ಕೊರೋನಾ ಆತಂಕ; ಗಾಳಿಸುದ್ದಿಗಳಿಗೆ ಕಿವಿಗೊಡದಂತೆ ರಾಜ್ಯದ ಜನತೆಗೆ ಸಿಎಂ ಬಿಎಸ್​ವೈ ವಿಡಿಯೋ ಸಂದೇಶ

ಯಾವುದೇ ಮಾಹಿತಿ, ಮಾರ್ಗದರ್ಶನ ಪಡೆಯಲು ‌104 ಸಂಖ್ಯೆಗೆ ಕರೆ ಮಾಡಿ. ಸರ್ಕಾರದ ಅಧಿಕೃತ ಮಾಹಿತಿ ಬಿಟ್ಟು ವದಂತಿ ಸುದ್ದಿಗಳಿಗೆ ಕಿವಿ ಕೊಡಬೇಡಿ.  ಸಾರ್ವಜನಿಕರ ಆರೋಗ್ಯ ರಕ್ಷಣೆ ನಮ್ಮ ಆದ್ಯತೆ. ಸೋಂಕು ತಡೆಗಟ್ಟಲು ನಾವೆಲ್ಲರೂ ಸೇರಿ ಶ್ರಮಿಸೋಣ ಎಂದು ಸಿಎಂ ಬಿಎಸ್​ವೈ ಕರೆ ಕೊಟ್ಟಿದ್ದಾರೆ.

ಸಿಎಂ ಬಿ.ಎಸ್.ಯಡಿಯೂರಪ್ಪ.

ಸಿಎಂ ಬಿ.ಎಸ್.ಯಡಿಯೂರಪ್ಪ.

 • Share this:
  ಬೆಂಗಳೂರು: ವಿಶ್ವದಲ್ಲೇ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ವೈರಸ್ ಇತ್ತೀಚೆಗೆ ರಾಜ್ಯದಲ್ಲಿಯೂ ಪತ್ತೆಯಾಗಿವೆ. ಈ ಸೋಂಕು ಹರಡದ ರೀತಿ ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಹೀಗಾಗಿ ಯಾರು ಆತಂಕ ಪಡುವ ಅಗತ್ಯತೆ ಇಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

  ಇಂದು ಸಂಜೆ ವಿಡಿಯೋ ಮೂಲಕ ರಾಜ್ಯದ ಜನರಿಗೆ ಧೈರ್ಯ ಹೇಳಿದ ಬಿಎಸ್​ವೈ, ಯಾರೂ ಕೂಡ ಗಾಳಿಸುದ್ದಿಗಳಿಗೆ ಕಿವಿ ಕೊಡಬಾರದು. ಆದರೆ ಆರೋಗ್ಯ ಇಲಾಖೆ ಹೊರಡಿಸಿದ ಕೆಲ ಸೂಚನೆಗಳನ್ನು ಸಾರ್ವಜನಿಕರು ಪಾಲನೆ ಮಾಡಬೇಕು. ಜನ ಜಂಗುಳಿ ಸ್ಥಳಗಳಿಂದ ದೂರ ಇರಿ. ಮನೆಯಲ್ಲೇ ಹೆಚ್ಚು ಇರಿ, ಅಗತ್ಯ ಇದ್ದರೆ ಮಾತ್ರ ಹೊರಗೆ ಹೋಗಿ‌. ಆದಷ್ಟು ಸಭೆ ಸಮಾರಂಭಗಳಿಂದ ದೂರ ಇರಿ. ಅಗಾಗ ತಮ್ಮ ಕೈಗಳನ್ನು ತೊಳೆದು ಕೊಳ್ಳಿ. ಕೈ ಗಳಿಂದ ಮುಖ, ಮೂಗು‌,‌ ಬಾಯಿಯನ್ನು ಮುಟ್ಟಿಕೊಳ್ಳಬೇಡಿ. ತಮ್ಮ ಕಚೇರಿ, ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಶುದ್ಧ ನೀರು ಕುಡಿಯಿರಿ ಎಂದು ಸಲಹೆ ನೀಡಿದರು.

  ವಿದೇಶದಿಂದ ಬಂದವರು ಆರೋಗ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತನ್ನಿ. ನಂತರ 14 ದಿನಗಳ ಕಾಲ ಪ್ರತ್ಯೇಕವಾಗಿ ಇರಿ. ಈ ಸಂದರ್ಭದಲ್ಲಿ ಕೆಮ್ಮು, ನೆಗಡಿ, ಜ್ವರ ಬಂದರೆ ವೈದ್ಯರ ನೆರವು ಪಡೆದುಕೊಳ್ಳಿ. ಯಾವುದೇ ಮಾಹಿತಿ, ಮಾರ್ಗದರ್ಶನ ಪಡೆಯಲು ‌104 ಸಂಖ್ಯೆಗೆ ಕರೆ ಮಾಡಿ. ಸರ್ಕಾರದ ಅಧಿಕೃತ ಮಾಹಿತಿ ಬಿಟ್ಟು ವದಂತಿ ಸುದ್ದಿಗಳಿಗೆ ಕಿವಿ ಕೊಡಬೇಡಿ.  ಸಾರ್ವಜನಿಕರ ಆರೋಗ್ಯ ರಕ್ಷಣೆ ನಮ್ಮ ಆದ್ಯತೆ. ಸೋಂಕು ತಡೆಗಟ್ಟಲು ನಾವೆಲ್ಲರೂ ಸೇರಿ ಶ್ರಮಿಸೋಣ ಎಂದು ಸಿಎಂ ಬಿಎಸ್​ವೈ ಕರೆ ಕೊಟ್ಟಿದ್ದಾರೆ.

  ಇದನ್ನು ಓದಿ: ಭಾರತದಲ್ಲಿ 151ಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ; ಜಾಗತಿಕವಾಗಿ 2 ಲಕ್ಷ ಜನರಿಗೆ ಕೋವಿಡ್​​-19
  First published: