HOME » NEWS » Coronavirus-latest-news » CM BS YEDIYURAPPA HOLD MEETING WITH MINISTERS AND SENIOR OFFICIALS RHHSN

ಕೋವಿಡ್ ನಿಯಂತ್ರಣ ಸಂಬಂಧ ಅಧಿಕಾರಿ, ಸಚಿವರಿಗೆ ಸಿಎಂ ಬಿಎಸ್​ವೈ ನೀಡಿದ ಸೂಚನೆಗಳೇನು?

ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಲಾಕ್ ಡೌನ್ ಎಲ್ಲೆಡೆ ಪಾಲನೆ ಆಗ್ತಿದೆ. ಕೆಲವು ಕಡೆ ಮಾತ್ರ ಸಮಸ್ಯೆ ಆಗಿದೆ. ಜನರು ಸಹಕಾರ ನೀಡಬೇಕು. 18-44 ವರ್ಷದವರಿಗೆ ಲಸಿಕೆ ಪ್ರಾರಂಭವಾಗಿದೆ. ಯಾವ ರೀತಿ ನಿಭಾಯಿಸಬೇಕು ಅಂತ ಚರ್ಚೆ ಆಗಿದೆ. ಅನ್ ಲೈನ್ ಮುಖಾಂತರ ರಿಜಿಸ್ಟರ್ ಆಗಬೇಕು. ಅವರಿಗೆ ಕರೆ ಬರಲಿದ್ದು, ಅವರು ಮಾತ್ರ ಲಸಿಕೆ ಪಡೆಯಲು ಬರಬೇಕು. ಅದನ್ನು ಹೊರತುಪಡಿಸಿ, ಉಳಿದವರಿಗೆ ಅವಕಾಶವಿಲ್ಲ ಎಂದರು.

news18-kannada
Updated:May 10, 2021, 8:47 PM IST
ಕೋವಿಡ್ ನಿಯಂತ್ರಣ ಸಂಬಂಧ ಅಧಿಕಾರಿ, ಸಚಿವರಿಗೆ ಸಿಎಂ ಬಿಎಸ್​ವೈ ನೀಡಿದ ಸೂಚನೆಗಳೇನು?
ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಿಎಂ ಬಿಎಸ್​ವೈ ಸಭೆ.
  • Share this:
ಬೆಂಗಳೂರು:  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ತಮ್ಮ ನಿವಾಸದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಕೋವಿಡ್ -19 ನಿಯಂತ್ರಣದ ಕುರಿತು ಚರ್ಚೆ ನಡೆಸಿದರು. ರಾಜ್ಯದಲ್ಲಿ ಕೋವಿಡ್ ಚೈನ್​ಲಿಂಕ್​ ಉಲ್ಲಂಘಿಸುವ ಉದ್ದೇಶದಿಂದ ಈ ಹಿಂದೆ 14 ದಿನಗಳ ಜನತಾ ಕರ್ಫ್ಯೂ ವಿಧಿಸಲಾಗಿತ್ತು. ಆದರೆ, ಜನತಾ ಕರ್ಫ್ಯೂ ನಿರೀಕ್ಷಿಸಿದ ರೀತಿ ಯಶಸ್ಸು ಕಾಣದ ಕಾರಣ ಇಂದಿನಿಂದ ಎರಡು ವಾರಗಳ ಕಾಲ ಲಾಕ್​ಡೌನ್​ ಜಾರಿ ಮಾಡಲಾಗಿದೆ. ಮೊದಲ ದಿನದ ಲಾಕ್​ಡೌನ್​ ಹಾಗೂ ಮುಂದಿನ ಕ್ರಮಗಳ ಕುರಿತು ಸಿಎಂ  ಬಿಎಸ್ ಯಡಿಯೂರಪ್ಪ ಅವರು ಅಧಿಕಾರಿಗಳು ಹಾಗೂ ಸಚಿವರ ಜೊತೆ ಸಭೆ ನಡೆಸಿದರು.

ಸಭೆಯಲ್ಲಿ ಸಿಎಂ ನೀಡಿದ ಸೂಚನೆಗಳು

ಕೋವಿಡ್ -19 ನಿಯಂತ್ರಿಸಲು ಸಚಿವರುಗಳಿಗೆ ನೀಡಿರುವ ಜವಾಬ್ದಾರಿಯ ಅನುಸಾರ ಎಲ್ಲಿಯೂ ಯಾವುದೇ ರೀತಿಯ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಪ್ರಮುಖವಾಗಿ ಕಟ್ಟುನಿಟ್ಟಿನ ರೂಲ್ಸ್ ಗಳನ್ನು ಜಾರಿಗೆ ತಂದಿದ್ದು ಜನರು ಅನಗತ್ಯವಾಗಿ ಓಡಾಡುವುದನ್ನು‌ ತಪ್ಪಿಸಬೇಕು

ತುರ್ತು ಅಗತ್ಯವಿರುವ ರೋಗಿಗಳಿಗೆ ಬೆಡ್ ಹಂಚಿಕೆಗೆ ಕ್ರಮ ವಹಿಸುವುದು ಮತ್ತು ರೆಮಿಡಿಸಿವಿಯರ್ ಡ್ರಗ್ ಪೂರೈಕೆಯನ್ನು ಅಗತ್ಯತೆಗೆ ಅನುಸಾರವಾಗಿ ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲು ಸೂಚಿಸಿದರು.

ಖಾಸಗಿ ಆಸ್ಪತ್ರೆ ಗಳ ಬೆಡ್ ಗಳ ಬಗ್ಗೆ ನಿಗಾ ಇಡಬೇಕು

ಅಲ್ಲದೆ ಆಕ್ಸಿಜನ್, ರೆಮಿಡಿಸಿವಿಯರ್ ಹಾಗು ಬೆಡ್ ಸೇರಿದಂತೆ ಇತರೆ ವಿಷಯಗಳಲ್ಲಿ ಅಕ್ರಮ ಉಂಟಾದರೆ ಕೂಡಲೇ ಕ್ರಮ ಕೈಗೊಳ್ಳಲು ಆದೇಶಿಸಿದರು.ವಾರ್ ರೂಮ್ ಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು

ಹಂತ ಹಂತವಾಗಿ ವೈದ್ಯಕೀಯ ಕಾಲೇಜುಗಳಿಗೆ ಮತ್ತು ಆಸ್ಪತ್ರೆ ಗಳಿಗೆ ಆಕ್ಸಿಜನ್ ಜನರೇಟರ್ ಪ್ಲಾಂಟ್ ಹಾಕಲು ಈಗಿನಿಂದಾನೆ ಕೆಲಸ ಶುರು ಮಾಡಲು ಸೂಚಿಸಲಾಯಿತು

3ನೇ‌ ಅಲೆಗೆ ಈಗಿನಿಂದಾನೆ ಸಿದ್ದರಾಗಬೇಕಿದ್ದು ಅದಕ್ಕೊಂದು‌ ಟಾಸ್ಕ್ ಫೋರ್ಸ್ ಕಮಿಟಿ ಮಾಡಲು ಸೂಚಿಸಲಾಯಿತು.

ಇದನ್ನು ಓದಿ: ಚುನಾವಣಾ ಫಲಿತಾಂಶಗಳಲ್ಲಿ ಸೋಲು, ಕೋವಿಡ್ ನಿರ್ವಹಣೆಯಲ್ಲೂ ವೈಫಲ್ಯ; ಆರ್​ಎಸ್​ಎಸ್​-ಬಿಜೆಪಿಯಲ್ಲಿ ಮನೆಮಾಡಿದ ಆತಂಕ

ಶಾಸಕರು ಹಾಗು ಸಚಿವರು ತಮ್ಮ ತಮ್ಮ ಕ್ಷೇತ್ರದಲ್ಲಿ ವಾಸ್ತವ್ಯ ಮಾಡಿ‌ ಜಿಲ್ಲೆಗಳ ಕೊರೋನಾ ಪರಿಸ್ಥಿತಿ ಹತೋಟಿಗೆ ತರಲು‌ ಶ್ರಮಿಸಬೇಕು ಎಂದು ಕರೆ ನೀಡಿದರು.
Youtube Video

ಲಾಕ್​ಡೌನ್​ಗೆ ಜನರು ಸಹಕರಿಸಬೇಕು: ಬೊಮ್ಮಾಯಿ

ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಲಾಕ್ ಡೌನ್ ಎಲ್ಲೆಡೆ ಪಾಲನೆ ಆಗ್ತಿದೆ. ಕೆಲವು ಕಡೆ ಮಾತ್ರ ಸಮಸ್ಯೆ ಆಗಿದೆ. ಜನರು ಸಹಕಾರ ನೀಡಬೇಕು. 18-44 ವರ್ಷದವರಿಗೆ ಲಸಿಕೆ ಪ್ರಾರಂಭವಾಗಿದೆ. ಯಾವ ರೀತಿ ನಿಭಾಯಿಸಬೇಕು ಅಂತ ಚರ್ಚೆ ಆಗಿದೆ. ಅನ್ ಲೈನ್ ಮುಖಾಂತರ ರಿಜಿಸ್ಟರ್ ಆಗಬೇಕು. ಅವರಿಗೆ ಕರೆ ಬರಲಿದ್ದು, ಅವರು ಮಾತ್ರ ಲಸಿಕೆ ಪಡೆಯಲು ಬರಬೇಕು. ಅದನ್ನು ಹೊರತುಪಡಿಸಿ, ಉಳಿದವರಿಗೆ ಅವಕಾಶವಿಲ್ಲ. ಬಿಗಿ ಕ್ರಮ ತೆಗೆದುಕೊಳ್ಳಬೇಕು ಅಂತ ನಿರ್ಧಾರ ಮಾಡಲಾಗಿದೆ. ಅದರ ಅರ್ಥ ಹಿಂಸೆ ಕೊಡೋದು ಎಂದಲ್ಲ. ಬೇರೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳುತ್ತೇವೆ. ಜನರೂ ಕೂಡ ಸಹಕರಿಸಬೇಕು ಎಂದು ಮನವಿ ಮಾಡಿದರು.
Published by: HR Ramesh
First published: May 10, 2021, 8:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories