HOME » NEWS » Coronavirus-latest-news » CM BSYEDIYURAPPA SAYS 5 KG RICE FOR BPL CARD HOLDERS SESR

ವಿಶೇಷ ಪ್ಯಾಕೇಜ್ ​ಪರಿಹಾರವಿಲ್ಲ; ಬಿಪಿಎಲ್​ ಕಾರ್ಡ್​ಗೆ 5 ಕೆಜಿ ಅಕ್ಕಿ; ಸಿಎಂ ಬಿಎಸ್​ವೈ

ಕೇಂದ್ರ ಸರ್ಕಾರದ ನೆರವಿನೊಂದಿಗೆ ಬಿಪಿಎಲ್​ ಕುಟುಂಬಕ್ಕೆ 5 ಕೆಜಿ ಅಕ್ಕಿ ಕೊಡಲಿದ್ದೇವೆ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ತಿಳಿಸಿದ್ದಾರೆ.

news18-kannada
Updated:May 13, 2021, 6:45 PM IST
ವಿಶೇಷ ಪ್ಯಾಕೇಜ್ ​ಪರಿಹಾರವಿಲ್ಲ; ಬಿಪಿಎಲ್​ ಕಾರ್ಡ್​ಗೆ 5 ಕೆಜಿ ಅಕ್ಕಿ; ಸಿಎಂ ಬಿಎಸ್​ವೈ
ಬಿ.ಎಸ್​. ಯಡಿಯೂರಪ್ಪ.
  • Share this:
ಬೆಂಗಳೂರು (ಮೇ. 13):  ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡವರಿಗೆ ಸದ್ಯಕ್ಕೆ ಯಾವುದೇ ವಿಶೇಷ ಪ್ಯಾಕೇಜ್ ​ಪರಿಹಾರ ನೀಡಲು ಸಾಧ್ಯವಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಸ್ಥಿತಿಗತಿ ನೋಡಿಕೊಂಡು ಅವರಿಗೆ ಪರಿಹಾರ ಪ್ಯಾಕೇಜ್​ ನೀಡುವ ಕುರಿತು ತೀರ್ಮಾನ ನಡೆಸಲಾಗುವುದು. ಬಡವರಿಗೆ ಅನುಕೂಲವಾಗಲೆಂದು ಇಂದಿರಾ ಕ್ಯಾಂಟೀನ್​ನಲ್ಲಿ ಉಚಿತ ಊಟ ನೀಡಲಾಗುವುದು ಜೊತೆಗೆ ಕೇಂದ್ರ ಸರ್ಕಾರದ ನೆರವಿನೊಂದಿಗೆ ಬಿಪಿಎಲ್​ ಕುಟುಂಬಕ್ಕೆ 5 ಕೆಜಿ ಅಕ್ಕಿ ಕೊಡಲಿದ್ದೇವೆ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ತಿಳಿಸಿದ್ದಾರೆ. ಕೊರೋನಾ ಸಂಕಷ್ಟದ ಸಮಯಲ್ಲಿಯೇ ಬಿಪಿರಲ್​ ಕಾರ್ಡುದಾರ 5 ಕಿಜಿ ಅಕ್ಕಿಯನ್ನು ಕಡಿತ ಗೊಳಿಸಲಾಗಿತ್ತು. 5 ಕೆಜಿ ಅಕ್ಕಿಯ ಬದಲು 2 ಕಜಿ 2 ಕಜಿ ಅಕ್ಕಿ ನೀಡಲು ಮುಂದಾಗಿತ್ತು. ಇದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಈ ಹಿನ್ನಲೆ ಮತ್ತೆ ಸರ್ಕಾರ 5 ಕೆಜಿ ಅಕ್ಕಿ ಕೊಡಲು ಮುಂದಾಗಿದೆ.

ಕೋವಿಡ್​ನಿಂದಾಗಿ ಬಡವರು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರ ಮತ್ತೆ ಮೂರು ಕೆಜಿ ಅಕ್ಕಿ ಕಡಿತಗೊಳಿಸಲು ಮುಂದಾಗಿದೆ. ಜನರು ಉದ್ಯೋಗ ಸಿಗದೇ ಕಂಗೆಟ್ಟಿರುವ ಈ ಸಮಯದಲ್ಲಿ ಈ ಅನ್ನಭಾಗ್ಯ ಯೋಜನೆ ಅವರಿಗೆ ಆಸರೆಯಾಗುತ್ತಿತ್ತು. ಈಗ ಇದರಲ್ಲಿ ಅಕ್ಕಿ ಕಡಿತ ಮಾಡಿದ್ದು, ಅವರು ಇನ್ನಷ್ಟು ಸಮಸ್ಯೆಗೆ ಗುರಿಯಾಗಲಿದ್ದಾರೆ. ಸರ್ಕಾರ ಬಡವರ ವಿರೋಧಿ ನಿರ್ಣಯವನ್ನು ಕೈಬಿಡಬೇಕು. ಒಂದು ವೇಳೆ ಅಕ್ಕಿ ಕಡಿತ ಮಾಡಿದರೆ, ಗಂಭೀರ ಪರಿಸ್ಥಿತಿ ಅನುಸರಿಸಬೇಕು ಎಂದು ಎಚ್ಚರಿಸಿತು.

ಇದನ್ನು ಓದಿ: ಲಸಿಕೆ ಕೊರತೆ ಅಂತ ಮೊದಲ ಡೋಸ್​ಗೆ ಒಂದು ಕಂಪನಿ, ಎರಡನೇ ಡೋಸ್​ಗೆ ಮತ್ತೊಂದು ಕಂಪನಿ ವಾಕ್ಸಿನ್​​ ಪಡೆದರೆ ಏನಾಗಲಿದೆ ಗೊತ್ತಾ?

ಕೊರೋನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಊಟ, ಆಹಾರ ಸಿಗದೆ ಸಂಕಷ್ಟಕ್ಕೀಡಾದವರ ಇಂದಿರಾ ಕ್ಯಾಂಟೀನ್​ ಮೂಲಕ ಮೂರು ಹೊತ್ತಿನ ಊಟದ ವ್ಯವಸ್ಥೆ ಮಾಡಲಾಗಿದೆ.   ಬೆಂಗಳೂರು ಸೇರಿದಂತೆ ಪ್ರತಿ ಜಿಲ್ಲೆ, ತಾಲೂಕಿನಲ್ಲೂ ನಿರ್ಗತಿಕರು, ಕಾರ್ಮಿಕರು, ಬಡವರು, ಕೂಲಿ ಕಾರ್ಮಿಕರಿಗೆ ಉಚಿತ ಊಟ, ತಿಂಡಿ ನೀಡಲು ನಿರ್ಧರಿಸಲಾಗಿದೆ. ಊಟ, ತಿಂಡಿ ನೀಡುವಂತೆ ಪೌರಾಡಳಿತ ಇಲಾಖೆ ಆದೇಶ ನೀಡಿದೆ.

ಸಿದ್ದರಾಮಯ್ಯ ಒತ್ತಾಯ:

ಲಾಕ್​ಡೌನ್​ ಹೇರಿಕೆಯಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬಹುತೇಕ ಬಡವರು ಅಂದಿನ ದುಡಿಮೆಯನ್ನು ಆಧರಿಸಿ ಬದುಕುತ್ತಿದ್ದಾರೆ. ಈಗ ಉದ್ಯೋಗವಿಲ್ಲದೆ ಅವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಜನರ ಕಷ್ಟಕ್ಕೆ ಸ್ಪಂದಿಸುವುದು ಅಗತ್ಯ. ಆದರೆ, ಸರ್ಕಾರ ಖಜಾನೆ ಖಾಲಿಯಾಗಿದೆ ಎಂದು ಹೇಳುತ್ತಿದೆ. ಜೊತೆಗೆ ಹಿಂದಿನ ಸರ್ಕಾರ ಸಾಲ ಮಾಡಿಟ್ಟು ಹೋಗಿದೆ ಎಂದು ಸುಳ್ಳು ನೆಪಗಳನ್ನು ನೀಡುತ್ತಿದೆ. ಇವುಗಳನ್ನು ಬಿಟ್ಟು ತಕ್ಷಣ ರಾಜ್ಯ ಸರ್ಕಾರ ಕೂಡಲೇ ಆಹಾರ ಮತ್ತು ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
Published by: Seema R
First published: May 13, 2021, 6:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories