CM BS Yediyurappa: ರಾಜ್ಯ ಸರ್ಕಾರದಿಂದಲೂ ಅನಾಥ ಮಕ್ಕಳಿಗೆ ವಿಶೇಷ ಪ್ಯಾಕೇಜ್ ಘೋಷಣೆ; ಹೆಣ್ಣು ಮಕ್ಕಳಿಗೆ 1 ಲಕ್ಷ ಸಹಾಯಧನ

ಕೇಂದ್ರ ಸರ್ಕಾರ ಕೂಡ ಕೋವಿಡ್​ನಿಂದ ಪೋಷಕರನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ವಿಶೇಷ ಯೋಜನೆಗಳನ್ನು ಘೋಷಿಸಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಮಹತ್ವದ ಸಭೆಯಲ್ಲಿ ಕೋವಿಡ್ ಸಾಂಕ್ರಾಮಿಕದಿಂದ ತೊಂದರೆಗೆ ಸಿಲುಕಿರುವ ಮಕ್ಕಳಿಗಾಗಿ ಪ್ರಧಾನಿ ಮೋದಿ ಅವರು ಕೆಲವು ಪರಿಹಾರ ಕ್ರಮಗಳನ್ನು ಘೋಷಿಸಿದರು.

ಬಿ.ಎಸ್​. ಯಡಿಯೂರಪ್ಪ.

ಬಿ.ಎಸ್​. ಯಡಿಯೂರಪ್ಪ.

  • Share this:
    ಬೆಂಗಳೂರು: ಅನಾಥ ಮಕ್ಕಳ ಆಶ್ರಯಕ್ಕೆ ಕೇಂದ್ರ ಸರ್ಕಾರ ಸಲಹೆ ನೀಡಿದ್ದು, ಅದರಂತೆ   ಕೊರೋನಾದಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಯೋಜನೆ ಜಾರಿಗೆ ತರಲಾಗಿದೆ. ಅನಾಥ ಮಕ್ಕಳಿಗೆ ಮಾಸಿಕ 3500 ರೂಪಾಯಿ ಸಹಾಯಧನ ನೀಡಲು ನಿರ್ಧರಿಸಲಾಗಿದೆ. ಮಾದರಿ ವಸತಿ ನಿಲಯಗಳಲ್ಲಿ ಶಿಕ್ಷಣ ಹಾಗೂ 10 ನೇ ತರಗತಿ ಮುಗಿಸಿದ ಮಕ್ಕಳಿಗೆ ಟ್ಯಾಬ್ ಅಥವಾ ಲ್ಯಾಪ್ ಟ್ಯಾಪ್ ನೀಡಲಾಗುವುದು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಘೋಷಿಸಿದರು.

    ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು,  21 ವರ್ಷ ಪೂರೈಸಿದ ಹೆಣ್ಣು ಮಗಳಿಗೆ 1 ಲಕ್ಷ ಸಹಾಯಧನ ನೀಡಲಾಗುವುದು. ಮದುವೆಗೆ ಅಥವಾ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡಲಾಗುವುದು ಎಂದು ಹೇಳಿದರು.

    ಸಿಎಂ ಬಾಲಸೇವಾ ಯೋಜನೆ ಮೂಲಕ ಕೊರೋನಾ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದ. ಕೋವಿಡ್ ಮನುಕುಲವನ್ನು ಬಾಧಿಸುತ್ತಿದೆ. ಹಿಂದೆಂದು ಬಾಧಿಸದ ಸಮಸ್ಯೆ ಈಗ ಆಗಿದೆ. ಪಿಎಂ ಮೋದಿ ನಿರ್ಧಾರಿತ ಯೋಜನೆ ಇದಾಗಿದೆ. ಆತ್ಮ ನಿರ್ಭಾರ್ ಯೋಜನೆ ಮೂಲಕ ಅನೇಕರು ಸ್ವಾವಲಂಭಿಗಳಾಗಿದ್ದಾರೆ. ಪ್ಯಾಕೆಜ್ ನಿಂದ ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ. ಕೊರೋನಾದಿಂದ ದೇಶದಲ್ಲಿ, ರಾಜ್ಯದಲ್ಲಿ ಜೀವ ಹಾನಿ ಆಗಿದೆ. ಮಕ್ಕಳು ಪೋಷಕರನ್ನ ಕಳೆದುಕೊಂಡಿದ್ದಾರೆ. ಅಂತಹ ಮಕ್ಕಳ ಬೆಂಬಲ ಹಾಗೂ ಸಹಾಯ ಮಾಡುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಅದರಂತೆ ಕೋವಿಡ್‌ನಿಂದ ಪೋಷಕರಿಬ್ಬರನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ಯೋಜನೆ ಘೋಷಣೆ ಮಾಡಲಾಗಿದೆ ಎಂದು ಸಿಎಂ ಬಿಎಸ್​ವೈ ತಿಳಿಸಿದರು.

    ಇದನ್ನು ಓದಿ: ಕೋವಿಡ್​ನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ 10 ಲಕ್ಷ ಘೋಷಿಸಿದ ಕೇಂದ್ರ ಸರ್ಕಾರ

    ಬಿಎಸ್​ವೈ ಅನಾಥ ಮಕ್ಕಳಿಗೆ ಘೋಷಿಸಿದ ಯೋಜನೆಗಳು

    • ಮಕ್ಕಳಿಗೆ ಮಾಸಿಕ ಮೂರೂವರೆ ಸಾವಿರ ರೂಪಾಯಿ ಪ್ಯಾಕೇಜ್ ಘೋಷಣೆ.

    • ಮಕ್ಕಳನ್ನ ನೋಡಿಕೊಳ್ಳಲು ಯಾರೂ ಇಲ್ಲದಿದ್ರೆ ಪಾಲನಾ ಸಂಸ್ಥೆಯಲ್ಲಿ ಪೋಷಣೆ.

    • ಕಿತ್ತೂರು ರಾಣಿ ಚೆನ್ನಮ್ಮ, ಕಸ್ತೂರಬಾ ಶಾಲೆಗಳ ಮೂಲಕ ಮಕ್ಕಳಿಗೆ ಶಿಕ್ಷಣ.

    • ಹತ್ತನೆ ತರಗತಿ ಪೂರೈಸಿದ ಮಕ್ಕಳಿಗೆ ಲ್ಯಾಪ್ ಟಾಪ್ ಅಥವಾ ಟ್ಯಾಬ್ ವಿತರಣೆ.

    • 21 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ ಒಂದು ಲಕ್ಷ ಸಹಾಯ ಧನ.

    • ಮಾರ್ಗದರ್ಶಕರ ಮೂಲಕ ಸಹಾಯ ನೀಡಲಾಗುವುದು. 


    ಕೇಂದ್ರ ಸರ್ಕಾರ ಕೂಡ ಕೋವಿಡ್​ನಿಂದ ಪೋಷಕರನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ವಿಶೇಷ ಯೋಜನೆಗಳನ್ನು ಘೋಷಿಸಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಮಹತ್ವದ ಸಭೆಯಲ್ಲಿ ಕೋವಿಡ್ ಸಾಂಕ್ರಾಮಿಕದಿಂದ ತೊಂದರೆಗೆ ಸಿಲುಕಿರುವ ಮಕ್ಕಳಿಗಾಗಿ ಪ್ರಧಾನಿ ಮೋದಿ ಅವರು ಕೆಲವು ಪರಿಹಾರ ಕ್ರಮಗಳನ್ನು ಘೋಷಿಸಿದರು. ಮಕ್ಕಳು ದೇಶದ ಭವಿಷ್ಯವನ್ನು ಪ್ರತಿನಿಧಿಸುತ್ತಾರೆ ಮತ್ತು ಮಕ್ಕಳನ್ನು ಬೆಂಬಲಿಸಲು ಮತ್ತು ರಕ್ಷಿಸಲು ದೇಶವು ಎಲ್ಲವನ್ನು ಮಾಡುತ್ತದೆ, ಇದರಿಂದ ಅವರು ಪ್ರಬಲವಾದ ಪ್ರಜೆಗಳಾಗಿ ಬೆಳವಣಿಗೆ ಹೊಂದುತ್ತಾರೆ ಮತ್ತು ಉಜ್ವಲ ಭವಿಷ್ಯ ಪಡೆಯಲಿದ್ದಾರೆ ಎಂದು ಪ್ರಧಾನಿ ಮೋದಿ ಇದೇ ವೇಳೆ ಹೇಳಿದರು.

    ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮ ಮಕ್ಕಳನ್ನು ನೋಡಿಕೊಳ್ಳುವುದು ಮತ್ತು ಉಜ್ವಲ ಭವಿಷ್ಯದ ಭರವಸೆ ಮೂಡಿಸುವುದು ನಮ್ಮ ಕರ್ತವ್ಯ ಎಂದು ಪ್ರಧಾನಿ ಹೇಳಿದರು. ಕೋವಿಡ್ 19 ಕಾರಣದಿಂದಾಗಿ ಪೋಷಕರನ್ನು ಕಳೆದುಕೊಂಡಿರುವ ಅಥವಾ ಉಳಿದಿರುವ ಪೋಷಕರು ಅಥವಾ ಕಾನೂನು ಪಾಲಕರು / ದತ್ತು ಪಡೆದ ಎಲ್ಲ ಮಕ್ಕಳಿಗಾಗಿ ಪ್ರಧಾನಿ ನಿಧಿ ಯೋಜನೆಯಡಿ ಬೆಂಬಲ ನೀಡಲಾಗುವುದು. ಪಿಎಂ ಕೇರ್ ಫಂಡ್ ಭಾರತದಲ್ಲಿ ಕೋವಿಡ್ -19 ವಿರುದ್ಧದ ಸಮಯದಲ್ಲಿ ಎಲ್ಲ ಬೆಂಬಲ ಹಾಗೂ ಕೊಡುಗೆ ನೀಡಲಿದೆ ಎಂದು ಹೇಳಿದರು. ಸಾಂಕ್ರಾಮಿಕ ರೋಗ ಕೋವಿಡ್ ದೇಶದಲ್ಲಿ 577 ಮಕ್ಕಳನ್ನು ಅನಾಥರನ್ನಾಗಿ ಮಾಡಿದೆ. ತಂದೆ- ತಾಯಿ ಕಳೆದುಕೊಂಡ ಆ ಮಕ್ಕಳು ತಮ್ಮ ಹತ್ತಿರದ ಸಂಬಂಧಿಗಳ ಆರೈಕೆಯಲ್ಲಿ ಇದ್ದಾರೆ.
    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    Published by:HR Ramesh
    First published: