ಮಕ್ಕಳ‌ ಕಲಿಕೆಗಾಗಿ ಹೊಸ ಸಾಹಸಕ್ಕೆ ಕೈ ಹಾಕಿದ ಶಿಕ್ಷಣ ಇಲಾಖೆ; ಯೂಟ್ಯೂಬ್ ಚಾನಲ್ ಉದ್ಘಾಟಿಸಿದ ಬಿಎಸ್‌ವೈ

ಲಾಕ್‌ಡೌನ್‌ನಿಂದಾಗಿ ಕಳೆದ ಒಂದು ತಿಂಗಳಿನಿಂದ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ. ಅಲ್ಲದೆ, ಮುಂದಿನ ಒಂದೆರಡು ತಿಂಗಳೂ ಸಹ ಶಾಲೆಗಳು ಕಾರ್ಯನಿರ್ವಹಿಸುವುದು ಅನಿಶ್ಚಿತತೆಯಿಂದ ಕೂಡಿದೆ. ಹೀಗಾಗಿ ಮಕ್ಕಳು ಮನೆಯಲ್ಲಿ ಕಲಿಕೆ ಇಲ್ಲದೆ ಕಾಲ ಕಳೆಯುವಂತಾಗಿದೆ.

ಮಕ್ಕಳ ಕಲಿಕೆಗಾಗಿ ಯೂಟ್ಯೂಬ್ ಚಾನೆಲ್ ಉದ್ಘಾಟಿಸಿದ ಸಿಎಂ ಬಿಎಸ್‌ವೈ.

ಮಕ್ಕಳ ಕಲಿಕೆಗಾಗಿ ಯೂಟ್ಯೂಬ್ ಚಾನೆಲ್ ಉದ್ಘಾಟಿಸಿದ ಸಿಎಂ ಬಿಎಸ್‌ವೈ.

  • Share this:
ಬೆಂಗಳೂರು (ಏಪ್ರಿಲ್‌ 16); ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಕ್ಕಳು ಮನೆಯಿಂದಲೇ ಕಲಿಯುಲು ಅನುಕೂಲವಾಗುವ ಸಲುವಾಗಿ ಕರ್ನಾಟಕ ಶಿಕ್ಷಣ ಇಲಾಖೆ ಯೂಟ್ಯೂಬ್ ಚಾನಲ್ ಆರಂಭಿಸಿದ್ದು ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಈ ಚಾನಲ್‌ ಅನ್ನು ಉದ್ಘಾಟಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಕಳೆದ ಒಂದು ತಿಂಗಳಿನಿಂದ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ. ಅಲ್ಲದೆ, ಮುಂದಿನ ಒಂದೆರಡು ತಿಂಗಳೂ ಸಹ ಶಾಲೆಗಳು ಕಾರ್ಯನಿರ್ವಹಿಸುವುದು ಅನಿಶ್ಚಿತತೆಯಿಂದ ಕೂಡಿದೆ. ಹೀಗಾಗಿ ಮಕ್ಕಳು ಮನೆಯಲ್ಲಿ ಕಲಿಕೆ ಇಲ್ಲದೆ ಕಾಲ ಕಳೆಯುವಂತಾಗಿದೆ. ಇದೇ ಕಾರಣಕ್ಕೆ ಮಕ್ಕಳಿಗೆ ಮನೆಯಲ್ಲೇ ಕಲಿಕೆಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಂತಹ ಒಂದು ಕಾರ್ಯಕ್ಕೆ ಮುಂದಾಗಿದೆ.

ರಜೆಯ ಕಾರಣ ಮನೆಯಲ್ಲಿರುವ ಮಕ್ಕಳಿಗೆ ಕತೆ, ಹಾಡು, ಚಿತ್ರ ಕಲೆ, ಸಂಗೀತ, ಕಿರು ನಾಟಕ, ಕ್ರಾಫ್ಟ್‌, ಒಗಟು, ಗಾದೆ, ಮ್ಯಾಜಿಕ್‌, ಪದಬಂಧ ಇತ್ಯಾದಿಗಳ ಮೂಲಕ ತಲುಪಿ, ಅವರನ್ನು ರಂಜಿಸಲು ಹಾಗೂ ಅವರನ್ನು ತೊಡಗಿಸಿಕೊಳ್ಳಲು ಉದ್ದೇಶಿಸಿದೆ. ಈ ಮಕ್ಕಳ ಯುಟ್ಯೂಬ್ ಚಾನೆಲ್ ಗೆ ' ಮಕ್ಕಳ ವಾಣಿ: ನಲಿಯೋಣ, ಕಲಿಯೋಣ ' ಎಂದು ಹೆಸರಿಸಲಾಗಿದೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬಿಎಸ್‌ ಯಡಿಯೂರೊಪ್ಪ ಈ ಚಾನೆಲ್‌ ಅನ್ನು ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಆರೋಗ್ಯ ಸಚಿವ ಶ್ರೀರಾಮಲು ಉಪಸ್ಥಿತರಿದ್ದರು.

ಇದನ್ನೂ ಓದಿ : 14 ವರ್ಷದ ಅಪ್ರಾಪ್ತ ಬಾಲಕಿಯಿಂದ ಹೆಣ್ಣು ಮಗುವಿಗೆ ಜನ್ಮ ; ಚಾಮರಾಜನಗರದಲ್ಲೊಂದು ಅಮಾನವೀಯ ಘಟನೆ!
First published: