡ್​​-19; ಒಂದೇ ದಿನ 1,647 ಕೇಸ್​​, 73 ಸಾವು, ಸೋಂಕಿತರ ಸಂಖ್ಯೆ 42,829ಕ್ಕೆ ಏರಿಕೆ

ಈ ಕುರಿತು ಕೋಚಿಂಗ್ ನಡೆಸುತ್ತಿದ್ದ ಶಿಕ್ಷಕರನ್ನು ಪ್ರಶ್ನಿಸಿದರೇ ತಮ್ಮದೇನು ತಪ್ಪೇ ಇಲ್ಲ ಎನ್ನುವಂತೆ ಮಾತನಾಡುತ್ತಿದ್ದಾರೆ. ಲಾಕ್‌ಡೌನ್ ಘೋಷಣೆಯಾದ ನಂತರ ಕೋಚಿಂಗ್ ಕ್ಲಾಸ್ ಸಂಪೂರ್ಣ ಬಂದ್ ಇವೆ ಎನ್ನುತ್ತಿದ್ದಾರೆ. ಆದರೆ ವಿಡಿಯೋದಲ್ಲಿರುವ ವಿದ್ಯಾರ್ಥಿಗಳಲ್ಲಿ ಕೆಲವರು ಮಾಸ್ಕ್ ಧರಿಸಿ ಕುಳಿತಿದ್ದಾರೆ. ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಂತೆ ಕೆಲವರು ಮಾಸ್ಕ್ ಮುಖದ ಮೇಲೆ ಎಳೆದುಕೊಂಡಿದ್ದಾರೆ.

ಇದನ್ನೆಲ್ಲಾ ಗಮನಿಸಿದರೇ ಶಿಕ್ಷಕರು ಕಾನೂನು ಗಾಳಿಗೆ ತೂರಿ ಬೇಜವಾಬ್ದಾರಿಯಿಂದ ವರ್ತಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
First published: