Lockdown – ಬೆಂಗಳೂರು ಜೊತೆ ಬೇರೆ ಕೆಲ ಜಿಲ್ಲೆಗಳೂ ಲಾಕ್​ಡೌನ್ ಆಗುತ್ತಾ? ಇಂದು ಡಿಸಿಗಳ ಸಭೆ ಬಳಿಕ ಸಿಎಂ ನಿರ್ಧಾರ

ವಿಡಿಯೋ ಕಾನ್ಫರೆನ್ಸ್ ವೇಳೆ ಆಯಾ ಜಿಲ್ಲೆಯ ಪರಿಸ್ಥಿತಿ ಕುರಿತು ಚರ್ಚೆ ಮಾಡಿ ಡಿಸಿಗಳು ಲಾಕ್ಡೌನ್ ಅನಿವಾರ್ಯ ಎಂದು ಅಭಿಪ್ರಾಯಪಟ್ಟರೆ ಸಿಎಂ ಯಡಿಯೂರಪ್ಪ ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

news18-kannada
Updated:July 13, 2020, 6:55 AM IST
Lockdown – ಬೆಂಗಳೂರು ಜೊತೆ ಬೇರೆ ಕೆಲ ಜಿಲ್ಲೆಗಳೂ ಲಾಕ್​ಡೌನ್ ಆಗುತ್ತಾ? ಇಂದು ಡಿಸಿಗಳ ಸಭೆ ಬಳಿಕ ಸಿಎಂ ನಿರ್ಧಾರ
ಸಿಎಂ ಬಿ.ಎಸ್‌. ಯಡಿಯೂರಪ್ಪ.
  • Share this:
ಬೆಂಗಳೂರು(ಜುಲೈ 13): ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಂಗಳವಾರದಿಂದ ಒಂದು ವಾರ ಕಾಲ ಲಾಕ್​ಡೌನ್ ಮಾಡುವುದಾಗಿ ಸರ್ಕಾರ ಈಗಾಗಲೇ ಘೋಷಣೆ ಮಾಡಿದ್ದಾಗಿದೆ. ಆದರೆ, ರಾಜ್ಯವ್ಯಾಪಿ ಲಾಕ್​ಡೌನ್ ಆಗಬೇಕು. ಇಲ್ಲವೇ ಕೊರೋನಾ ಸೋಂಕು ಅತಿ ಬಾಧಿಸುತ್ತಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಆಗಬೇಕು ಎಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ವಿವಿಧ ಜಿಲ್ಲೆಗಳ ಡಿಸಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.

ಇಂದು ಸೋಮವಾರ ಬೆಳಗ್ಗೆ 11ಗಂಟೆಗೆ ಯಡಿಯೂರಪ್ಪ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಜಿಲ್ಲಾಧಿಕಾರಿಗಳ ಸಭೆ ನಡೆಸಲಿದ್ಧಾರೆ. ಇವತ್ತು ಎರಡು ಪ್ರತ್ಯೇಕ ಸಭೆಗಳು ನಡೆಯಲಿವೆ. ಮೊದಲಿಗೆ, ಕೊರೋನಾ ಸೋಂಕು ಅತಿ ಹೆಚ್ಚು ಇರುವ 9-12 ಜಿಲ್ಲೆಗಳ ಡಿಸಿಗಳೊಂದಿಗೆ ಸಿಎಂ ಚರ್ಚೆ ನಡೆಸಲಿದ್ದಾರೆ. ನಂತರ ಎರಡನೇ ಸಭೆಯಲ್ಲಿ ಕಡಿಮೆ ತೀವ್ರತೆಯ ಸೋಂಕು ಹರಡುವಿಕೆ ಇರುವ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಮಾತನಾಡಲಿದ್ದಾರೆ. ಈ ಎರಡನೇ ಸಭೆ ಸಂಜೆ 4ಕ್ಕೆ ನಡೆಯಲಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಮೈಸೂರು, ಮಂಗಳೂರು, ಉಡುಪಿ, ಬೀದರ್, ಧಾರವಾಡ, ರಾಯಚೂರು ಮತ್ತು ಬೀದರ್ ಜಿಲ್ಲೆಗಳನ್ನ ಅತಿ ಹೆಚ್ಚು ಕೊರೋನಾ ಬಾಧಿತ ಜಿಲ್ಲೆಗಳೆಂದು ಪರಿಗಣಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಈ ಜಿಲ್ಲೆಗಳ ಡಿಸಿಗಳೊಂದಿಗೆ ಸಿಎಂ ಸಂವಾದ ಮಾಡಲಿದ್ಧಾರೆ. ಈ ಜಿಲ್ಲೆಗಳಲ್ಲಿರುವ ಪರಿಸ್ಥಿತಿ ಬಗ್ಗೆ ಸೂಕ್ಷ್ಮವಾಗಿ ಅವಲೋಕನವಾಗಲಿದೆ. ಇಲ್ಲಿ ಲಾಕ್​ಡೌನ್ ಅನಿವಾರ್ಯವಾ ಇಲ್ಲವಾ ಎಂದು ಆಯಾ ಜಿಲ್ಲಾಧಿಕಾರಿಗಳ ಅಭಿಪ್ರಾಯ ಪಡೆಯಲಿದ್ಧಾರೆ.

ಇದನ್ನೂ ಓದಿ: ಪ್ರತೀ ವಾರ್ಡ್​ಗೆ ಆಂಬುಲೆನ್ಸ್ ವ್ಯವಸ್ಥೆ: ಬೊಮ್ಮನಹಳ್ಳಿ ವಲಯ ಕೋವಿಡ್ ಉಸ್ತುವಾರಿ ಸುರೇಶ್ ಕುಮಾರ್

ಕೊರೋನಾ ವೈರಸ್ ಸೋಂಕು ಕಡಿಮೆ ಇರುವ ಜಿಲ್ಲಾಧಿಕಾರಿಗಳ ಅಭಿಪ್ರಾಯವನ್ನು ಸಿಎಂ ಪಡೆಯಲಿದ್ಧಾರೆ. ಈ ಎರಡು ಸಭೆ ಆ ಬಳಿಕ ಮುಖ್ಯಮಂತ್ರಿಗಳು ಯಾವ್ಯಾವ ಜಿಲ್ಲೆಗಳನ್ನ ಲಾಕ್​ಡೌನ್ ಮಾಡಬೇಕು ಎಂಬುದನ್ನು ನಿರ್ಧರಿಸಲಿದ್ಧಾರೆ. ಅಲ್ಲದೇ, ಲಾಕ್​ಡೌನ್ ನಿಯಮಗಳು ಹೇಗಿರಬೇಕು ಎಂಬ ಮಾರ್ಗಸೂಚಿಯನ್ನ ಇವತ್ತು ಬಿಡುಗಡೆ ಮಾಡಲಿದ್ದಾರೆ.



ಬೆಂಗಳೂರಿನಲ್ಲಿ ಕೊರೋನಾ ವೈರಸ್ ನಿಗ್ರಹದ ಹೋರಾಟಕ್ಕೆ ಎಂಟು ವಲಯಗಳನ್ನ ರಚಿಸಲಾಗಿದೆ. ಒಂದೊಂದು ವಲಯಕ್ಕೂ ಉಸ್ತುವಾರಿ ಸಚಿವರೊಬ್ಬರನ್ನು ನಿಯೋಜಿಸಲಾಗಿದೆ. ಇವರು ತಮ್ಮ ವಲಯದ ವ್ಯಾಪ್ತಿಗೆ ಬರುವ ಕ್ಷೇತ್ರಗಳ ಶಾಸಕರು, ಸಂಸದರು, ನಗರಪಾಲಿಕೆ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಸಿಎಂಗೆ ವರದಿ ತಯಾರಿಸಿದ್ದಾರೆ. ಈ ವರದಿ ಅನುಸಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರು ನಗರವನ್ನು ಲಾಕ್​ಡೌನ್ ಮಾಡುವ ಖಚಿತ ನಿರ್ಧಾರಕ್ಕೆ ಬಂದಿದ್ಧಾರೆ. ನಗರಕ್ಕೆ ಅಂಟಿಕೊಂಡಿರುವ ಗ್ರಾಮಾಂತರ ಜಿಲ್ಲೆಯನ್ನೂ ಸೇರಿಸಿ ಎರಡು ಜಿಲ್ಲೆಗಳಲ್ಲಿ ಲಾಕ್ ಡೌನ್ ಆಗಲಿದೆ ಎಂದು ಸಿಎಂ ಕಚೇರಿಯ ಪ್ರಕಟಣೆಯಲ್ಲಿ ಅಧಿಕೃತವಾಗಿ ತಿಳಿಸಲಾಗಿದೆ. ಇವತ್ತು ಕೇವಲ 2 ಜಿಲ್ಲೆಗಳು ಮಾತ್ರವಾ ಅಥವಾ ಹೆಚ್ಚು ಜಿಲ್ಲೆಗಳೂ ಲಾಕ್​ಡೌನ್ ಆಗುತ್ತವಾ ಎಂಬುದು ನಿರ್ಧಾರವಾಗಲಿದೆ.
Published by: Vijayasarthy SN
First published: July 13, 2020, 6:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading