ಮನೆಯಲ್ಲೇ ಹಬ್ಬ ಆಚರಿಸಿ, ಅನಗತ್ಯವಾಗಿ ರಸ್ತೆಯಲ್ಲಿ ತಿರುಗಾಡಿದರೆ ಕ್ರಮ; ಸಿಎಂ ಬಿಎಸ್​ವೈ ಎಚ್ಚರಿಕೆ

ರಾಜ್ಯದಲ್ಲಿ ಕರ್ಪ್ಯೂ ವಾತವರಣ ಇದೆ. ಆದರೂ ಸಹ ಜನರು ರಸ್ತೆಯಲ್ಲಿ ಓಡಾಡುತ್ತಿದ್ದಾರೆ.  ಕಾರು, ಬೈಕ್ ಗಳಲ್ಲಿ ತಿರುಗಾಡುತ್ತಿದ್ದಾರೆ.​ ಸುಮ್ಮನೆ, ಅನಗತ್ಯವಾಗಿ ರಸ್ತೆಗಳಲ್ಲಿ ಓಡಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಪೊಲೀಸರು ಕ್ರಮ ತೆಗೆದುಕೊಂಡರೆ ಅದಕ್ಕೆ ನಾನು ಜವಾಬ್ದಾರನಲ್ಲ, ಆಮೇಲೆ ನನ್ನನ್ನು ದೂಷಿಸಬೇಡಿ ಎಂದರು.

news18-kannada
Updated:March 24, 2020, 11:04 AM IST
ಮನೆಯಲ್ಲೇ ಹಬ್ಬ ಆಚರಿಸಿ, ಅನಗತ್ಯವಾಗಿ ರಸ್ತೆಯಲ್ಲಿ ತಿರುಗಾಡಿದರೆ ಕ್ರಮ; ಸಿಎಂ ಬಿಎಸ್​ವೈ ಎಚ್ಚರಿಕೆ
ಸಿಎಂ ಬಿ.ಎಸ್.ಯಡಿಯೂರಪ್ಪ.
  • Share this:
ಬೆಂಗಳೂರು(ಮಾ.24): ಯುಗಾದಿ ಹಬ್ಬವನ್ನು ಮನೆಯಲ್ಲಿಯೇ ದೇವರ ಪೂಜೆ ಮಾಡುವ ಮೂಲಕ ಆಚರಣೆ ಮಾಡಿ. ಆಡಂಬರದ ಹಬ್ಬ ಮಾಡಬೇಡಿ. ಮಾರ್ಕೆಟ್​​ಗೆ ಹೋಗುವುದನ್ನು ನಿಲ್ಲಿಸಿ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ರಾಜ್ಯದ ಜನರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಜನರು ಮಾರ್ಚ್​​ 31ರವರೆಗೆ ಮನೆಯೊಳಗೆ ಇರಬೇಕು. ಯಾರೂ ಕೂಡ ಮನೆಯಿಂದ ಹೊರಗೆ ಬರಬಾರದು ಎಂದರು. ಇದೇ ವೇಳೆ ವಾಹನ ಸವಾರರಿಗೂ ಸಿಎಂ ಎಚ್ಚರಿಕೆ ಕೊಟ್ಟರು. ರಾಜ್ಯದಲ್ಲಿ ಕರ್ಪ್ಯೂ ವಾತವರಣ ಇದೆ. ಆದರೂ ಸಹ ಜನರು ರಸ್ತೆಯಲ್ಲಿ ಓಡಾಡುತ್ತಿದ್ದಾರೆ.  ಕಾರು, ಬೈಕ್ ಗಳಲ್ಲಿ ತಿರುಗಾಡುತ್ತಿದ್ದಾರೆ.​ ಸುಮ್ಮನೆ, ಅನಗತ್ಯವಾಗಿ ರಸ್ತೆಗಳಲ್ಲಿ ಓಡಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಪೊಲೀಸರು ಕ್ರಮ ತೆಗೆದುಕೊಂಡರೆ ಅದಕ್ಕೆ ನಾನು ಜವಾಬ್ದಾರನಲ್ಲ, ಆಮೇಲೆ ನನ್ನನ್ನು ದೂಷಿಸಬೇಡಿ ಎಂದರು.

ಈ ಕುರಿತು ಸಿಎಂ ಟ್ವೀಟ್​ ಕೂಡ ಮಾಡಿದ್ದಾರೆ.ಈಗಾಗಲೇ ಹೋಟೆಲ್ ಮಾಲೀಕರಿಗೆ ನಿರ್ದೇಶನ ನೀಡಲಾಗಿದೆ. ಕಿಚನ್ ತೆರೆಯಬೇಕು , ಪಾರ್ಸಲ್ ನೀಡುವಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಇದನ್ನ ಬಳಸಿಕೊಳ್ಳಿ ಎಂದು ಸಿಎಂ ಹೇಳಿದರು.

ಲಾಕ್ ಡೌನ್‌ ಹಿನ್ನೆಲೆ; ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ಮುಖ್ಯ ರಸ್ತೆಗಳು ಬಂದ್​

ದಿನಪತ್ರಿಕೆ, ಹಾಲು, ಹಣ್ಣು, ಔಷಧಿಗಳನ್ನು ಖರೀದಿಸಲು ಪೊಲೀಸರು ಅಡ್ಡಿ ಮಾಡುತ್ತಿದ್ದಾರೆ ಎಂಬ ಆರೋಪ ಇದೆ.  ಪೊಲೀಸರಿಗೆ ಇಂಥದ್ದಕ್ಕೆಲ್ಲ ಅಡ್ಡಿ ಮಾಡಬೇಡಿ ಅಂತ ಸೂಚನೆ ಕೊಟ್ಟಿದ್ದೇವೆ ಎಂದರು.

ಇಂದಿರಾ ಕ್ಯಾಂಟೀನ್​ ಕೂಡ ಬಂದ್

ಇನ್ನು, ಕೊರೋನಾ ಭೀತಿ ಹಿನ್ನೆಲೆ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್​​ಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ. ಇಂದಿರಾ ಕ್ಯಾಂಟೀನ್​ಗಳಲ್ಲಿ ಹೆಚ್ಚು ಜನ ಸೇರುತ್ತಿದ್ದರಿಂದ ಕ್ಯಾಂಟೀನ್​ಗಳನ್ನು ಮುಚ್ಚಲಾಗಿದೆ. ಇಂದಿರಾ ಕ್ಯಾಂಟೀನ್​ ಇರುವುದಿಲ್ಲ. ಹೀಗಾಗಿ ಹೋಟೆಲ್​ಗಳಿಂದ ಪಾರ್ಸೆಲ್​ ತರಿಸಿಕೊಳ್ಳಿ. ಉಚಿತ ಆಹಾರ ವಿತರಣೆಯಿಂದಾಗಿ ಹೆಚ್ಚು ಜನರು ಸೇರುತ್ತಿದ್ದಾರೆ. ಈ ಹಿನ್ನೆಲೆ, ಇಂದಿರಾ ಕ್ಯಾಂಟೀನ್​ ಮುಚ್ಚಿ ಜನ ಸೇರದಂತೆ ಸರ್ಕಾರ ಕ್ರಮ ಕೈಗೊಂಡಿದೆ.
First published: March 24, 2020, 10:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading