ಕರ್ನಾಟಕದಲ್ಲಿ ಕೋವಿಡ್​​-19 ಆರ್ಭಟ: ಸೋಮವಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಜತೆ ಸಿಎಂ ಯಡಿಯೂರಪ್ಪ ಸಭೆ

ಸೋಂಕಿತರ ಓಡಾಟದಿಂದ ಜಿಲ್ಲೆಯಲ್ಲಿ ಕೊರೋನಾ ಹೆಚ್ಚಳದ ವಿಷಯ ಕಂಡು ಬಂದಲ್ಲಿ ಅಂತರ್​​ ಜಿಲ್ಲಾ ಪ್ರಯಾಣಕ್ಕೆ ಬ್ರೇಕ್​​ ಹಾಕಲಿದ್ದಾರೆ. ಎಷ್ಟು ಟೆಸ್ಟಿಂಗ್​​ ಸಾಧ್ಯವೋ ಅಷ್ಟು ಮಾಡಿ, ಹಾಗೆಯೇ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ ನೀಡಲಿದ್ದಾರೆ.


Updated:July 11, 2020, 11:06 AM IST
ಕರ್ನಾಟಕದಲ್ಲಿ ಕೋವಿಡ್​​-19 ಆರ್ಭಟ: ಸೋಮವಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಜತೆ ಸಿಎಂ ಯಡಿಯೂರಪ್ಪ ಸಭೆ
ಬಿ.ಎಸ್‌. ಯಡಿಯೂರಪ್ಪ.
  • Share this:
ಬೆಂಗಳೂರು(ಜು.11): ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಕೋವಿಡ್​​-19 ಪಾಸಿಟಿವ್​​ ಪ್ರಕರಣಗಳು ವರದಿಯಾಗಿವೆ. ಇದರ ನಿಯಂತ್ರಣಕ್ಕೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಭಾರೀ ಸರ್ಕಸ್​​ ಮಾಡುತ್ತಿದೆ. ಕೊರೋನಾ ವಿರುದ್ಧ ಹೋರಾಡುವು ಹೇಗೆ ಎಂಬುದನ್ನು ಚರ್ಚಿಸಲು ಸಿಎಂ ಸಾಲುಸಾಲು ಸಭೆಗಳನ್ನು ನಡೆಸುತ್ತಿದ್ದಾರೆ. ಹೀಗಿರುವಾಗಲೇ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆಗೆ ಸಿಎಂ ಯಡಿಯೂರಪ್ಪ ವಿಡಿಯೋ ಕಾನ್ಫ್​ರೆನ್ಸ್​​ಗೆ ಮುಂದಾಗಿದ್ಧಾರೆ. 

ಸಿಎಂ ಯಡಿಯೂರಪ್ಪ ತಮ್ಮ ಮನೆಯಿಂದಲೇ ಸೋಮವಾರ ವಿಡಿಯೋ ಕಾನ್ಫ್​​​ರೆನ್ಸ್​ ಮೂಲಕ ಜಿಲ್ಲಾಧಿಕಾರಿಗಳ ಸಭೆ ನಡೆಸಲಿದ್ದಾರೆ. ಇದರಲ್ಲೂ ಸೋಂಕು ಹೆಚ್ಚಿರುವ ಜಿಲ್ಲೆಗಳ ಡಿಸಿಗಳೊಂದಿಗೆ ಕೂಲಂಕುಷವಾಗಿ ಚರ್ಚೆ ಮಾಡಲಿದ್ದಾರೆ. ಈ ವೇಳೆ ಎಲ್ಲಾ ಜಿಲ್ಲೆಗಳಲ್ಲಿನ ಸದ್ಯದ ಕೊರೋನಾ ವೈರಸ್​​ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆಯಲಿದ್ಧಾರೆ.

ಆಯಾ ಜಿಲ್ಲೆಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗಳು ಏನು ಕ್ರಮ ತೆಗೆದುಕೊಂಡಿದ್ದಾರೆ? ಸೋಂಕಿನ ಪ್ರಮಾಣ ಎಷ್ಟಿದೆ? ಕೋವಿಡ್​-19 ಪೀಡಿತರಿಗೆ ಚಿಕಿತ್ಸೆ ಹೇಗೆ ನೀಡುತ್ತಿದ್ಧಾರೆ? ಎನ್ನುವುದರ ಬಗ್ಗೆ ಡಿಸಿಗಳ ಜತೆ ಸುಧೀರ್ಘ ಸಮಾಲೋಚನೆ ಮಾಡಲಿದ್ಧಾರೆ ಸಿಎಂ.

ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅಂದೇ ಕೆಲವು ಪ್ರಮುಖ ನಿರ್ಧಾರಗಳನ್ನು ಸಿಎಂ ತೆಗೆದುಕೊಳ್ಳಲಿದ್ಧಾರೆ. ಅಂತರ್​​ ಜಿಲ್ಲಾ ಓಡಾಟದ ನಿರ್ಬಂಧದ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸೋಂಕಿತರ ಓಡಾಟದಿಂದ ಜಿಲ್ಲೆಯಲ್ಲಿ ಕೊರೋನಾ ಹೆಚ್ಚಳದ ವಿಷಯ ಕಂಡು ಬಂದಲ್ಲಿ ಅಂತರ್​​ ಜಿಲ್ಲಾ ಪ್ರಯಾಣಕ್ಕೆ ಬ್ರೇಕ್​​ ಹಾಕಲಿದ್ದಾರೆ. ಎಷ್ಟು ಟೆಸ್ಟಿಂಗ್​​ ಸಾಧ್ಯವೋ ಅಷ್ಟು ಮಾಡಿ, ಹಾಗೆಯೇ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ ನೀಡಲಿದ್ದಾರೆ.

ಕರ್ನಾಟಕದಲ್ಲೇ ಅತೀಹೆಚ್ಚು ಕೊರೋನಾ ಕೇಸುಗಳ ದಾಖಲಾಗುತ್ತಿರುವುದು ಬೆಂಗಳೂರಿನಲ್ಲೇ. ವಿರೋಧ ಪಕ್ಷಗಳು ಕೊರೋನಾ ಮಟ್ಟಹಾಕಲು ಬೆಂಗಳೂರನ್ನು ಸಂಪೂರ್ಣ ಲಾಕ್​ಡೌನ್​​​ ಮಾಡಿ ಎಂದು ಒತ್ತಾಯಿಸಿವೆ. ಆದರೆ, ಬೆಂಗಳೂರು ನಗರದಲ್ಲಿ ಮತ್ತೊಮ್ಮೆ ಲಾಕ್​​ಡೌನ್ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿರುವ ಕೊರೋನಾ ತಡೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಭಾರೀ ಸರ್ಕಸ್ ನಡೆಸುತ್ತಿದೆ.
ಇದನ್ನೂ ಓದಿ: Delhi Coronavirus Updates: ದೆಹಲಿಯಲ್ಲಿ ಕೋವಿಡ್​​-19 ಕಾವು: ಒಂದೇ ದಿನ 2,089 ಕೇಸ್​​​, 1.10 ಲಕ್ಷದ ಗಡಿ ಸಮೀಪಿಸಿದ ಸೋಂಕಿತರ ಸಂಖ್ಯೆ

ಈ ಮಧ್ಯೆ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಕೊರೋನಾ ಸೋಂಕು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಡಾ ಸುದರ್ಶನ್ ಬಲ್ಲಾಳ್ ನೇತೃತ್ವದ ತಜ್ಞರ ತಂಡ ಅಭಿಪ್ರಾಯಪಟ್ಟಿದೆ. ಸರ್ಕಾರಕ್ಕೆ ಮುಂದಿನ ದಿನಗಳು ಸವಾಲಾಗಿ ಪರಿಣಮಿಸಲಿದೆ ಎಂದು ಹೇಳುತ್ತಿದೆ.
Published by: Ganesh Nachikethu
First published: July 11, 2020, 10:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading