HOME » NEWS » Coronavirus-latest-news » CM YEDDYURAPPA VISITS RESTRICTION OF PUBLIC KGV MAK

ಕೊರೋನಾ ಭೀತಿ; ಸಿಎಂ ಯಡಿಯೂರಪ್ಪ ಭೇಟಿ, ಸಾರ್ವಜನಿಕರಿಗೆ ನಿರ್ಬಂಧ

ಸಿಎಂ ಭೇಟಿಗೆ ಎಂದು ಮನೆಯ ಬಳಿ ಆಗಮಿಸುತ್ತಿರುವ ಸಾರ್ವಜನಿಕರನ್ನು ಪೊಲೀಸರು ವಾಪಸ್ ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಅಲ್ಲದೆ, ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಹ ಸಿಎಂ ಮನೆಯ ಬಳಿ ಸಾರ್ವಜನಿಕರು ಬಾರದೆ ಇರುವುದರಿಂದ ಸಿಎಂ ನಿವಾಸ ಸ್ತಬ್ಧವಾಗಿದೆ.

news18-kannada
Updated:March 21, 2020, 11:02 AM IST
ಕೊರೋನಾ ಭೀತಿ; ಸಿಎಂ ಯಡಿಯೂರಪ್ಪ ಭೇಟಿ, ಸಾರ್ವಜನಿಕರಿಗೆ ನಿರ್ಬಂಧ
ಸಿಎಂ ಬಿ.ಎಸ್.ಯಡಿಯೂರಪ್ಪ.
  • Share this:
ಬೆಂಗಳೂರು (ಮಾರ್ಚ್ 21); ರಾಜ್ಯದಲ್ಲಿ ಮಾರಣಾಂತಿಕ ಕೊರೋನಾ ವೈರಸ್‍ ವೇಗವಾಗಿ ಹಬ್ಬುತ್ತಿದ್ದು ಮಾರ್ಚ್ 31ರ ವರಗೆ ಸರ್ಕಾರ ಸಾರ್ವಜನಿಕ ವಲಯಕ್ಕೆ ಬಂದ್ ಘೋಷಿಸಿದೆ. ಅಲ್ಲದೆ, ಈ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್‍. ಯಡಿಯೂರಪ್ಪ ಇಂದು ಸಾರ್ವಜನಿಕರನ್ನು ಭೇಟಿಯಾಗದಿರಲು ನಿಶ್ಚಯಿಸಿದ್ದಾರೆ.

ಹೀಗಾಗಿ ಸಿಎಂ ಭೇಟಿಗೆ ಎಂದು ಮನೆಯ ಬಳಿ ಆಗಮಿಸುತ್ತಿರುವ ಸಾರ್ವಜನಿಕರನ್ನು ಪೊಲೀಸರು ವಾಪಸ್ ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಅಲ್ಲದೆ, ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಹ ಸಿಎಂ ಮನೆಯ ಬಳಿ ಸಾರ್ವಜನಿಕರು ಬಾರದೆ ಇರುವುದರಿಂದ ಸಿಎಂ ನಿವಾಸ ಸ್ತಬ್ಧವಾಗಿದೆ.

ಮನೆಯ ಬಳಿ ಹೆಚ್ಚಿನ ಜನ ಸಂದಣಿ ಇಲ್ಲದ ಕಾರಣ ಸಿಎಂ ಭದ್ರತಾ ಸಿಬ್ಬಂದಿಗೂ ಸಹ ಬಿಡುವು ನೀಡಲಾಗಿದೆ. ಅಲ್ಲದೆ, ಕೆಲವು ಮಂದಿ ಪೊಲೀಸರು ಮಾತ್ರ ಮಾಸ್ಕ್ ಧರಿಸಿ ಭದ್ರತಾ ಕೆಲಸದಲ್ಲಿ ನಿರತರಾಗಿದ್ದಾರೆ.

 

ಇದಕ್ಕೂ ಓದಿ : ಕೈ ಮೇಲೆ ಕೊರೋನಾ ಸ್ಟ್ಯಾಂಪಿಂಗ್​ ಇದ್ದರೂ ಹಾಸನದಲ್ಲಿ ಸುತ್ತಾಡಿದ ಮಹಿಳೆ!; ಭಯಗೊಂಡ ಸಾರ್ವಜನಿಕರು
First published: March 21, 2020, 11:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories