ಕಷ್ಟಕಾಲದಲ್ಲಿ ರಾಜ್ಯಕ್ಕೆ ಸಿಗುತ್ತಾ ಕೇಂದ್ರದ ನೆರವು?; ಮೋದಿ ಏರ್ಪಡಿಸಿರುವ ಸಿಎಂ ಗಳ ಸಭೆಯಲ್ಲಿ ಬಾಕಿ ಕೇಳಲಿರುವ ಬಿಎಸ್‌ವೈ

ಇದೀಗ ಕೊರೋನಾ ಸಹ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದ್ದು ವೈದ್ಯಕೀಯ ಪರಿಕರಗಳ ಖರೀದಿಗೆ ಸಾಕಷ್ಟು ಹಣದ ಅಗತ್ಯತೆ ಇದೆ. ಹೀಗಾಗಿ ಪ್ರಧಾನಿ ಮೋದಿ ಜೊತೆಗೆ ಇಂದು ನಡೆಯಲಿರುವ ಮುಖ್ಯಮಂತ್ರಿಗಳ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಜಿಎಸ್‌ಟಿಯಲ್ಲಿ ರಾಜ್ಯದ ಪಾಲನ್ನು ಕೇಳಲಿದ್ದಾರೆ ಎನ್ನಲಾಗುತ್ತಿದೆ.

news18-kannada
Updated:April 2, 2020, 9:10 AM IST
ಕಷ್ಟಕಾಲದಲ್ಲಿ ರಾಜ್ಯಕ್ಕೆ ಸಿಗುತ್ತಾ ಕೇಂದ್ರದ ನೆರವು?; ಮೋದಿ ಏರ್ಪಡಿಸಿರುವ ಸಿಎಂ ಗಳ ಸಭೆಯಲ್ಲಿ ಬಾಕಿ ಕೇಳಲಿರುವ ಬಿಎಸ್‌ವೈ
ಬಿ.ಎಸ್​. ಯಡಿಯೂರಪ್ಪ ಮತ್ತು ನರೇಂದ್ರ ಮೋದಿ. (ಸಂಗ್ರಹ ಚಿತ್ರ)
  • Share this:
ಬೆಂಗಳೂರು (ಏಪ್ರಿಲ್ 02); ಮಾರಣಾಂತಿಕ ಕೊರೋನಾ ವೈರಸ್‌ ಇಡೀ ದೇಶಕ್ಕೆ ಬೆದರಿಕೆ ಒಡ್ಡಿದ್ದು ಇದನ್ನು ತಡೆಯುವ ಹಾಗೂ ಲಾಕ್‌ಡೌನ್ ಕುರಿತು ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ಇಂದು ಬೆಳಗ್ಗೆ 11 ಗಂಟೆಗೆ ಸಿಎಂಗಳ ಸಭೆ ಕರೆದಿದ್ದಾರೆ. ಆದರೆ, ಈ ಸಭೆಯಲ್ಲಿ ಯಡಿಯೂರಪ್ಪ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಬಾಕಿ ಹಣ ಕೇಳಲಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ ರಾಜ್ಯಕ್ಕೆ ಬರ ಮತ್ತು ನೆರೆ ಒಂದರಹಿಂದೊಂದರಂತೆ ಅಪ್ಪಳಿಸಿತ್ತು. ಆದರೆ, ಆ ಸಂದರ್ಭದಲ್ಲಿ ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಿದ್ದ ಯಾವುದೇ ಅನುದಾನಗಳೂ ಸಿಕ್ಕಿರಲಿಲ್ಲ. ಈ ಕುರಿತು ವಿರೋಧ ಪಕ್ಷಗಳು ನಿರಂತರವಾಗಿ ಟೀಕಾ ಪ್ರಹಾರ ನಡೆಸುತ್ತಲೇ ಇವೆ. ಇನ್ನೂ ಜಿಎಸ್‌ಟಿ ತೆರಿಗೆ ಹಣದಲ್ಲೂ ರಾಜ್ಯಕ್ಕೆ ಸಲ್ಲಬೇಕಾದ ರಾಜಸ್ವ ಪಾಲನ್ನು ಕೇಂದ್ರ ಸರ್ಕಾರ ಈ ವರೆಗೆ ನೀಡಿಲ್ಲ. ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಬಜೆ‌ಟ್ ಮಂಡಿಸಿದ ನಂತರ ಸಿಎಂ ಯಡಿಯೂರಪ್ಪ ಮೊದಲ ಬಾರಿಗೆ ಈ ಕುರಿತು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೀಗ ಕೊರೋನಾ ಸಹ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದ್ದು ವೈದ್ಯಕೀಯ ಪರಿಕರಗಳ ಖರೀದಿಗೆ ಸಾಕಷ್ಟು ಹಣದ ಅಗತ್ಯತೆ ಇದೆ. ಹೀಗಾಗಿ ಪ್ರಧಾನಿ ಮೋದಿ ಜೊತೆಗೆ ಇಂದು ನಡೆಯಲಿರುವ ಮುಖ್ಯಮಂತ್ರಿಗಳ ಸಭೆಯಲ್ಲಿ ವಿವಿಧ ರಾಜ್ಯಗಳ 8 ಜನ ಸಿಎಂ ಪಾಲ್ಗೊಳ್ಳಲಿದ್ದು ಯಡಿಯೂರಪ್ಪ ಅವರಿಗೂ ಅವಕಾಶ ಲಭಿಸಿದೆ. ಈ ವೇಳೆ ಬಿಎಸ್‌ವೈ ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ನ್ಯಾಯಯುತ ಪಾಲನ್ನು ಕೇಳುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ನೈಸರ್ಗಿಕ ಅನಿಲಗಳ ಬೆಲೆಯಲ್ಲಿ ಶೇ.26ರಷ್ಟು ಇಳಿಕೆ; 2014ರ ನಂತರ ಭಾರೀ ಪ್ರಮಾಣ ದರ ಕಡಿತಕ್ಕೆ ಮುಂದಾದ ಕೇಂದ್ರ

 
First published:April 2, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading