ಅನಗತ್ಯ ವೆಚ್ಚಕ್ಕೆ ಕಡಿವಾಣ, ಸಂಪನ್ಮೂಲ ಕ್ರೋಡೀಕರಣ; ಆರ್ಥಿಕ ಶಿಸ್ತು ಸರಿದೂಗಿಸಲು ಸಿಎಂ ಸಪ್ತಸೂತ್ರ

ಆರ್ಥಿಕ ಶಿಸ್ತು ಸರಿದೂಗಿಸುವ ವಿಚಾರವಾಗಿ ಸಿಎಂ ಬಿಎಸ್​ವೈ ಇಂದು ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಆರ್ಥಿಕತೆ ಸಮತೋಲಿನಕ್ಕಾಗಿ ಸಿಎಂ ಬಿಎಸ್​ವೈ ಅಧಿಕಾರಿಗಳಿಗೆ ಸಪ್ತ ಸೂತ್ರ ಪಾಠ ಮಾಡಿದ್ದಾರೆ. 

ಸಿಎಂ ಬಿ.ಎಸ್.ಯಡಿಯೂರಪ್ಪ.

ಸಿಎಂ ಬಿ.ಎಸ್.ಯಡಿಯೂರಪ್ಪ.

 • Share this:
  ಬೆಂಗಳೂರು: ಲಾಕ್​ಡೌನ್​ನಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಿಎಂ ಬಿಎಸ್​ವೈ ಸಪ್ತ ಸೂತ್ರ ಎಣೆದಿದ್ದಾರೆ.

  ಆರ್ಥಿಕ ಶಿಸ್ತು ಸರಿದೂಗಿಸುವ ವಿಚಾರವಾಗಿ ಸಿಎಂ ಬಿಎಸ್​ವೈ ಇಂದು ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಆರ್ಥಿಕತೆ ಸಮತೋಲಿನಕ್ಕಾಗಿ ಸಿಎಂ ಬಿಎಸ್​ವೈ ಅಧಿಕಾರಿಗಳಿಗೆ ಸಪ್ತ ಸೂತ್ರ ಪಾಠ ಮಾಡಿದ್ದಾರೆ.

  1. ಅನಗತ್ಯ ವೆಚ್ಚಕ್ಕೆ ಕಡಿವಾಣ, ಸಂಪನ್ಮೂಲ ಕ್ರೋಡೀಕರಣಕ್ಕೆ ಉತ್ತೇಜನ, ಅಧಿಕಾರಿಗಳ ಅನಗತ್ಯ ವಾಹನ ವೆಚ್ಚಕ್ಕೆ ಕಡಿವಾಣ ಹಾಕುವುದು ಹಾಗೂ ಹೊಸ ವಾಹನಗಳ ಖರೀದಿಗೆ ಬ್ರೇಕ್..

  2. ಸಾಮಾಜಿಕ ಭದ್ರತಾ ಯೋಜನೆ ಹೊರತುಪಡಿಸಿ ಇತರೆ ಯೋಜನೆಗಳಿಗೆ ಕತ್ತರಿ.  ಅನುತ್ಪಾದಕ ವೆಚ್ಚಗಳ ಸಂಪೂರ್ಣ ನಿಯಂತ್ರಣಕ್ಕೆ ಒತ್ತು...

  3. ಸಂಪನ್ಮೂಲ ಕ್ರೂಡೀಕರಣಕ್ಕೆ ಹೆಚ್ಚಿನ ಒತ್ತು ನೀಡುವುದು.

  4. ರಿಯಲ್ ಎಸ್ಟೇಟ್ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ಉತ್ತೇಜನ ನೀಡುವುದು.

  5. ಸರ್ಕಾರದ ಅದ್ಧೂರಿ ಜಯಂತಿ, ಕಾರ್ಯಕ್ರಮಗಳಿಗೆ ಕತ್ತರಿ.

  6. ಸಚಿವರು ಹಾಗೂ ಅಧಿಕಾರಿಗಳ ಅನಗತ್ಯ ಆಪ್ತ ಸಿಬ್ಬಂದಿ ನೇಮಕಕ್ಕೆ ತಡೆ.

  7. ಅಧಿಕಾರಿಗಳ ವಿದೇಶ ಪ್ರವಾಸ, ಪಂಚತಾರಾ ಹೋಟೆಲ್ ಗಳ ವಾಸ್ತವ್ಯಕ್ಕೆ ಬ್ರೇಕ್.


  ಇದನ್ನು ಓದಿ: ಕರ್ನಾಟಕದಲ್ಲಿ ಇಂದು ಒಂದೇ ದಿನ 63 ಕೊರೋನಾ ಕೇಸ್ ಪತ್ತೆ; ಸೋಂಕಿತರ ಸಂಖ್ಯೆ 925ಕ್ಕೆ ಏರಿಕೆ
  First published: