ಕೋವಿಡ್​​-19 ಅಕ್ರಮ: ದಾಖಲೆ ಸಮೇತ ಆರೋಪ ಮಾಡುವಂತೆ ಸಿದ್ದರಾಮಯ್ಯಗೆ ಸಿಎಂ ಬಿ.ಎಸ್​​ ಯಡಿಯೂರಪ್ಪ ಸವಾಲ್​

ಇನ್ನು, ಸಿದ್ದರಾಮಯ್ಯ ಆರೋಪಕ್ಕೆ ನಾನು ಇನ್ನೂ ಉತ್ತರ ನೀಡಿಲ್ಲ. ನೀವು ಕೇಳುತ್ತಿರುವುದಕ್ಕೆ ನಾನು ಹೇಳುತ್ತಿದ್ದೇನೆ. ಕೋವಿಡ್​-19 ಉಪಕರಣಗಳ ಖರೀದಿಯಲ್ಲಿ ನಡೆದ ಭ್ರಷ್ಟಚಾರದ ಬಗ್ಗೆ ದಾಖಲೆ ನೀಡಲಿ, ಯಾರೇ ತಪ್ಪು ಮಾಡಿದರೇ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಪುನರುಚ್ಚರಿಸಿದರು.

 ಸಿದ್ದರಾಮಯ್ಯ ಹಾಗೂ ಸಿಎಂ ಯಡಿಯೂರಪ್ಪ

ಸಿದ್ದರಾಮಯ್ಯ ಹಾಗೂ ಸಿಎಂ ಯಡಿಯೂರಪ್ಪ

  • Share this:
ಬೆಂಗಳೂರು(ಜು.06): ಕೋವಿಡ್‌ -19 ಉಪಕರಣಗಳ ಖರೀದಿಯಲ್ಲಿ 2,000 ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲೇ ಕೂರಲಿ. ನಾನೇ ಅಧಿಕಾರಿಗಳಿಗೆ ಎಲ್ಲಾ ಕಡತಗಳನ್ನು ನೀಡುವಂತೆ ಹೇಳುತ್ತೇನೆ. ಈ ಕಡತಗಳನ್ನು ಪರಿಶೀಲಿಸಿ ಏನಾದರೂ ತಪ್ಪು ಕಂಡು ಬಂದರೇ ಹೇಳಲಿ ಎಂದು ಸಿದ್ದರಾಮಯ್ಯಗೆ ಯಡಿಯೂರಪ್ಪ ಸವಾಲ್​ ಹಾಕಿದ್ದಾರೆ.

ಇಂದು ಡಾ. ಬಾಬು ಜಗಜೀವನರಾಂ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಇರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಬಿ.ಎಸ್​ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತಾಡಿದರು. ಸಿದ್ದರಾಮಯ್ಯ ಸುಖಾಸುಮ್ಮನೇ ಆರೋಪ ಮಾಡುವುದು ಬೇಡ. ದಾಖಲೆಯೊಂದಿಗೆ ಮಾತಾಡಲಿ. ಯಾವುದೇ ಅಧಿಕಾರಿ ತಪ್ಪು ಮಾಡಿದರೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಇನ್ನು, ಸಿದ್ದರಾಮಯ್ಯ ಆರೋಪಕ್ಕೆ ನಾನು ಇನ್ನೂ ಉತ್ತರ ನೀಡಿಲ್ಲ. ನೀವು ಕೇಳುತ್ತಿರುವುದಕ್ಕೆ ನಾನು ಹೇಳುತ್ತಿದ್ದೇನೆ. ಕೋವಿಡ್​-19 ಉಪಕರಣಗಳ ಖರೀದಿಯಲ್ಲಿ ನಡೆದ ಭ್ರಷ್ಟಚಾರದ ಬಗ್ಗೆ ದಾಖಲೆ ನೀಡಲಿ, ಯಾರೇ ತಪ್ಪು ಮಾಡಿದರೇ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಪುನರುಚ್ಚರಿಸಿದರು.

ಹೀಗೆ ಮುಂದುವರಿದ ಬಿಎಸ್​ ಯಡಿಯೂರಪ್ಪ, ಯಾರು ಕೂಡ ಬೆಂಗಳೂರು ಬಿಟ್ಟು ಹೋಗಬೇಡಿ. ನೀವು ಕೊರೋನಾ ಜೊತೆಗೆ ಬದುಕಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದೆ. ಸರ್ಕಾರದೊಂದಿಗೆ ಬೆಂಗಳೂರಿನ ಜನ ಸಹಕರಿಸಿ ಎಂದು ಮನವಿ ಮಾಡಿದರು ಬಿಎಸ್​ವೈ.

ಇದನ್ನೂ ಓದಿ: ‘ಗಾಳಿಯಿಂದಲೂ ಕೊರೊನಾ ಹರಡಲಿದೆ‘ - ಹೀಗೊಂದು ಭಯಾನಕ ಮಾಹಿತಿ ಹೊರಹಾಕಿದ 239 ವಿಜ್ಞಾನಿಗಳು

ಬೆಂಗಳೂರಿನಲ್ಲಿ 450 ಆ್ಯಂಬುಲೆನ್ಸ್, 10 ಸಾವಿರ ಹೆಚ್ಚುವರಿ ಬೆಡ್​ಗಳನ್ನು ವ್ಯವಸ್ಥೆ ಮಾಡಲಾಗಿದೆ. ಜತೆಗೆ ಹೆಚ್ಚು ಆರೋಗ್ಯ ಸವಲತ್ತು ಕೊಡಲು ಕ್ರಮಕೈಗೊಂಡಿದ್ದೇವೆ. ಹೀಗಾಗಿ ಯಾರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಡಾ. ಬಾಬು ಜಗಜೀವನರಾಂ ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿ. ಇವರು ಸಾಮಾಜಿಕ ಹರಿಕಾರ ಎಂದೇ ಖ್ಯಾತಿಗಳಿಸಿದ್ದಾರೆ. ಇಂತಹ ಮಹಾನ್​ ನಾಯಕರ ಮಾರ್ಗದರ್ಶನದಲ್ಲಿ ನಾವು ನಡೆಯಬೇಕಿದೆ ಎಂದರು.

 
Published by:Ganesh Nachikethu
First published: