ಕೊರೋನಾ ವೈರಸ್​​ ತಡೆಗೆ ಬಿಗಿಕ್ರಮ: ಏ.20ರಂದು ಸಂಪುಟ ಸಭೆ ಕರೆದ ಸಿಎಂ ಯಡಿಯೂರಪ್ಪ

ಏಪ್ರಿಲ್​​ 20ನೇ ತಾರೀಕು ಸಿಎಂ ಬಿ.ಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಅಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕೊರೋನಾ ಕಡಿಮೆಯಾಗದ ಬಗ್ಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ.

ಸಿಎಂ ಬಿ.ಎಸ್​​ ಯಡಿಯೂರಪ್ಪ.

ಸಿಎಂ ಬಿ.ಎಸ್​​ ಯಡಿಯೂರಪ್ಪ.

 • Share this:
  ಬೆಂಗಳೂರು(ಏ.16): ಕೊರೋನಾ ವೈರಸ್​​ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಾರ್ಚ್​ 23ರಿಂದ ಏಪ್ರಿಲ್ 14ರತನಕ 21 ದಿನಗಳ ಕಾಲ ಮೊದಲ ಅವಧಿಯ ಲಾಕ್​​ಡೌನ್​​​​​ ಜಾರಿಗೊಳಿಸಿತ್ತು. ಲಾಕ್​​ಡೌನ್​​ ಜಾರಿಯಲ್ಲಿದ್ದರೂ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯೇನು ಕಡಿಮೆಯಾಗಲಿಲ್ಲ, ಬದಲಿಗೆ ಏರುತ್ತಲೇ ಇತ್ತು. ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ 21 ದಿನಗಳ ಲಾಕ್​​ಡೌನ್​ ಅವಧಿಯನ್ನು ಮೇ 3ನೇ ತಾರೀಕಿನವರೆಗೂ ವಿಸ್ತರಣೆ ಮಾಡಿ ಆದೇಶಿಸಿದರು. ಇವರ ಸೂಚನೆ ಮೇರೆಗೆ ಲಾಕ್​​ಡೌನ್​​ ಅನ್ನು ಮುಂದಿನ ತಿಂಗಳು ಮೇ 3ರವರೆಗೂ ವಿಸ್ತರಿಸಿದೆ.

  ಹೀಗಿರುವಾಗ ರಾಜ್ಯ ಸರ್ಕಾರವೂ ಎರಡನೇ ಲಾಕ್​​ಡೌನ್​​ ಅವಧಿಯಲ್ಲಿ ಏ.​​ 20ರತನಕ ರೆಡ್ ಅಲರ್ಟ್ ಇರುವ ಹಾಟ್​​ಸ್ಪಾಟ್ ಪ್ರದೇಶಗಳಲ್ಲಿ ತೀವ್ರ ಅವಲೋಕನ ನಡೆಸಲಾಗಿದೆ. ಈ ಅವಲೋಕನದ ವೇಳೆ ಇನ್ನೂ ಕೊರೋನಾ ವೈರಸ್​ ತಹಬದಿಗೆ ಬಂದಿಲ್ಲ. ಹಾಗಾಗಿಯೇ ಕರ್ನಾಟಕದ ಹಾಟ್​ಸ್ಪಾಟ್​ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಗೃಹ ಸಚಿವಾಲಯ ನೀಡಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಚಿವ ಸಂಪುಟ ಸಭೆ ಕರೆದಿದ್ದಾರೆ.

  ಏಪ್ರಿಲ್​​ 20ನೇ ತಾರೀಕು ಸಿಎಂ ಬಿ.ಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಅಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕೊರೋನಾ ಕಡಿಮೆಯಾಗದ ಬಗ್ಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ಜತೆಗೆ ಕೇಂದ್ರ ಗೃಹ ಇಲಾಖೆ ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿ ಮತ್ತು ಮುಂದೆ ಕೈಗೊಳ್ಳಬೇಕಾದ ಮಹತ್ವ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ಧಾರೆ.​​

  ಇದನ್ನೂ ಓದಿ: ಮುಸ್ಲಿಮರಿಂದ ಕೊರೋನಾ ಬಂತು ಅನ್ನೋದು ತಪ್ಪು; ನಮಗೂ ತಬ್ಲಿಘಿ ಜಮಾತ್​​ಗೂ ಸಂಬಂಧವೇ ಇಲ್ಲ - ಮೊಹಮ್ಮದ್​ ಯೂಸುಫ್​​

  ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೇವಲ 24 ಗಂಟೆಗಳಲ್ಲಿ ಒಂದೂವರೆ ವರ್ಷದ ಹೆಣ್ಣು ಮಗು ಸೇರಿದಂತೆ 34 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 313ಕ್ಕೆ ಏರಿಕೆಯಾಗಿದೆ.

  ರಾಜ್ಯದಲ್ಲಿ ಕೊರೋನಾ ಸೋಂಕಿನಿಂದಾಗಿ ಈಗಾಗಲೇ 13 ಜನರು ಸಾವನ್ನಪ್ಪಿದ್ದಾರೆ. 313 ಸೋಂಕಿತರಲ್ಲಿ 82 ಜನರು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನದವರೆಗೆ ರಾಜ್ಯದಲ್ಲಿ ಹೊಸದಾಗಿ 34 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ 5, ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ 8, ಚಿಕ್ಕೋಡಿಯಲ್ಲಿ 1, ಬೆಳಗಾವಿಯ ರಾಯಬಾಗದಲ್ಲಿ 7, ಬೆಳಗಾವಿಯಲ್ಲಿ 1, ಮೈಸೂರಿನಲ್ಲಿ 3, ಗದಗದಲ್ಲಿ 1, ಕಲಬುರ್ಗಿಯಲ್ಲಿ 1, ವಿಜಯಪುರದಲ್ಲಿ 7 ಜನರಿಗೆ ಕೊರೋನಾ ವೈರಸ್​ ಇರುವುದು ಖಚಿತವಾಗಿದೆ.
  First published: