HOME » NEWS » Coronavirus-latest-news » CM OF MAHARASTRA THANKED TO MUKHESH AMBANI FAMILY FOR HELPING TO FIGHT CORONAVIRUS GNR

‘ಕೊರೋನಾ ವಿರುದ್ಧ ಹೋರಾಟದಲ್ಲಿ ಕೈಜೋಡಿಸಿದ ಮುಖೇಶ್​​​​ ಅಂಬಾನಿ, ನೀತಾ ಅಂಬಾನಿಗೆ ಧನ್ಯವಾದ‘ - ಮಹಾರಾಷ್ಟ್ರ ಸಿಎಂ

ಈ ವಿಶೇಷ ಆಸ್ಪತ್ರೆಯಲ್ಲಿ ಒಟ್ಟು 200 ಬೆಡ್ ಗಳ ಸಾಮರ್ಥ್ಯ ಹೊಂದಿದೆ. ಅಲ್ಲದೆ ನೆಗೆಟಿವ್ ಪ್ರೆಶರ್ ಕೊಠಡಿಯಂತಹ ಸೌಲಭ್ಯವೂ ಇದೆ. ಇದರೊಂದಿಗೆ ರಿಲಯನ್ಸ್ ಅಗತ್ಯವಿರುವ ಮಾಸ್ಕ್​​ಗಳ ತಯಾರಿಕೆಯಲ್ಲಿ ಕೂಡಾ ತೊಡಗಿಕೊಂಡಿದೆ. ಪ್ರತಿದಿನ ಒಂದು ಲಕ್ಷಕ್ಕೂ ಅಧಿಕ ಮಾಸ್ಕ್ ತಯಾರಿಸುವ ಕಾಯಕವನ್ನು ಈ ಸಂಸ್ಥೆ ಮಾಡುತ್ತಿದೆ.

news18-kannada
Updated:June 1, 2020, 8:13 PM IST
‘ಕೊರೋನಾ ವಿರುದ್ಧ ಹೋರಾಟದಲ್ಲಿ ಕೈಜೋಡಿಸಿದ ಮುಖೇಶ್​​​​ ಅಂಬಾನಿ, ನೀತಾ ಅಂಬಾನಿಗೆ ಧನ್ಯವಾದ‘ - ಮಹಾರಾಷ್ಟ್ರ ಸಿಎಂ
ಮುಖೇಶ್​ ಅಂಬಾನಿ ದಂಪತಿ
  • Share this:
ಮುಂಬೈ(ಜೂ.01): ಭಾರತದಲ್ಲಿ ಕೊರೋನಾ ವೈರಸ್​ ಆರ್ಭಟ ಮುಂದುವರಿದಿದೆ. ದೇಶದಲ್ಲೇ ಅತೀ ಹೆಚ್ಚು ಕೋವಿಡ್​​-19 ಪಾಸಿಟಿವ್​​ ಕೇಸುಗಳು ದಾಖಲಾಗಿರುವುದು ಮಹಾರಾಷ್ಟ್ರದಲ್ಲೇ. ಇದರ ವಿರುದ್ಧ ಹೋರಾಡಲು ಇಡೀ ದೇಶವೇ ಸಜ್ಜಾಗಿದೆ. ವೈದ್ಯರು, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಹಲವರು ಹಗಲು ರಾತ್ರಿಯೆನ್ನದೇ ಕೊರೋನಾ ವೈರಸ್​​ ತಡೆಗೆ ಹೋರಾಡುತ್ತಿದ್ದಾರೆ. ಹೀಗೆಯೇ ಕೋವಿಡ್​​​-19 ನಿಯಂತ್ರಣಕ್ಕೆ ತರಲು ಉದ್ಯಮಿಗಳು, ಸಿನಿಮಾ ನಟರು ತಮ್ಮ ಕೈಲಾದ ಆರ್ಥಿಕ ನೆರವು ನೀಡುತ್ತಿದ್ದಾರೆ. ಅದರಂತೆ ಭಾರತದ ಶ್ರೀಮಂತ ಉದ್ಯಮಿ ಮುಖೇಶ್​​ ಅಂಬಾನಿ ಮಾಲೀಕತ್ವದ ರಿಲಿಯನ್ಸ್​​ ಇಂಡಸ್ಟ್ರೀಸ್​​​ ಲಿಮಿಟೆಡ್​​ ಕಂಪನಿ ಕೂಡ ಪ್ರಧಾನಮಂತ್ರಿ ಸೇರಿದಂತೆ ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿತ್ತು. ಇದೀಗ ಅಂಬಾನಿ ಮತ್ತು ನೀತಾ ಅಂಬಾನಿಗೆ ನೆರವಿಗೆ ಮಹಾರಾಷ್ಟ್ರ ಸಿಎಂ ಧನ್ಯವಾದಗಳು ತಿಳಿಸಿದ್ದಾರೆ. 

ಕೊರೋನಾ ವಿರುದ್ಧದ ಹೋರಾಟದಲ್ಲಿ ನಮ್ಮೊಂದಿಗೆ ಕೈಜೋಡಿಸಿದ ಮುಖೇಶ್​​​ ಅಂಬಾನಿ ಮತ್ತು ನೀತು ಅಂಬಾನಿಯವರಿಗೆ ಧನ್ಯವಾದಗಳು. ತಮ್ಮ ಕೈಲಾದ ಹಣಕಾಸು ನೆರವು ನೀಡುವದರೊಂದಿಗೆ ಜಿಯೋ ವರ್ಲ್ಡ್​​ ಸೆಂಟರ್​​​ ಅನ್ನು ಕೊರೋನಾ ಚಿಕಿತ್ಸೆ ನೀಡುವ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಸರ್ಕಾರಕ್ಕೆ ನೀಡಿದ್ದಾರೆ. ಇದಕ್ಕೂ ನಾವು ಅವರಿಗೆ ಆಭಾರಿಯಾಗಿದ್ದೇನೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್​​ ಠಾಕ್ರೆ ಹೇಳಿದ್ದಾರೆ.

ಈ ಹಿಂದೆಯೇ ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಗೆ ಮುಖೇಶ್ ಅಂಬಾನಿ ಐದು ಕೋಟಿ ರೂ. ಸಹಾಯ ಧನ ನೀಡಿದ್ದರು. ಇದರ ಬೆನ್ನಲ್ಲೇ ಮುಂಬೈ ಮಹಾನಗರ ಪಾಲಿಕೆಯ ನೆರವಿನೊಂದಿಗೆ ಹೆಚ್.ಎನ್​​ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯನ್ನು ನಿರ್ಮಿಸಿದರು. ಮುಂಬೈನ ಸವೆನ್ ಹಿಲ್ಸ್ ಏರಿಯಾದಲ್ಲಿ ಕೇವಲ ಎರಡು ವಾರದ ಸಮಯದಲ್ಲೇ ಆಸ್ಪತ್ರೆಯೊಂದನ್ನು ನಿರ್ಮಿಸುವ ಮೂಲಕ ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಖ್ಯಾತ ಉಧ್ಯಮಿ ಮುಖೇಶ್ ಅಂಬಾನಿ ಕೈ ಜೋಡಿಸಿದರು.

ಇದನ್ನೂ ಓದಿ: Jeeta Rahe India: ಕೊರೋನಾ ವಿರುದ್ಧದ ಹೋರಾಟದಲ್ಲಿ ರಿಲಿಯನ್ಸ್​ ಟೀಮ್​​​; ಗೆಲುವು ನಮ್ಮದೇ ಎಂದ ನೀತಾ ಅಂಬಾನಿ

ಈ ವಿಶೇಷ ಆಸ್ಪತ್ರೆಯಲ್ಲಿ ಒಟ್ಟು 200 ಬೆಡ್ ಗಳ ಸಾಮರ್ಥ್ಯ ಹೊಂದಿದೆ. ಅಲ್ಲದೆ ನೆಗೆಟಿವ್ ಪ್ರೆಶರ್ ಕೊಠಡಿಯಂತಹ ಸೌಲಭ್ಯವೂ ಇದೆ. ಇದರೊಂದಿಗೆ ರಿಲಯನ್ಸ್ ಅಗತ್ಯವಿರುವ ಮಾಸ್ಕ್​​ಗಳ ತಯಾರಿಕೆಯಲ್ಲಿ ಕೂಡಾ ತೊಡಗಿಕೊಂಡಿದೆ. ಪ್ರತಿದಿನ ಒಂದು ಲಕ್ಷಕ್ಕೂ ಅಧಿಕ ಮಾಸ್ಕ್ ತಯಾರಿಸುವ ಕಾಯಕವನ್ನು ಈ ಸಂಸ್ಥೆ ಮಾಡುತ್ತಿದೆ.
First published: June 1, 2020, 6:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories