‘ಮೊದಲು ನೋಟ್​ ಬಂಧಿ, ಈಗ ಘರ್​ ಬಂಧಿ‘ - ಲಾಕ್​ಡೌನ್​​ ಬಗ್ಗೆ ಮಮತಾ ಬ್ಯಾನರ್ಜಿ ವ್ಯಂಗ್ಯ

ಇನ್ನು, ಕೇಂದ್ರ ಸರ್ಕಾರ ನಮ್ಮ ಮೇಲೆ ಸುಖಾಸುಮ್ಮನೇ ಆರೋಪ ಮಾಡುತ್ತಿದೆ. ನಾನು ಯಾವತ್ತು ಶ್ರಮಿಕ್​ ರೈಲುಗಳನ್ನು ಕೊರೋನಾ ಎಕ್ಸ್​ಪ್ರೆಸ್​ ಎಂದು ಕರೆದಿಲ್ಲ ಎಂದು ಅಮಿತ್​ ಶಾ ಹೇಳಿಕೆಗೆ ದೀದಿ ತಿರುಗೇಟು ನೀಡಿದ್ದಾರೆ.

Ganesh Nachikethu | news18-kannada
Updated:June 10, 2020, 6:01 PM IST
‘ಮೊದಲು ನೋಟ್​ ಬಂಧಿ, ಈಗ ಘರ್​ ಬಂಧಿ‘ - ಲಾಕ್​ಡೌನ್​​ ಬಗ್ಗೆ ಮಮತಾ ಬ್ಯಾನರ್ಜಿ ವ್ಯಂಗ್ಯ
ಅಮಿತ್ ಶಾ ಮತ್ತು ಮಮತಾ ಬ್ಯಾನರ್ಜಿ
  • Share this:
ನವದೆಹಲಿ(ಜೂ.10): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ಜನರಿಗೆ ಮೊದಲು ನೋಟ್​​ ಬಂಧಿ, ಈಗ ಘರ್​​ ಬಂಧಿ ಎನ್ನುವ ಮೂಲಕ ಕೊರೋನಾ ಲಾಕ್​ಡೌನ್​​ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವ್ಯಂಗ್ಯವಾಡಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಸಿಎಂ ಮಮತಾ ಬ್ಯಾನರ್ಜಿ, ಮೊದಲು ನೋಟ್ ಬಂಧಿ, ಈಗ ಘರ್ ಬಂಧಿ. ಕೇಂದ್ರ ಸರ್ಕಾರ ವಲಸೆ ಕಾರ್ಮಿಕರಿಗೆ ಏನು ಮಾಡಿಲ್ಲ. ಲಾಕ್​ಡೌನ್​​ ಘೋಷಿಸುವ ಮುನ್ನವೇ ವಲಸೆ ಕಾರ್ಮಿಕರನ್ನು ಯಾಕೇ ತವರಿಗೆ ಕಳಿಸುವ ವ್ಯವಸ್ಥೆ ಮಾಡಲಿಲ್ಲ. ಬಿಜೆಪಿ ವಲಸೆ ಕಾರ್ಮಿಕರು ಆಗಲೇ ಸಂಕಷ್ಟಕ್ಕೆ ಸಿಲುಕಿಸಿದ್ದು ಯಾಕೇ? ಎಂದು ಅಮಿತ್​​​ ಶಾಗೆ ದೀದಿ ಪ್ರಶ್ನಿಸಿದ್ಧಾರೆ.

ಲಾಕ್​ಡೌನ್​​ ಘೋಷಿಸಿದಾಗ ವಲಸಿಗರಿಗೆ ಸಂಬಳದ ಭರವಸೆ ನೀಡಲಾಗಿತ್ತು. ಆದರೆ ಈವರೆಗೂ ವಲಸೆ ಕಾರ್ಮಿಕರಿಗೆ ಹಣ ನೀಡಿಲ್ಲ. ಜನ‌ ಸಾಯುತ್ತಿರುವಾಗಲು ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ನಾನು ಅಂಗಡಿಗಳನ್ನು ತೆರೆದು ಜನ ಜೀವನಕ್ಕೆ ಅವಕಾಶ ಕಲ್ಪಿಸಿದ್ದೇನೆ ಎಂದರು.

ಇನ್ನು, ಕೇಂದ್ರ ಸರ್ಕಾರ ನಮ್ಮ ಮೇಲೆ ಸುಖಾಸುಮ್ಮನೇ ಆರೋಪ ಮಾಡುತ್ತಿದೆ. ನಾನು ಯಾವತ್ತು ಶ್ರಮಿಕ್​ ರೈಲುಗಳನ್ನು ಕೊರೋನಾ ಎಕ್ಸ್​ಪ್ರೆಸ್​ ಎಂದು ಕರೆದಿಲ್ಲ ಎಂದು ಅಮಿತ್​ ಶಾ ಹೇಳಿಕೆಗೆ ದೀದಿ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್​​​-ಡೀಸೆಲ್​​ ದರದಲ್ಲಿ ಭಾರೀ ಏರಿಕೆ - ಮೋದಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗುಡುಗು

ನಿನ್ನೆ ಲಾಕ್‌ಡೌನ್‌ ಸಂದರ್ಭದಲ್ಲಿ ವಲಸೆ ಕಾರ್ಮಿಕರನ್ನು ಸಾಗಿಸುವ ವಿಚಾರದಲ್ಲೂ ಪಶ್ಚಿಮ ಬಂಗಾಳದ ಸರ್ಕಾರದ ವಿರುದ್ಧ ಅಮಿತ್ ಶಾ ರಾಜಕೀಯ ವಾಗ್ದಾಳಿ ನಡೆಸಿದ್ದರು. ವಲಸೆ ಕಾರ್ಮಿಕರನ್ನು ಸಾಗಿಸಲು ಬಂಗಾಳ ಸರ್ಕಾರ ಅತೀ ಕಡಿಮೆ ರೈಲುಗಳನ್ನು ಕೇಳಿತ್ತು. ಕೇವಲ 236 ರೈಲುಗಳಲ್ಲಿ 3 ಲಕ್ಷ ವಲಸಿಗರನ್ನು ಅವರ ಸ್ವಂತ ನೆಲೆಗಳಿಗೆ ತಲುಪಿಸಲಾಗಿದೆ ಎಂದಿದ್ದರು.
“ಬಂಗಾಳದ ಜನರಿಗೆ ಕೇಂದ್ರ ಸರ್ಕಾರದ ಆರೋಗ್ಯದ ಪ್ರಯೋಜನಗಳನ್ನು ತಲುಪಿಸಲು ಮಮತಾ ಬ್ಯಾನರ್ಜಿ ಏಕೆ ಅವಕಾಶ ನೀಡುತ್ತಿಲ್ಲ? ನಿಮ್ಮ ರಾಜಕೀಯಕ್ಕೆ ಜನರ ಯೋಗಕ್ಷೇಮವನ್ನು ಏಕೆ ಪಣವಿಡುತ್ತಿದ್ದೀರಿ? ಕೇಜ್ರಿವಾಲ್ ಸೇರಿದಂತೆ ಎಲ್ಲಾ ರಾಜ್ಯ ನಾಯಕರು ಈ ಯೋಜನೆಯನ್ನು ಒಪ್ಪಿಕೊಂಡಿದ್ದಾರೆ. ಆದರೆ, ನಿಮ್ಮ ಸಮಸ್ಯೆ ಏನು? ಎಂದು ಪ್ರಶ್ನೆ ಮಾಡಿರುವ ಅಮಿತ್ ಶಾ, ಬಂಗಾಳದಲ್ಲಿ ಬಿಜೆಪಿ ಗೆದ್ದು ಸ್ವತಂತ್ಯ್ರ ಸರ್ಕಾರ ರಚನೆ ಮಾಡಿದ ನಂತರ ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗುವುದು” ಎಂದು ಹೇಳಿಕೊಂಡಿದ್ದರು.
First published: June 10, 2020, 5:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading