ಯಡಿಯೂರಪ್ಪನವರ ಅಧಿಕೃತ ನಿವಾಸದಲ್ಲಿ ಯಾರಿಗೂ ಕೊರೋನಾ ಇಲ್ಲ; ರೇಣುಕಾಚಾರ್ಯ ಸ್ಪಷ್ಟನೆ

ಸಿಎಂ ಯಡಿಯೂರಪ್ಪನವರ ಗೃಹ ಕಚೇರಿ ಕೃಷ್ಣಾದಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಆದರೆ ಕಾವೇರಿಯಲ್ಲಿ ಯಾರಿಗೂ ಪಾಸಿಟಿವ್ ಆಗಿಲ್ಲ. ಸಿಎಂ ಕಾರಿನ ಸ್ಪೇರ್ ಡ್ರೈವರ್ ಹಾಗೂ ಕಾರಿನಲ್ಲಿದ್ದ ಎಸ್ಕಾರ್ಟ್​ಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

news18-kannada
Updated:July 10, 2020, 12:18 PM IST
ಯಡಿಯೂರಪ್ಪನವರ ಅಧಿಕೃತ ನಿವಾಸದಲ್ಲಿ ಯಾರಿಗೂ ಕೊರೋನಾ ಇಲ್ಲ; ರೇಣುಕಾಚಾರ್ಯ ಸ್ಪಷ್ಟನೆ
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ
  • Share this:
ಬೆಂಗಳೂರು (ಜು. 10): ಮುಖ್ಯಮಂತ್ರಿ ಯಡಿಯೂರಪ್ಪನವರ ಖಾಸಗಿ ಕಾರು ಚಾಲಕನಿಗೆ ಕೊರೋನಾ ಸೋಂಕು ತಗುಲಿಲ್ಲ. ಸ್ಪೇರ್​ ಡ್ರೈವರ್​ಗೆ ಮತ್ತು ಸಿಎಂ ಎಸ್ಕಾರ್ಟ್​ಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಯಡಿಯೂರಪ್ಪನವರು ಆರೋಗ್ಯವಾಗಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.

ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಯಡಿಯೂರಪ್ಪನವರನ್ನು ಭೇಟಿಯಾಗಿ ಬಂದ ಬಳಿಕ ಮಾತನಾಡಿರುವ ಎಂಪಿ. ರೇಣುಕಾಚಾರ್ಯ, ಗೃಹ ಕಚೇರಿ ಕೃಷ್ಣಾದಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಆದರೆ ಕಾವೇರಿಯಲ್ಲಿ ಯಾರಿಗೂ ಪಾಸಿಟಿವ್ ಆಗಿಲ್ಲ. ಸಿಎಂ ಕಾರಿನ ಸ್ಪೇರ್ ಡ್ರೈವರ್ ಹಾಗೂ ಕಾರಿನಲ್ಲಿದ್ದ ಎಸ್ಕಾರ್ಟ್​ಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಅಧಿಕೃತವಾಗಿ ಕರ್ತವ್ಯ ನಿರ್ವಹಿಸುವ ಕಾರು ಚಾಲಕರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಿ.ಎಸ್. ಯಡಿಯೂರಪ್ಪಗೂ ಕೊರೋನಾ ಭೀತಿ; ಸಿಎಂ ಮನೆ, ಗೃಹ ಕಚೇರಿಯ 10 ಸಿಬ್ಬಂದಿಗೆ ಸೋಂಕು ಪತ್ತೆ

ಸಿಎಂ ಯಡಿಯೂರಪ್ಪ ಕೂಡ ಚೆನ್ನಾಗಿ ಇದ್ದಾರೆ. ಬೆಳಿಗ್ಗೆ ಚೆನ್ನಾಗಿ ವಾಕಿಂಗ್ ಮಾಡಿ ಲವಲವಿಕೆಯಿಂದ ಇದ್ದಾರೆ. ಅವರಿಗೆ ಯಾವುದೇ ಸಮಸ್ಯೆ ಇಲ್ಲ. ನಾನು ಅವರ ಜೊತೆ 40 ನಿಮಿಷಗಳ ಕಾಲ ಚರ್ಚೆ ಮಾಡಿ ಬಂದಿದ್ದೇನೆ. ರಾಜ್ಯದಲ್ಲಿ ಕೊವೀಡ್ ನಿಯಂತ್ರಣ ಸಂಬಂಧ ಅಧಿಕಾರಿಗಳ ಜೊತೆ ಚರ್ಚೆ ಮಾಡ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಚರ್ಚೆ ಮಾಡ್ತಿದ್ದಾರೆ. ಸಿಎಂ ಖಾಸಗಿ ನಿವಾಸ ಧವಳಗಿರಿಯಲ್ಲೂ ಯಾರಿಗೂ ಕೊರೋನಾ ದೃಢಪಟ್ಟಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿಯ ಟೆಲಿಫೋನ್ ಆಪರೇಟರ್, ಇಬ್ಬರು ಎಸ್ಕಾರ್ಟ್​,  ಅಡುಗೆ ಮಾಡುವವನಿಗೆ, ಒಬ್ಬ ಕಾರು ಚಾಲಕನಿಗೆ ಸೇರಿ ಸಿಎಂ ಯಡಿಯೂರಪ್ಪ ಸುತ್ತಮುತ್ತಲಿರುವ ಒಟ್ಟು 10 ಜನರಿಗೆ ಕೊರೋನಾ ಸೋಂಕು ಹರಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾ, ಕಾವೇರಿ ನಿವಾಸವನ್ನು ಸ್ಯಾನಿಟೈಸ್ ಮಾಡಲಾಗಿದೆ.
Published by: Sushma Chakre
First published: July 10, 2020, 12:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading