• Home
 • »
 • News
 • »
 • coronavirus-latest-news
 • »
 • ಸಂಡೇ ಲಾಕ್​​ಡೌನ್​​​: ಯಾರ ಭೇಟಿಗೂ ಅವಕಾಶ ನೀಡದೆ ಮನೆಯಲ್ಲೇ ಉಳಿದ ಸಿಎಂ ಯಡಿಯೂರಪ್ಪ

ಸಂಡೇ ಲಾಕ್​​ಡೌನ್​​​: ಯಾರ ಭೇಟಿಗೂ ಅವಕಾಶ ನೀಡದೆ ಮನೆಯಲ್ಲೇ ಉಳಿದ ಸಿಎಂ ಯಡಿಯೂರಪ್ಪ

ಬಿ.ಎಸ್‌. ಯಡಿಯೂರಪ್ಪ.

ಬಿ.ಎಸ್‌. ಯಡಿಯೂರಪ್ಪ.

ಇನ್ನು, ರಾಜ್ಯದ ಹಲವು ಜಿಲ್ಲೆಗಳಿಗೆ ಯಡಿಯೂರಪ್ಪ ಪ್ರವಾಸ ಮಾಡಬೇಕಿತ್ತು. ಕೊರೋನಾ ಕಾರನಿಂದಲೇ ಇತ್ತೀಚೆಗೆ ರಾಜ್ಯ ಪ್ರವಾಸ ರದ್ದು ಮಾಡಿರುವ ಯಡಿಯೂರಪ್ಪ ತನ್ನ ಕಚೇರಿಯಲ್ಲೇ ಕೂತು ಈಗ ಬೇರೆ ಜಿಲ್ಲೆಗಳ ವಿವಿಧ ಕಾಮಗಾರಿಗಳಿಗೆ ಆನ್​​ಲೈನ್​​ ಮೂಲಕ ಚಾಲನೆ ನೀಡುತ್ತಿದ್ದಾರೆ.

 • Share this:

  ಬೆಂಗಳೂರು(ಜು.05): ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್​ ಆರ್ಭಟ ಮುಂದುವರಿದಿದೆ. ಈ ಕೋವಿಡ್​​-19 ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಇದರ ನಿಯಂತ್ರಣಕ್ಕೆ ಪುನಃ ಸರ್ಕಾರ ಸಂಡೇ ಲಾಕ್​ಡೌನ್ ಮಾಡಲು ನಿರ್ಧಾರ ಮಾಡಿದೆ. ಇಂದಿನಿಂದ ಅಂದರೆ ಜುಲೈ 5ರಿಂದಲೇ ಪ್ರತೀ ಭಾನುವಾರ ರಾಜ್ಯಾದ್ಯಂತ ಲಾಕ್​ಡೌನ್ ಮಾಡಲಾಗುತ್ತಿದೆ. ಅದರಂತೆಯೇ ಇಂದು ಭಾನುವಾರ ಸಂಪೂರ್ಣ ಲಾಕ್​ಡೌನ್ ಮಾಡಲಾಗಿದೆ. ಅಗತ್ಯ ಸೇವೆ ಹೊರತುಪಡಿಸಿ ಎಲ್ಲವೂ ಸಂಪೂರ್ಣ ಬಂದ್​ ಮಾಡಲಾಗಿದೆ. ಹೀಗಾಗಿಯೇ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಸೇರಿದಂತೆ ಸಚಿವ- ಶಾಸಕರ ಇಂದಿನ ಎಲ್ಲಾ ಕಾರ್ಯಕ್ರಮಗಳು ರದ್ದಾಗಿವೆ.

  ಹೌದು, ಸಿಎಂ ಬಿ.ಎಸ್​ ಯಡಿಯೂರಪ್ಪ ತನ್ನ ಅಧಿಕೃತ ಕಾವೇರಿ ನಿವಾಸದಲ್ಲೇ ಎಲ್ಲಿಗೂ ಹೋಗದೇ ಉಳಿದಿದ್ದಾರೆ. ಇಂದು ಯಾರ ಭೇಟಿಗೂ ಅವಕಾಶ ನೀಡದೇ ಕುಟುಂಬದೊಂದಿಗೆ ಕಾಲ ಕಳೆಯಲಿದ್ದಾರೆ. ಆದ್ದರಿಂದಲೇ ಸಿಎಂ ನಿವಾಸದತ್ತ ಯಾರು ಕೂಡ ಸುಳಿದಿಲ್ಲ ಎನ್ನಲಾಗಿದೆ. ಭದ್ರತಾ ಸಿಬ್ಬಂದಿ ಹೊರತುಪಡಿಸಿ ಇನ್ಯಾರನ್ನು ಭೇಟಿ ಮಾಡದೇ ಮನೆಯಲ್ಲೇ ಇದ್ದಾರೆ ಸಿಎಂ ಯಡಿಯೂರಪ್ಪ.

  ಈ ಹಿಂದೆಯೇ ರಾಜ್ಯಾದ್ಯಂತ ಮಾರಕ ಕೊರೋನಾ ವೈರಸ್​​ ಆರ್ಭಟ ಹೆಚ್ಚಾಗುತ್ತಿದ್ದಂತೆ ಸಿಎಂ ಬಿ.ಎಸ್​​ ಯಡಿಯೂರಪ್ಪ ರಾಜ್ಯ ಪ್ರವಾಸ ಕೈಬಿಟ್ಟಿದ್ದರು. ಸಿಎಂ ಯಡಿಯೂರಪ್ಪ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಬೇಕಿತ್ತು. ಆದರೆ, ಕೊರೋನಾ ವೈರಸ್​ ಭೀತಿಯಿಂದಾಗಿ ಬೆಂಗಳೂರಿನಿಂದಲೇ ಆನ್​​ಲೈನ್​​ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಲು ನಿರ್ಧರಿಸಿದ್ದರು.


  ಇದನ್ನೂ ಓದಿ: Sunday lockdown: ಇಂದು ಸಂಪೂರ್ಣ ಲಾಕ್​ಡೌನ್​; ಏನಿರುತ್ತೆ, ಏನಿರಲ್ಲ? ಇಲ್ಲಿದೆ ಮಾಹಿತಿ

  ಇನ್ನು, ರಾಜ್ಯದ ಹಲವು ಜಿಲ್ಲೆಗಳಿಗೆ ಯಡಿಯೂರಪ್ಪ ಪ್ರವಾಸ ಮಾಡಬೇಕಿತ್ತು. ಕೊರೋನಾ ಕಾರನಿಂದಲೇ ಇತ್ತೀಚೆಗೆ ರಾಜ್ಯ ಪ್ರವಾಸ ರದ್ದು ಮಾಡಿರುವ ಯಡಿಯೂರಪ್ಪ ತನ್ನ ಕಚೇರಿಯಲ್ಲೇ ಕೂತು ಈಗ ಬೇರೆ ಜಿಲ್ಲೆಗಳ ವಿವಿಧ ಕಾಮಗಾರಿಗಳಿಗೆ ಆನ್​​ಲೈನ್​​ ಮೂಲಕ ಚಾಲನೆ ನೀಡುತ್ತಿದ್ದಾರೆ.

  Published by:Ganesh Nachikethu
  First published: