ಕಲಬುರಗಿ ಜಿಲ್ಲಾಧಿಕಾರಿ ವರ್ಗಾವಣೆ ಆದೇಶಕ್ಕೆ 2 ಗಂಟೆಯಲ್ಲಿ ತಡೆ ನೀಡಿದ ಸಿಎಂ ಬಿಎಸ್​ವೈ

ಹಗಲು-ರಾತ್ರಿ ಎನ್ನದೆ ಕೆಲಸ ಮಾಡುತ್ತಿರುವ ಜಿಲ್ಲಾಧಿಕಾರಿ ಶರತ್​ ಅವರನ್ನು ಸಂಸದ ಹಾಗೂ ಶಾಸಕರ ಒತ್ತಡಕ್ಕೆ  ವರ್ಗಾವಣೆ ಮಾಡಿದ್ದರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಈ ಸಮಯದಲ್ಲಿ ವರ್ಗಾವಣೆ ಮಾಡಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ ಎಂಬ ಕಾರಣಕ್ಕೆ ಶರತ್ ಅವರ ವರ್ಗಾವಣೆ ಆದೇಶವನ್ನು ಸರ್ಕಾರ ಹಿಂಪಡೆದಿದೆ.  

ಕಲಬುರ್ಗಿ ಜಿಲ್ಲಾಧಿಕಾರಿ ಬಿ ಶರತ್

ಕಲಬುರ್ಗಿ ಜಿಲ್ಲಾಧಿಕಾರಿ ಬಿ ಶರತ್

 • Share this:
  ಬೆಂಗಳೂರು: ಕಲಬುರಗಿ ಜಿಲ್ಲಾಧಿಕಾರಿ ಶರತ್​ ಅವರ ವರ್ಗಾವಣೆ ಆದೇಶಕ್ಕೆ ಸಿಎಂ ಬಿಎಸ್​ ಯಡಿಯೂರಪ್ಪ ತಡೆ ನೀಡಿದ್ದಾರೆ. ಕಲಬುರಗಿ ಜಿಲ್ಲಾಧಿಕಾರಿ ವರ್ಗಾವಣೆಗೆ ಅಧಿಕಾರಿ ವಲಯದಲ್ಲಿ ಭಾರಿ ಅಸಮಾಧಾನ ವ್ಯಕ್ತವಾದ್ದರಿಂದ ವರ್ಗಾವಣೆ ಆದೇಶದ ಹೊರಡಿಸಿದ ಎರಡು ಗಂಟೆಯೊಳಗೆ ಅದನ್ನು ಸಿಎಂ ಬಿಎಸ್​ವೈ ತಡೆಹಿಡಿಯಲು ಸೂಚನೆ ನೀಡಿದ್ದಾರೆ.

  ಇಂದು ಸಂಜೆ ಏಳು ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿ ಬಿ ಶರತ್​​ರನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಇವರ ಜಾಗಕ್ಕೆ ಸುರಾಲ್ಕರ್ ವಿಕಾಸ್ ಕಿಶೋರ್ ಎಂಬುವರನ್ನು ನೇಮಿಸಲಾಗಿತ್ತು.

   ಡಿ.ಸಿ ಶರತ್ ವರ್ಗಾವಣೆಗೆ ಅಧಿಕಾರಿ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಆ ಬಳಿಕ ಸಿಎಂ ಬಿಎಸ್​ವೈ ಅವರು ಡಿಸಿ ಶರತ್ ಜೊತೆ ದೂರವಾಣಿ ಮೂಲಕ ಸಂಪರ್ಕಿಸಿ, ಅವರ ಕಾರ್ಯವೈಖರಿಯನ್ನು ಪ್ರಶಂಸಿದರು. ಜೊತೆಗೆ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದೀರಿ, ಮುಂದುವರಿಸಿ, ಸದ್ಯ ನಿಮ್ಮನ್ನು ವರ್ಗಾವಣೆ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

  ಜಿಲ್ಲೆಯಲ್ಲಿ ಕೋವಿಡ್​​-19 ವ್ಯಾಪಕವಾಗಿ ಹರಡುತ್ತಿದೆ. ಇಲ್ಲಿ ಕೊರೋನಾ ವೈರಸ್​​ ತಹಬದಿಗೆ ಬರುತ್ತಿಲ್ಲ. ನಾವು ಹೇಳಿದ ಮಾತನ್ನು ಜಿಲ್ಲಾಧಿಕಾರಿ ಬಿ ಶರತ್​​ ಕೇಳುತ್ತಿಲ್ಲ. ಹಾಗಾಗಿ ಇವರನ್ನು ಎತ್ತಂಗಡಿ ಮಾಡಿ ಎಂದು ಸಂಸದ ಉಮೇಶ್​ ಜಾಧವ್​​ ಮತ್ತು ಶಾಸಕ ದತ್ತಾತ್ರೇಯ ಪಾಟೀಲ್​​ ಸಿಎಂ ಬಳಿ ಪಟ್ಟು ಹಿಡಿದಿದ್ದರು. ಹೀಗಾಗಿ ಶರತ್​ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಹಗಲು-ರಾತ್ರಿ ಎನ್ನದೆ ಕೆಲಸ ಮಾಡುತ್ತಿರುವ ಜಿಲ್ಲಾಧಿಕಾರಿ ಶರತ್​ ಅವರನ್ನು ಸಂಸದ ಹಾಗೂ ಶಾಸಕರ ಒತ್ತಡಕ್ಕೆ  ವರ್ಗಾವಣೆ ಮಾಡಿದ್ದರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಈ ಸಮಯದಲ್ಲಿ ವರ್ಗಾವಣೆ ಮಾಡಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ ಎಂಬ ಕಾರಣಕ್ಕೆ ಶರತ್ ಅವರ ವರ್ಗಾವಣೆ ಆದೇಶವನ್ನು ಸರ್ಕಾರ ಹಿಂಪಡೆದಿದೆ.

  ಇದನ್ನು ಓದಿ: ಕಲಬುರ್ಗಿ ಜಿಲ್ಲಾಧಿಕಾರಿ ಬಿ. ಶರತ್​​ ವರ್ಗಾವಣೆ - ರಾಜ್ಯ ಸರ್ಕಾರ ಆದೇಶ
  First published: