ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ: ಲಾಕ್‌ಡೌನ್‌ ಮುಂದುವರಿಸಬೇಕೇ ಬೇಡವೇ ಎಂಬ ಬಗ್ಗೆ ಚರ್ಚೆ

ಸಮಿತಿಯೂ ಲಾಕ್​​ಡೌನ್ ಅನ್ನು ಹಂತ ಹಂತವಾಗಿ ಹೇಗೆ ಸಡಿಲಗೊಳಿಸುವುದು ಎಂಬ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿದ ನಂತರ ವರದಿ ಸಲ್ಲಿಸಿದೆ. ಇವರ ಕಾರ್ಯಕ್ಕೆ ಕೃತಜ್ಞತೆಗಳನ್ನು ತಿಳಿಸಿದ ಸಿಎಂ ಬಿ.ಎಸ್​​ ಯಡಿಯೂರಪ್ಪ, ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಹೇಳಿದರು.

ಸಿಎಂ ಬಿ.ಎಸ್​​ ಯಡಿಯೂರಪ್ಪ.

ಸಿಎಂ ಬಿ.ಎಸ್​​ ಯಡಿಯೂರಪ್ಪ.

 • Share this:
  ಬೆಂಗಳೂರು(ಏ.09): ಕೊರೋನಾ ಲಾಕ್​​ಡೌನ್​​​ ಮುಂದುವರಿಸಬೇಕಾ ಬೇಡವೇ ಎಂಬ ವಿಚಾರವಾಗಿ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ. ಬೆಳಿಗ್ಗೆ ಸುಮಾರು 11 ಗಂಟೆ ವೇಳೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. ಇಲ್ಲಿ ರಾಜ್ಯದಲ್ಲಿ ಲಾಕ್​​ಡೌನ್ ಮುಂದುವರೆಸಬೇಕೇ ಬೇಡವೇ ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಕೊರೋನಾ ವೈರಸ್​ ತಡೆಗೆ ಕೈಗೊಂಡ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಯಡಿಯೂರಪ್ಪ ಮಾಹಿತಿ ಪಡೆಯಲಿದ್ದಾರೆ.

  ಕೊರೋನಾ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ಇಡೀ ದೇಶಾದ್ಯಂತ ಜಾರಿ ಮಾಡಲಾಗಿರುವ ಲಾಕ್​​ಡೌನ್​​ ಮುಕ್ತಾವಾಗಲು ಇನ್ನೇನು ಐದು ದಿನ ಬಾಕಿ. ಹಾಗಾಗಿ ಏಪ್ರಿಲ್​​​​ 14ನೇ ತಾರೀಕಿನ ಬಳಿಕ ಲಾಕ್​​ಡೌನ್​​​​​ ಅಂತ್ಯವಾಗುತ್ತಾ? ವಿಸ್ತರಣೆಯಾಗುತ್ತಾ? ಎಂಬ ಕುತೂಹಲ ಜನರಲ್ಲಿ ಇದೆ. ಈ ಮಧ್ಯೆಯೇ ರಾಜ್ಯ ಸರ್ಕಾರಕ್ಕೆ ಲಾಕ್​ಡೌನ್ ಮುಂದುವರಿಕೆಗೆ ಕೋವಿಡ್-19 ಟಾಸ್ಕ್​ಪೋರ್ಸ್ ಶಿಫಾರಸು ಮಾಡಿದೆ. ಏಪ್ರಿಲ್ ಕೊನಯವರೆಗೂ ಲಾಕ್​​ಡೌನ್ ಮುಂದುವರೆಸುವುದು ಅತ್ಯಗತ್ಯ. ಆದರೆ, ಇದು ಇಡೀ ರಾಜ್ಯಕ್ಕೆ ಅನ್ವಯಿಸಬೇಕಿಲ್ಲ. ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡು ಬಂದ ಜಿಲ್ಲೆಗಳಲ್ಲಿ ಮಾತ್ರ ಲಾಕ್​​​ಡೌನ್ ಮುಂದುವರೆಸಬೇಕು ಎಂದು ಕೋವಿಡ್​​​-19 ಟಾಸ್ಕ ಫೋರ್ಸ್​ ವರದಿ ಸಲ್ಲಿಸಿದೆ.

  ನಿನ್ನೆಯೇ ಜಯದೇವ ಹೃದ್ರೋಗ ಸಂಸ್ಥೆಯ ಡಾ. ಮಂಜುನಾಥ್, ನಾರಾಯಣ ಹೆಲ್ತ್ ನ ಡಾ.ದೇವಿ ಶೆಟ್ಟಿ, ರಾಜೀವ್ ಗಾಂಧಿ ವಿವಿ ಉಪಕುಲಪತಿ ಡಾ. ಸಚ್ಚಿದಾನಂದ ಮುಂತಾದ ಹಿರಿಯ ವೈದ್ಯರ ತಂಡ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದೆ. ಡಾ. ದೇವಿ ಶೆಟ್ಟಿ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯು ಲಾಕ್ ಡೌನ್ ಸಡಿಲಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಸಲ್ಲಿಸಿದ ವರದಿಯಲ್ಲಿ ಒಂದಷ್ಟು ಪ್ರಮುಖ ಅಂಶಗಳು ಶಿಫಾರಸು ಮಾಡಿದೆ.

  ಇದನ್ನೂ ಓದಿ: ಏ.14ರ ನಂತರ ಲಾಕ್​​ಡೌನ್​​​ ಮುಂದುವರಿಸಿ: ರಾಜ್ಯ ಸರ್ಕಾರಕ್ಕೆ ಟಾಸ್ಕ್​ಪೋರ್ಸ್ ಶಿಫಾರಸು ಮಾಡಿದ ಪ್ರಮುಖ ಅಂಶಗಳು

  ಸಮಿತಿಯೂ ಲಾಕ್​​ಡೌನ್ ಅನ್ನು ಹಂತ ಹಂತವಾಗಿ ಹೇಗೆ ಸಡಿಲಗೊಳಿಸುವುದು ಎಂಬ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿದ ನಂತರ ವರದಿ ಸಲ್ಲಿಸಿದೆ. ಇವರ ಕಾರ್ಯಕ್ಕೆ ಕೃತಜ್ಞತೆಗಳನ್ನು ತಿಳಿಸಿದ ಸಿಎಂ ಬಿ.ಎಸ್​​ ಯಡಿಯೂರಪ್ಪ, ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಹೇಳಿದರು.
  First published: