LockDown: ದೆಹಲಿಯಲ್ಲಿ ಶೇ.2.5ಕ್ಕೆ ಇಳಿದ ಕೊರೋನಾ ಕೇಸ್; ಮೇ.31ರ ವರೆಗೆ ಲಾಕ್​ಡೌನ್ ವಿಸ್ತರಿಸಿದ ಕೇಜ್ರಿವಾಲ್

ನಾನು ಅನೇಕ ತಜ್ಞರನ್ನು ಸಂಪರ್ಕಿಸಿ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಎಲ್ಲರೂ ಇನ್ನೂ ಒಂದು ವಾರದವರೆಗೆ ಲಾಕ್​ಡೌನ್ ವಿಸ್ತರಿಸುವ ಕುರಿತು ಒಲವು ತೋರಿಸಿದ್ದರು. ಆದ್ದರಿಂದಲೇ ಮೇ.31ರ ವರೆಗೆ ದೆಹಲಿಯಲ್ಲಿ ಲಾಕ್​ಡೌನ್ ಅನ್ನು ವಿಸ್ತರಿಸಲಾಗಿದೆ ಎಂದು ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್.

  • Share this:
    ನವ ದೆಹಲಿ (ಮೇ 23); "ಕೊರೋನಾ ಎರಡನೇ ಅಲೆಯ ಪ್ರಭಾವ ರಾಷ್ಟ್ರ ರಾಜಧಾನಿಯಲ್ಲಿ ಕ್ರಮೇಣ ಇಳಿಮುಖವಾಗುತ್ತಿದೆ. ಸಕಾರಾತ್ಮಕ ದರ ಪ್ರಸ್ತುತ ಶೇ.2.5 ರಷ್ಟಿದೆ. ಆದರೂ, ಈ ಸೋಂಕನ್ನು ಸಂಪೂರ್ಣವಾಗಿ ನಿರ್ಮೂಲನೆ ಗೊಳಿಸುವ ಸಲುವಾಗಿ ಮೇ 31ರ ಬೆಳಗ್ಗೆ 5 ಗಂಟೆಯ ವರೆಗೆ ಲಾಕ್​ಡೌನ್​ ಅನ್ನು ವಿಸ್ತರಿಸುವ ತೀರ್ಮಾನಕ್ಕೆ ಬರಲಾಗಿದೆ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. ಈ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿರುವ ಅವರು, "ದೆಹಲಿಯಲ್ಲಿ ಸಕಾರಾತ್ಮಕ ದರವು ಶೇ.2.5 ಕ್ಕೆ ಬಂದಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 1,600 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಮೂರನೇ ಅಲೆಯೂ ಅಪ್ಪಳಿಸುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ವೈದ್ಯಕೀಯ ಕ್ಷೇತ್ರವನ್ನು ಮತ್ತಷ್ಟು ಬಲಿಷ್ಟಗೊಳಿಸುವ ಅಗತ್ಯ ಇದೆ. ಲಾಕ್​ಡೌನ್​ ಸಮಯವನ್ನು ಇದಕ್ಕೆ ವ್ಯಯಿಸಲಾಗುವುದು" ಎಂದು ತಿಳಿಸಿದ್ದಾರೆ.

    "ಎರಡನೇ ಕೋವಿಡ್​ ಅಲೆಯ ಬೆನ್ನಿಗೆ ಮೂರನೇ ಅಲೆಯೂ ಭಾರತ ಮತ್ತು ದೆಹಲಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಹೀಗಾಗಿ ಹೊಸ ಆಮ್ಲಜನಕ ಸ್ಥಾವರಗಳು ಮತ್ತು ಐಸಿಯು ಹಾಸಿಗೆಗಳನ್ನು ಸ್ಥಾಪಿಸುವುದು ಸೇರಿದಂತೆ ಆರೋಗ್ಯ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಮಾಡಲು ಅಧಿಕಾರಿಗಳು ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ರೀತಿಯ ಪ್ರವೃತ್ತಿಯೊಂದಿಗೆ ಪ್ರಕರಣಗಳು ಇಳಿಮುಖವಾಗುತ್ತಿದ್ದರೆ, ಮೇ 31 ರಿಂದ ಹಂತ ಹಂತವಾಗಿ ಲಾಕ್‌ಡೌನ್ ಅನ್ನು ಸಡಿಲಿಸಲಾಗುವುದು" ಎಂದು ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

    ಇದನ್ನೂ ಓದಿ: CoronaVirus: ಬುಡಕಟ್ಟು ಸಮಾಜಕ್ಕೂ ವ್ಯಾಪಕವಾಗಿ ಹರಡಿದ ಕೊರೋನಾ ಸೋಂಕು; ಆತಂಕದಲ್ಲಿ ಒಡಿಶಾ ರಾಜ್ಯ!

    "ನಾನು ಅನೇಕ ತಜ್ಞರನ್ನು ಸಂಪರ್ಕಿಸಿ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಎಲ್ಲರೂ ಇನ್ನೂ ಒಂದು ವಾರದವರೆಗೆ ಲಾಕ್​ಡೌನ್ ವಿಸ್ತರಿಸುವ ಕುರಿತು ಒಲವು ತೋರಿಸಿದ್ದರು. ಆದ್ದರಿಂದಲೇ ಮೇ.31ರ ವರೆಗೆ ಲಾಕ್​ಡೌನ್ ಅನ್ನು ವಿಸ್ತರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸೋಂಕು ಮತ್ತಷ್ಟು ಹೆಚ್ಚಾಗದಂತೆ ತಡೆಯುವ ಸಲುವಾಗಿ ಲಾಕ್​ಡೌನ್ ಅಗತ್ಯ ಇದೆ. ಈ ನಡುವೆ ಜನರಿಗೆ ಕೊರೋನಾ ಲಸಿಕೆ ನೀಡುವ ಅಗತ್ಯವಿದ್ದು, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಲಸಿಕೆಗಳು ಲಭ್ಯವಾದ ತಕ್ಷಣ 18-44 ವಯಸ್ಸಿನ ಎಲ್ಲಾ ಯುವಕರಿಗೂ ಲಸಿಕೆಯನ್ನು ನೀಡಲಾಗುವುದು" ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.



    ಭಾರತದಲ್ಲಿ ಮುಂದುವರೆದ ಕೊರೋನಾ ಅಲೆ:

    ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಏಪ್ರಿಲ್ 30ರಿಂದ ದಿನ‌ ಒಂದರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು(Coronavirus) ಪೀಡಿತರಾಗುತ್ತಿದ್ದರು. ಈಗ ತುಸು ಕಡಿಮೆಯಾಗಿದೆ ಆದರೂ ಇನ್ನೂ ಪ್ರತಿದಿನ ಸರಿ ಸುಮಾರು ಎರಡೂವರೆ ಲಕ್ಷ ಜನ ಸೋಂಕು ಪೀಡಿತರಾಗುತ್ತಿದ್ದಾರೆ. ಕೊರೋನಾದಿಂದ ಸಾಯುತ್ತಿರುವವರ ಸಂಖ್ಯೆಯಲ್ಲೂ ಭಾರೀ ಇಳಿಮುಖ ಆಗಿಲ್ಲ.

    ಇದನ್ನೂ ಓದಿ: Sonu Sood: ಮಿಲಿಟರಿ ಕೊರೋನಾ ಕೇಂದ್ರಕ್ಕೆ ನಟ ಸೋನು ಸೂದ್​​ ಸಹಾಯ ಕೋರಿದ ಕಮಾಂಡರ್; ಸೇನಾಧಿಕಾರಿಗಳು ತರಾಟೆ

    ಶನಿವಾರ 2,40,842 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,65,30,132ಕ್ಕೆ ಏರಿಕೆ ಆಗಿದೆ.‌ ಆದರೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಶನಿವಾರ 3,741 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,99,266ಕ್ಕೆ ಏರಿಕೆ ಆಗಿದೆ. ಈವರೆಗೆ 2,34,25,467 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 28,05,399 ಆಕ್ಟಿವ್ ಕೇಸು (Active cases) ಗಳಿವೆ.

    ದೇಶದಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಆಗ ಸೋಂಕು ಪೀಡಿತರ ಸಂಖ್ಯೆ ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಅತಿಹೆಚ್ಚಾಗಿತ್ತು.
    Published by:MAshok Kumar
    First published: