ಕೋವಿಡ್ ಕೇರ್ ಸೆಂಟರ್​ನಲ್ಲಿ ಬಾಡಿಗೆ ಬೆಡ್​ಗೆ ಬ್ರೇಕ್; ಹಾಸಿಗೆಗಳ ಖರೀದಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ

ಅಗತ್ಯ ವಸ್ತುಗಳನ್ನು ಬಾಡಿಗೆ ಪಡೆಯುವ ವಿಷಯವು ನನ್ನ ಗಮನಕ್ಕೆ ಬಂದ ನಂತರ ಆದ ಲೋಪದೋಷವನ್ನು ಸರಿಪಡಿಸಲು ಕೂಡಲೇ ಕ್ರಮ ಕೈಗೊಳ್ಳಲು ಮತ್ತು ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಸೂಚನೆ ನೀಡಲಾಗಿತ್ತು. ನನ್ನ ಸೂಚನೆಯಂತೆ ಅಧಿಕಾರಿಗಳು ಅಗತ್ಯ ವಸ್ತುಗಳನ್ನು ಖರೀದಿಸಲು ತಕ್ಷಣವೇ ಕ್ರಮ ಕೈಗೊಂಡಿದ್ದರಿಂದ ಈ ವಸ್ತುಗಳನ್ನು ಬಾಡಿಗೆ ಪಡೆಯುವುದರಿಂದ ಆಗುವ ಅನವಶ್ಯಕ ವೆಚ್ಚವನ್ನು ತಡೆಯಲಾಗಿದೆ.

news18-kannada
Updated:July 16, 2020, 7:10 AM IST
ಕೋವಿಡ್ ಕೇರ್ ಸೆಂಟರ್​ನಲ್ಲಿ ಬಾಡಿಗೆ ಬೆಡ್​ಗೆ ಬ್ರೇಕ್; ಹಾಸಿಗೆಗಳ ಖರೀದಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ
ಸಿಎಂ ಬಿ.ಎಸ್‌. ಯಡಿಯೂರಪ್ಪ.
  • Share this:
ಬೆಂಗಳೂರು: ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನೋ ಗಾದೆ ಮಾತಿನಂತೆ ಸರ್ಕಾರದ ಹಣವನ್ನು ಹೇಗೆ ಬೇಕಾದರೂ ಖರ್ಚು ಮಾಡಬಹುದು ಎಂದು ತಿಳಿದುಕೊಂಡಿದ್ದಾರೆ ನಮ್ಮ ಅಧಿಕಾರಿಗಳು. ಈಗ ಅದಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಬ್ರೇಕ್ ಹಾಕಿದ್ದಾರೆ.

ಬೆಂಗಳೂರಿನ ಅಂತರರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್​ನಲ್ಲಿ ಬಾಡಿಗೆ ಬೆಡ್ ಖರೀದಿಸಲು ತಿಂಗಳಿಗೆ 24 ಕೋಟಿ ಖರ್ಚು ಮಾಡಲು ಅಧಿಕಾರಿಗಳು ಪ್ಲಾನ್ ಮಾಡಿದ್ದರು. ಇದೀಗ ಅಂತಹ ಅನವಶ್ಯಕ ಖರ್ಚಿಗೆ ಸಿಎಂ ಯಡಿಯೂರಪ್ಪ ಬ್ರೇಕ್ ಹಾಕೋದರ ಮೂಲಕ ಬರೀ‌ 7.32 ಕೋಟಿ ಖರ್ಚು ಮಾಡಿಸಿದ್ದಾರೆ. ಈ ಕೋವಿಡ್ ಕೇರ್ ಸೆಂಟರ್​ನಲ್ಲಿ 10100 ಬೆಡ್ ಗಳಿಗೆ ಬಾಡಿಗೆ ಬೆಡ್ ಗಾಗಿ ತಿಂಗಳಿಗೆ‌ 24 ಕೋಟಿ ಖರ್ಚು ಮಾಡಲು ಅಧಿಕಾರಿಗಳು ಅಂದಾಜು ಮಾಡಿದ್ದರು. ಇದೀಗ ಬಾಡಿಗೆ ಬೆಡ್ ಗೆ ತಡೆಯೊಡ್ಡಿ, ಅದನ್ನು ಖರೀದಿಸುವಂತೆ ಸೂಚನೆ ನೀಡಿದ್ದಾರೆ.

ಖರೀದಿ ಮಾಡುವ ಬೆಡ್​ಗಳನ್ನು ಈಗ ಕೋವಿಡ್ ಕೇರ್ ಸೆಂಟರ್ ಗೆ ಬಳಸಿಕೊಂಡು ನಂತರ ಅದನ್ನು ಮುಂದೆ ವಿದ್ಯಾರ್ಥಿ ನಿಲಯಗಳಿಗೆ ಉಪಯೋಗಿಸುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಇದೀಗ ಅಧಿಕಾರಿಗಳು ಕೂಡ ಬೆಡ್ ಖರೀದಿ ಮಾಡಲು ಕ್ರಮ ವಹಿಸಿದ್ದು, ಖರೀದಿ ಮಾಡಿರುವ ವಸ್ತುಗಳಿಗೆ ಒಟ್ಟು 7.32 ಕೋಟಿಗಳನ್ನು ತಕ್ಷಣವೇ ಪೂರೈಸಲು ಬಿಬಿಎಂಪಿ ಆಯುಕ್ತರಿಗೆ ಸಿಎಂ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಸಿಎಂ ಯಡಿಯೂರಪ್ಪರಿಂದ ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ಅದರ ವಿವರ ಇಲ್ಲಿದೆ.

ಇದನ್ನು ಓದಿ: ವೈದ್ಯಕೀಯ ಸಿಬ್ಬಂದಿ ಕೊರತೆಯಿಂದಾಗಿ ಅರ್ಧದಷ್ಟು ಹಾಸಿಗೆ ಕೊಡೋದು ಕಷ್ಟ; ಖಾಸಗಿ ಆಸ್ಪತ್ರೆಗಳ ಸಂಘ ಸ್ಪಷ್ಟನೆ

  • ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ 10,000 ಬೆಡ್‍ಗಳ ಸಾಮರ್ಥ್ಯವುಳ್ಳ ಕೋವಿಡ್-19 ಕೇರ್ ಸೆಂಟರ್​ಗೆ ಅವಶ್ಯವಿರುವ ವಸ್ತುಗಳನ್ನು ವಿವಿಧ ಸಂಸ್ಥೆಗಳಿಂದ ಪ್ರತಿದಿನಕ್ಕೆ ರೂ.800 ದರದಲ್ಲಿ ಬಾಡಿಗೆ ಪಡೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ನಿರ್ಧಾರ ಮಾಡಿದ್ದರು. ಇದರಿಂದ ಒಂದು ತಿಂಗಳಿಗೆ ಅಂದಾಜು ರೂ.24.00 ಕೋಟಿ ವೆಚ್ಚವಾಗುವ ಸಂಭವವಿತ್ತು.

  • ಈ ಬಾಡಿಗೆ ದರವು ದುಬಾರಿ ಇದ್ದುದರಿಂದ ಮತ್ತು ಬಾಡಿಗೆ ದರದಲ್ಲಿಯೇ ಈ ವಸ್ತುಗಳನ್ನು ಖರೀದಿ ಮಾಡಲು ಅವಕಾಶವಿದ್ದುದರಿಂದ ಹಾಗೂ ತದನಂತರ ಈ ವಸ್ತುಗಳನ್ನು ಸರ್ಕಾರದ ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ನೀಡುವುದು ಸೂಕ್ತವೆಂದು ಮನಗಂಡು ಅದರಂತೆ ಕ್ರಮ ಜರುಗಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು.

  • ಆ ಪ್ರಕಾರ ಬಿಬಿಎಂಪಿ ಅಧಿಕಾರಿಗಳು ಪೂರೈಕೆದಾರರೊಂದಿಗೆ ಸಮಾಲೋಚನೆ ಮಾಡಿ ಪ್ರತಿ ಬೆಡ್‍ಗೆ ಬೇಕಾದ ವಸ್ತುಗಳ ಪೈಕಿ 6 ವಸ್ತುಗಳಾದ ಮಂಚ, ಬೆಡ್, ಫ್ಯಾನ್, ಬಕೇಟ್, ಮಗ್, ಡಸ್ಟ್​ಬಿನ್‍ಗಳನ್ನು ಪ್ರತಿ ಸೆಟ್‍ಗೆ ರೂ.7,500 ಮೊತ್ತದಲ್ಲಿ ಖರೀದಿ ಮಾಡಲು ತೀರ್ಮಾನಿಸಿರುತ್ತಾರೆ. ಇದರಿಂದ ಪ್ರಸ್ತುತ ತಯಾರಿಯಲ್ಲಿರುವ 6,500 ಬೆಡ್‍ಗಳಿಗೆ ಬೇಕಾಗಿರುವ ಈ ವಸ್ತುಗಳನ್ನು ರೂ.4.87 ಕೋಟಿ ಮೊತ್ತದಲ್ಲಿ ಖರೀದಿಸಲು ತೀರ್ಮಾನಿಸಲಾಗಿದೆ.

  • ನೆಲ ಹಾಸಿಗೆ ಸಲುವಾಗಿ ವಿನೈಲ್ ಫ್ಲೋರಿಂಗ್‍ನ್ನು ಪ್ರತಿ ಚದರ ಅಡಿಗೆ ರೂ.31 ರಂತೆ ಖರೀದಿಸಲು ತೀರ್ಮಾನಿಸಿದ್ದು, ಇದರಿಂದ ಒಟ್ಟು 7.9 ಲಕ್ಷ ಚದರ ಅಡಿಗೆ ರೂ. 2.45 ಕೋಟಿ ವೆಚ್ಚವಾಗಲಿದೆ.

  • ಪುನರ್ಬಳಕೆಯಾಗದ 19 ವಸ್ತುಗಳನ್ನು ಪ್ರತಿ ಸೆಟ್‍ಗೆ ಪ್ರತಿ ತಿಂಗಳಿಗೆ ರೂ.6,500/- ಮೊತ್ತದಲ್ಲಿ ಬಾಡಿಗೆ ಪಡೆಯಲು ತೀರ್ಮಾನಿಸಿರುತ್ತಾರೆ. ಇದರಿಂದ ಪ್ರಸ್ತುತ ತಯಾರಿಯಲ್ಲಿರುವ 6,500 ಬೆಡ್‍ಗಳಿಗೆ ಈ 19 ವಸ್ತುಗಳನ್ನು ಒಂದು ತಿಂಗಳಿಗೆ ರೂ.4.23 ಕೋಟಿ ಮೊತ್ತದಲ್ಲಿ ಬಾಡಿಗೆ ಪಡೆಯಲು ತೀರ್ಮಾನಿಸಲಾಗಿದೆ.

  • ಅಗತ್ಯ ವಸ್ತುಗಳನ್ನು ಬಾಡಿಗೆ ಪಡೆಯುವ ವಿಷಯವು ನನ್ನ ಗಮನಕ್ಕೆ ಬಂದ ನಂತರ ಆದ ಲೋಪದೋಷವನ್ನು ಸರಿಪಡಿಸಲು ಕೂಡಲೇ ಕ್ರಮ ಕೈಗೊಳ್ಳಲು ಮತ್ತು ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಸೂಚನೆ ನೀಡಲಾಗಿತ್ತು. ನನ್ನ ಸೂಚನೆಯಂತೆ ಅಧಿಕಾರಿಗಳು ಅಗತ್ಯ ವಸ್ತುಗಳನ್ನು ಖರೀದಿಸಲು ತಕ್ಷಣವೇ ಕ್ರಮ ಕೈಗೊಂಡಿದ್ದರಿಂದ ಈ ವಸ್ತುಗಳನ್ನು ಬಾಡಿಗೆ ಪಡೆಯುವುದರಿಂದ ಆಗುವ ಅನವಶ್ಯಕ ವೆಚ್ಚವನ್ನು ತಡೆಯಲಾಗಿದೆ ಹಾಗೂ ಖರೀದಿ ಮಾಡಿರುವ ವಸ್ತುಗಳ ಒಟ್ಟು ಮೊತ್ತ ರೂ.7.32 ಕೋಟಿಗಳನ್ನು ತಕ್ಷಣವೇ ಪೂರೈಕೆದಾರರಿಗೆ ಪಾವತಿಸಲು ಆಯಕ್ತರು, ಬಿಬಿಎಂಪಿ ಇವರಿಗೆ ಸೂಚಿಸಲಾಗಿದೆ.

Published by: HR Ramesh
First published: July 16, 2020, 6:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading